ಮೊಬೈಲ್ ಪ್ರಿಯರೇ ಇತ್ತ ಗಮನಿಸಿ : ಈ ಮೊಬೈಲ್ ಒಮ್ಮೆ ಚಾರ್ಜ್ ಮಾಡಿದ್ರೆ ನೂರು ದಿನಗಳವರೆಗೆ ಇರೋದೇ ಇಲ್ಲ ಟೆನ್ಷನ್!

Oukitel WP19 smartphone :ಇಂದಿನ ಇಂಟರ್ನೆಟ್ ಯುಗದಲ್ಲಿ ಮೊಬೈಲ್ ಫೋನ್ ಬಳಸದ ಜನರಿಲ್ಲ. ಮೊಬೈಲ್ ಎಂಬುದು ಇಂದಿನ ಯುವಜನತೆಯ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಪ್ರತಿಯೊಬ್ಬರ ಕೈಯಲ್ಲೂ ಇಂದು ಮೊಬೈಲ್ ಕಾಣಿಸಿಕೊಳ್ಳುತ್ತಿದೆ. ಕೆಲವೊಂದಷ್ಟು ಜನ ಎಷ್ಟು ಅಡಿಕ್ಟ್ ಆಗಿರುತ್ತಾರೆ ಅಂದ್ರೆ ಬೆಳಗ್ಗೆಯಿಂದ ಹಿಡಿದು ರಾತ್ರಿವರೆಗೂ ಮೊಬೈಲ್ ನಲ್ಲೆ ನೇತಾಡುತ್ತಿರುತ್ತಾರೆ. ಅದಕ್ಕೆ ಸರಿಯಾಗಿ ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಮಾದರಿಯ ಮೊಬೈಲ್ ಫೋನ್ ಗಳು ಬಿಡುಗಡೆಗೊಳ್ಳುತ್ತಲೇ ಬಂದಿದೆ.

ಹೊಸ ಹೊಸ ಟ್ರೆಂಡ್ ಮೂಲಕ ಈಗೀಗ ಮಾರುಕಟ್ಟೆಗೆ ಬರುತ್ತಿರುವಂತಹ ಎಲ್ಲಾ ಸ್ಮಾರ್ಟ್​​ಫೋನ್​ಗಳು ಉತ್ತಮ ಫೀಚರ್ಸ್​ನೊಂದಿಗೆ, ಬ್ರಹತ್​ ಬ್ಯಾಟರಿ ಗುಣಮಟ್ಟವನ್ನು ಹೊಂದಿರುತ್ತವೆ. ಅಂತಹದೇ ಒಂದು ಸ್ಮಾರ್ಟ್​​ಫೋನ್​ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೌದು. ಈ ಮೊಬೈಲ್ ಗೆ ಒಮ್ಮೆ ಚಾರ್ಜ್ ಮಾಡಿದ್ರೆ ನೂರು ದಿನಗಳವರೆಗೆ ಆರಾಮವಾಗಿ ಬಳಕೆ ಮಾಡಬಹುದು.

ಹಾಂಗ್‌ಕಾಂಗ್ ಮೂಲದ Oukitel ಕಂಪೆನಿ Oukitel WP19 ಎಂಬ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದು ತನ್ನ ಫೀಚರ್ಸ್​ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದೆ. 21000 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ದೈತ್ಯ ಸ್ಮಾರ್ಟ್‌ಫೋನ್ ಒಂದನ್ನು ತಯಾರಿಸಿದ್ದು, ಇದು 21000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರೋಬ್ಬರಿ 100 ದಿನಗಳ ಸ್ಟ್ಯಾಂಡ್‌ಬೈ ಬ್ಯಾಟರಿ ಬ್ಯಾಕಪ್ ನೀಡಲಿದೆ ಎಂದು ಹೇಳಿಕೊಂಡಿದೆ.

ಈ ಸ್ಮಾರ್ಟ್‌ಫೋನಿನಲ್ಲಿ 64MP ಮುಖ್ಯ ಲೆನ್ಸ್ ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು, ಇದು 20MP ನೈಟ್ ವಿಷನ್, 2MP ಮ್ಯಾಕ್ರೊ ಮತ್ತು 4IR ಎಮಿಟರ್ಸ್ ಮೂರು ಲೆನ್ಸ್‌ಗಳನ್ನು ಹೊಂದಿದೆ. ಹಾಂಗ್‌ಕಾಂಗ್ ಮೂಲದ Oukitel ಕಂಪೆನಿ ಪರಿಚಯಿಸಿರುವ ಹೊಸ Oukitel WP19 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು ಕರ್ವ್ ಎಡ್ಜ್‌ಗಳನ್ನು ಹೊಂದಿರುವ ಪ್ರೀಮಿಯಂ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. Oukitel WP19 ಸ್ಮಾರ್ಟ್‌ಫೋನ್​ನ ಡಿಸ್​ಪ್ಲೇ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು 6.78 ಇಂಚಿನ ಫುಲ್ ಹೆಚ್​​ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, ಇದು 90 Hz ರಿಫ್ರೆಶ್ ರೇಟ್ ಸಾಮರ್ಥವನ್ನು ಹೊಂದಿದೆ.

Oukitel WP19 smartphone ಕೇವಲ 269.99 USD ಬೆಲೆಯಲ್ಲಿ ಬಿಡುಗಡೆಯಾಗಿದೆ. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 22 ಸಾವಿರ ರೂ. ಮಾತ್ರ. ನೀವು Oukitel ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕ Oukitel WP19 ಸ್ಮಾರ್ಟ್‌ಫೋನ್ ಖರೀದಿಸಲು ಅವಕಾಶವಿದ್ದರೂ, ಕಂಪೆನಿಯು ಭಾರತಕ್ಕೆ ಡೆಲಿವರಿ ನೀಡಲಿದೆಯಾ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಈ ಸ್ಮಾರ್ಟ್‌ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ ಬರೋಬ್ಬರಿ 21000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ ಮತ್ತು ಕಂಪೆನಿ ಹೇಳಿರುವಂತೆ, ಇದು ಪೂರ್ಣ ಚಾರ್ಜ್‌ನಲ್ಲಿ 2252 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಈ ಮೂಲಕ 94 ದಿನಗಳವರೆಗೆ ಸ್ಮಾರ್ಟ್​ಫೋನ್​ ಅನ್ನು ಬಳಕೆ ಮಾಡಬಹುದು.

Leave A Reply

Your email address will not be published.