ಗಮನಿಸಿ : ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಮುಖ್ಯವಾದ ಮಾಹಿತಿ ನಿಮಗಾಗಿ!
Railway travellers: ರೈಲ್ವೆ ಪ್ರಯಾಣಿಕರು ಗಮನಿಸಬೇಕಾದ ಮುಖ್ಯ ಮಾಹಿತಿ ನೀಡಲಾಗಿದೆ. ಈಗಾಗಲೇ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಈ ನಡುವೆ ಭಾರತೀಯ ರೈಲ್ವೆ (Railway travellers) ಕರ್ನಾಟಕದ ಜನರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಭಾರತೀಯ ರೈಲ್ವೆ ಕರ್ನಾಟಕದ ಜನರಿಗೆ ಪ್ರಯಾಣಿಕರ ರಾಜ್ಯದ ಕೆಲವು ರೈಲು ನಿಲ್ದಾಣಗಳಲ್ಲಿ ಆರು ತಿಂಗಳ ಕಾಲದವರೆಗೆ ಪ್ರಾಯೋಗಿಕ ಆಧಾರದ ಅನುಸಾರ ವಿವಿಧ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಿದೆ. ಹೀಗಾಗಿ, ಕರ್ನಾಟಕದ ಮೂಲಕ ಸಾಗುವ ಹಲವು ರೈಲುಗಳು ವಿವಿಧ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆಗೊಳ್ಳಲಿದೆ.
ನೈಋತ್ಯ ರೈಲ್ವೆ ಯಾವ-ಯಾವ ರೈಲುಗಳನ್ನು ಕರ್ನಾಟಕದಲ್ಲಿ ನಿಲ್ಲಿಸಲು ಅನುವು ಮಾಡಿಕೊಟ್ಟಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ರೈಲುಗಳನ್ನು ಒಂದು ನಿಮಿಷದ ಅವಧಿಗೆ ಮಾತ್ರ ಪ್ರಾಯೋಗಿಕ ಆಧಾರದ ಮೇಲೆ ನಿಲುಗಡೆ ಮಾಡಲು ರೈಲ್ವೆ ಇಲಾಖೆಯು ಒಪ್ಪಿಗೆ ಸೂಚಿಸಿದೆ. ಹೀಗಾಗಿ, ಸಾವಿರಾರು ರೈಲು ಪ್ರಯಾಣಿಕರಿಗೆ ಪ್ರಯೋಜನ ನೀಡಲಿದೆ.
ಧಾರವಾಡ-ಬೆಳಗಾವಿ ನಡುವೆ ವಿಶೇಷ ರೈಲು ವೇಳಾಪಟ್ಟಿ ಹೀಗಿದೆ:
ಮಂಗಳೂರು-ಮುಂಬೈ, ಮುಂಬೈ-ಮಂಗಳೂರು ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲನ್ನು ಬಾರ್ಕೂರಿನಲ್ಲಿ ನಿಲುಗಡೆ ಮಾಡಬೇಕು ಎಂಬ ಉಡುಪಿ, ಚಿಕ್ಕಮಗಳೂರು ಭಾಗದ ಜನರ ಹಲವು ದಿನದ ಬೇಡಿಕೆಗೆ ಕೊನೆಗೂ ರೈಲ್ವೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ರೈಲುಗಳ ಪಟ್ಟಿ ರೈಲು ಸಂಖ್ಯೆ 17317 ಎಸ್. ಎಸ್. ಎಸ್. ಹುಬ್ಬಳ್ಳಿ-ದಾದರ್ ಮತ್ತು 17318 ದಾದರ್- ಎಸ್. ಎಸ್. ಎಸ್. ಹುಬ್ಬಳ್ಳಿ, ರೈಲು ಸಂಖ್ಯೆ 22497 ಶ್ರೀ ಗಂಗಾನಗರ-ತಿರುಚ್ಚಿರಾಪ್ಪಲ್ಲಿ ಮತ್ತು 22498 ತಿರುಚ್ಚಿರಾಪ್ಪಲ್ಲಿ ಶ್ರೀ ಗಂಗಾನಗರ್ ರೈಲು ಚಿಕ್ಕೋಡಿ ರೋಡ್ ನಿಲ್ದಾಣದಲ್ಲಿ ಒಂದು ನಿಮಿಷ ನಿಲ್ಲಲ್ಲಿದೆ.
ಕಲಬುರಗಿ-ಬೀದರ್ ನಡುವೆ ಹೊಸ ರೈಲು; ವೇಳಾಪಟ್ಟಿ
ರೈಲು ಸಂಖ್ಯೆ 17415 ತಿರುಪತಿ-ಸಿ. ಎಸ್. ಎಮ್. ಟಿ ಕೊಲ್ಲಾಪುರ ಮತ್ತು 17416 ಸಿ. ಎಸ್. ಎಮ್. ಟಿ. ಕೊಲ್ಲಾಪುರ-ತಿರುಪತಿ ರೈಲು ಉಗಾರ ಖುರ್ದ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಿದೆ. ರೈಲು ನಂಬರ್ 16217 ಮೈಸೂರು- ಸಾಯಿ ನಗರ್ ಶಿರಡಿ ರೈಲು ಮತ್ತು 16218 ಸಾಯಿ ನಗರ್ ಶಿರಡಿ-ಮೈಸೂರು ರೈಲು ಇಂಡಿ ರೋಡ್‌ನಲ್ಲಿ ನಿಲ್ಲಲಿದೆ. ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಮತ್ತು 17308 ಬಾಗಲಕೋಟೆ-ಮೈಸೂರು ರೈಲು ಇಬ್ರಾಹಿಂಪುರ ಹಾಲ್ಟ್‌ನಲ್ಲಿ ನಿಲುಗಡೆಗೊಳ್ಳಲಿದೆ.
ಧಾರವಾಡ-ಬೆಳಗಾವಿ ನಡುವೆ ವಿಶೇಷ ರೈಲು, ವೇಳಾಪಟ್ಟಿ
ಮಂಗಳೂರು-ಮುಂಬೈ, ಮುಂಬೈ-ಮಂಗಳೂರು ನಡುವೆ ಸಂಚಾರ ನಡೆಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲನ್ನು ಬಾರ್ಕೂರಿನಲ್ಲಿ ನಿಲುಗಡೆ ಮಾಡಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಇದಕ್ಕೆ ಈಗ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಇದರಿಂದಾಗಿ ಉಡುಪಿ, ಚಿಕ್ಕಮಗಳೂರು ಭಾಗದ ಜನರ ಬಹುದಿನ ಬೇಡಿಕೆ ಈಡೇರಿದಂತಾಗಿದೆ.
ರೈಲುಗಳ ಪಟ್ಟಿ ರೈಲು ಸಂಖ್ಯೆ 17317 ಎಸ್. ಎಸ್. ಎಸ್. ಹುಬ್ಬಳ್ಳಿ-ದಾದರ್ ಮತ್ತು 17318 ದಾದರ್- ಎಸ್. ಎಸ್. ಎಸ್. ಹುಬ್ಬಳ್ಳಿ, ರೈಲು ಸಂಖ್ಯೆ 22497 ಶ್ರೀ ಗಂಗಾನಗರ-ತಿರುಚ್ಚಿರಾಪ್ಪಲ್ಲಿ ಮತ್ತು 22498 ತಿರುಚ್ಚಿರಾಪ್ಪಲ್ಲಿ ಶ್ರೀ ಗಂಗಾನಗರ್ ರೈಲು ಚಿಕ್ಕೋಡಿ ರೋಡ್ ನಿಲ್ದಾಣದಲ್ಲಿ ಒಂದು ನಿಮಿಷ ನಿಲ್ಲಲ್ಲಿದೆ.
ರೈಲು ನಂಬರ್ 14805 ಯಶವಂತಪುರ-ಬಾರ್ಮೇರ್ ಮತ್ತು 14806 ಬಾರ್ಮೇರ್-ಯಶವಂತಪುರ ರೈಲು ಬೀರೂರಿನಲ್ಲಿ ನಿಲ್ಲಲಿದೆ. ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋ-ಡ-ಗಾಮ ಮತ್ತು 17310 ವಾಸ್ಕೋ-ಡ-ಗಾಮ-ಯಶವಂತಪುರ ರೈಲನ್ನು ಕಡೂರಿನಲ್ಲಿ ನಿಲ್ಲಿಸಲು ಅನುವು ಮಾಡಿಕೊಡಲಾಗಿದೆ.
ರೈಲು ನಂಬರ್ 16220 ತಿರುಪತಿ-ಚಾಮರಾಜನಗರ ರೈಲು ಕಾಮಸಮುದ್ರಂನಲ್ಲಿ ನಿಲುಗಡೆಗೊಳ್ಳಲಿದೆ. ರೈಲು ಸಂಖ್ಯೆ 17303 ಎಸ್. ಎಸ್. ಎಸ್. ಹುಬ್ಬಳ್ಳಿ-ಕಾರಟಗಿ ಮತ್ತು 17304 ಕಾರಟಗಿ-ಎಸ್. ಎಸ್. ಎಸ್. ಹುಬ್ಬಳ್ಳಿ ರೈಲನ್ನು ಬನ್ನಿಕೊಪ್ಪದಲ್ಲಿ ನಿಲ್ಲಿಸಲು ಅವಕಾಶ ನೀಡಲಾಗಿದೆ. ರೈಲು ನಂಬರ್ 17209 ಎಸ್. ಎಂ. ವಿ. ಟಿ ಬೆಂಗಳೂರು-ಕಾಕಿನಾಡ ಟೌನ್ ಮತ್ತು 17210 ಕಾಕಿನಾಡ ಟೌನ್- ಎಸ್. ಎಂ. ವಿ. ಟಿ. ಬೆಂಗಳೂರು ರೈಲನ್ನು ಟೇಕಲ್ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ರೈಲು ಸಂಖ್ಯೆ 22678 ಕೊಚುವೆಲಿ-ಯಶವಂತಪುರ ರೈಲನ್ನು ಬಂಗಾರಪೇಟೆಯಲ್ಲಿ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.