Affordable Laptop : ನಿಮ್ಮ ಕೈಗೆಟಕುವ ದರದಲ್ಲಿ ಸಿಗಲಿದೆ ಈ ಅದ್ಭುತ ಲ್ಯಾಪ್‌ಟಾಪ್‌!

PRIMEBOOK 4G : ಮೊಬೈಲ್( Mobile) ಎಂಬ ಮಾಯಾವಿ ಈಗ ಬಹುತೇಕರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ಅಷ್ಟೆ ಅಲ್ಲದೇ, ಇಂದು ಪ್ರತಿ ಕೆಲಸ ಕಾರ್ಯಕ್ಕೂ ಲ್ಯಾಪ್ ಟಾಪ್(Laptop) ಅವಶ್ಯಕವಾಗಿದೆ. ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ದು, ಇದಕ್ಕೆ ಲ್ಯಾಪ್ ಟಾಪ್ ಕೂಡ ಹೊರತಲ್ಲ. ಹೀಗಾಗಿ, ಬೆಲೆ ಹೆಚ್ಚಳ ದಿಂದ ಲ್ಯಾಪ್ ಟಾಪ್ ಹೇಗಪ್ಪಾ ಖರೀದಿ ಮಾಡೋದು? ಎಂದು ಯೋಚಿಸುತ್ತಿದ್ದೀರಾ!! ಹಾಗಿದ್ರೆ ಬಿಡಿ ಟೆನ್ಶನ್!! ನಿಮಗಿದೆ ಗುಡ್ ನ್ಯೂಸ್.

ಕೋರೋನಾ ಎಂಬ ಮಹಾಮಾರಿ ಎಂಟ್ರಿ ಕೊಟ್ಟ ಮೇಲೆ ವರ್ಕ್ ಫ್ರಮ್ (Work From Home)ಅನ್ನೋ ಆಪ್ಷನ್ ಬಂದು ಇದರ ಜೊತೆಗೆ ಮನೆಯೊಳಗೆ ಬಂಧಿಯಾಗಿ ಆನ್ಲೈನ್ ಫುಡ್ ಆರ್ಡರ್, ಆನ್ಲೈನ್ ನಲ್ಲೆ ಎಲ್ಲ ಕೆಲ್ಸ ಕಾರ್ಯಗಳನ್ನು ಮಾಡುವ ಹಾಗೆ ಆಗಿದ್ದು ಇದಲ್ಲದೆ ವಿದ್ಯಾರ್ಥಿಗಳಿಗೂ (Students) ಆನ್ಲೈನ್ ಕ್ಲಾಸ್(Online Class)ಶುರುವಾದ ಮೇಲೆ,ಹೆಚ್ಚಿನವರು ಲ್ಯಾಪ್ ಟಾಪ್ ಬಳಕೆ ಮಾಡುತ್ತಿರೋದು ಗೊತ್ತಿರುವ ವಿಚಾರವೇ. ಹೀಗಿರುವಾಗ, ದುಬಾರಿ ಬೆಲೆಯಲ್ಲಿ ಲ್ಯಾಪ್ ಟಾಪ್ ಕೊಂಡುಕೊಳ್ಳುವ ಕನಸು ಕನಸಾಗಿಯೇ ಉಳಿದಿದೆಯೇ? ನೀವು ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು ಉತ್ತಮ ಅವಕಾಶ. ಹೇಗೆ ಅಂತೀರಾ? ಇನ್ನೊಂದು ವಾರದಲ್ಲಿ ಅದ್ಭುತ ವೈಶಿಷ್ಟ್ಯಗಳೊಂದಿಗೆ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಹೌದು!! ಪ್ರೈಮ್‌ಬುಕ್ 4G (PRIMEBOOK 4G) ಎಂಬುದು ಆಂಡ್ರಾಯ್ಡ್ ಲ್ಯಾಪ್‌ಟಾಪ್ ಆಗಿದ್ದು, ಇದು ಜನಪ್ರಿಯ ರಿಯಾಲಿಟಿ ಶೋ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಕಂಡು ಬಂದಿದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು ಈ ಲ್ಯಾಪ್‌ಟಾಪ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿಗಳ ಜೊತೆಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾರ್ಚ್ 11 ರಂದು ಪ್ರೈಮ್‌ಬುಕ್ 4G ಲ್ಯಾಪ್‌ಟಾಪ್ ಭಾರತದಲ್ಲಿ ಬಿಡುಗಡೆಗೆ ರೆಡಿಯಾಗಿದೆ.

ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ನೀಡುವ ನಿಟ್ಟಿನಲ್ಲಿ ಈ ಲ್ಯಾಪ್ ಟಾಪ್ ಪರಿಚಯಿಸಲು ಮುಂದಾಗಿದ್ದು, ಪ್ರೈಮ್‌ಬುಕ್ 4G ಮೀಡಿಯಾ ಟೆಕ್ MT8788 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. 64GB ಸಂಗ್ರಹಣೆಯ ಸಾಮರ್ಥ್ಯ (200GB ವರೆಗೆ ವಿಸ್ತರಿಸಬಹುದು ಒಳಗೊಂಡಿದೆ. ಪ್ರೈಮ್‌ಬುಕ್ 4G ಹಗುರವಾಗಿದ್ದು, ಇದರ ವಿಶೇಷತೆ ಏನು ಎಂದು ನೀವು ಕೇಳಿದರೆ,ನಿಮ್ಮ ಸ್ಮಾರ್ಟ್ಫೋನ್ ರೀತಿ ಎಲ್ಲಿ ಬೇಕಾದರೂ ಸುಲಭವಾಗಿ ಒಯ್ಯಬಹುದು. ಸದ್ಯ, ಫೋನ್ ಮತ್ತು ಟ್ಯಾಬ್ಲೆಟ್‌ಗಳ ಬೆಲೆಯಲ್ಲಿ ಲ್ಯಾಪ್‌ಟಾಪ್‌ಗಳು ದೊರೆಯಲಿವೆ.

ಪ್ರೈಮ್‌ಬುಕ್ 4ಜಿ (PRIMEBOOK 4G)ವಿಶೇಷತೆ ಗಮನಿಸಿದರೆ:
ಈ ಲ್ಯಾಪ್ ಟಾಪ್ ನಲ್ಲಿ 10 ಸಾವಿರಕ್ಕೂ ಹೆಚ್ಚು ಆಂಡ್ರಾಯ್ಡ್ ಆಪ್ ಗಳು ಲಭ್ಯವಿದ್ದು ಹಲವು ವಿಂಡೋಗಳನ್ನು ಏಕಕಾಲದಲ್ಲಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.ಇದು ಪ್ರೈಮ್‌ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 11 ಆಧಾರಿತ ಬ್ರ್ಯಾಂಡ್‌ನ ಸ್ವಂತ ಆಪರೇಟಿಂಗ್ ಸಿಸ್ಟಮ್ ಆಗಿದೆ. ಇದರ ಜೊತೆಗೆ 200 ಕ್ಕೂ ಹೆಚ್ಚು ಶೈಕ್ಷಣಿಕ ಅಪ್ಲಿಕೇಶನ್‌ಗಳನ್ನು ಒಳಗೊಂಡಿದ್ದು, ಪ್ರೈಮ್‌ಬುಕ್ 4G ವೈರ್‌ಲೆಸ್ ಸಿಮ್ ಕಾರ್ಡ್‌ನೊಂದಿಗೆ ಬರಲಿದ್ದು, ಇಂಟರ್ನೆಟ್‌ಗೆ ಸುಲಭವಾಗಿ ಸಂಪರ್ಕ ಕಲ್ಪಿಸಲಾಗುತ್ತದೆ.

ಪ್ರೈಮ್‌ಬುಕ್ 4G ಬೆಲೆ 16,990 ರೂ. ಆಗಿದ್ದು, ಆದರೆ, ಕೊಡುಗೆ ಮೂಲಕ, ಬಳಕೆದಾರರು ಈ ಸಾಧನವನ್ನು ಫ್ಲಿಪ್‌ಕಾರ್ಟ್‌ನಲ್ಲಿ 14,990 ರೂಪಾಯಿಗಳ ರಿಯಾಯಿತಿ ದರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅಷ್ಟೆ ಅಲ್ಲದೇ, ಮತ್ತೊಂದು ಬಂಪರ್ ಆಫರ್ ನಿಮಗಾಗಿ ಎದುರು ನೋಡುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ನೀವು ನೋ ಕಾಸ್ಟ್ ಇಎಂಐ ಸೌಲಭ್ಯದೊಂದಿಗೆ ಲಭ್ಯವಾಗಲಿದೆ.

Leave A Reply

Your email address will not be published.