Maruti Car: 5 ಸಾವಿರ ಕೊಟ್ಟು ಈ ಕಾರನ್ನು ಮನೆಗೆ ತನ್ನಿ!
Maruti car :ಎಷ್ಟೋ ದಿನಗಳಿಂದ ಕಾರು ಕೊಂಡುಕೊಳ್ಳಬೇಕೆಂಬ ನಿಮ್ಮ ಕನಸನ್ನು ನನಸು ಮಾಡಲು ನಿಮಗಾಗಿ ಮಾರುತಿ ಸುಜುಕಿ ಒಳ್ಳೆಯ ಅವಕಾಶ ಒಂದನ್ನು ನೀಡಿದೆ.
ಹೌದು ಕೇವಲ ನಿಮ್ಮ ಬಳಿ 5 ಸಾವಿರ ಇದ್ದಲ್ಲಿ ನೀವು ಕಾರು(Maruti car )ಖರೀದಿ ಮಾಡಬಹುದಾಗಿದೆ.
ಮಾರುತಿ ಸುಜುಕಿ ಕಳೆದ ವರ್ಷ ಆಗಸ್ಟ್‌ನಲ್ಲಿ 2022 ಮಾರುತಿ ಸುಜುಕಿ ಆಲ್ಟೊ ಕೆ 10 ಮಾದರಿಯನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಈ ಕಾರಿನ ಆರಂಭಿಕ ಬೆಲೆ ಕೇವಲ ರೂ.3.99 ಲಕ್ಷ ಆಗಿದೆ.
ಮುಖ್ಯವಾಗಿ ಮಾರುತಿ ಸುಜುಕಿ ಆಲ್ಟೊ ಕೆ10 ಕಾರಿನ ಖರೀದಿದಾರರಿಗೆ ಆಕರ್ಷಕ EMI ಆಯ್ಕೆಗಳಿವೆ. ನೀವು ಈ ಕಾರನ್ನು ಅತ್ಯಂತ ಕಡಿಮೆ EMI ಯೊಂದಿಗೆ ಹೊಂದಬಹುದು. ನೀವು ಮಾರುತಿ ಸುಜುಕಿ ಆಲ್ಟೊ ಕೆ10 ಕಾರನ್ನು ಕೇವಲ ರೂ.5,000 ಇಎಂಐ ಮೂಲಕ ನಿಮ್ಮ ಮನೆಗೆ ತರಬಹುದು. ಗ್ರಾಹಕರು ರೂ.1,35,000 ಮುಂಗಡ ಪಾವತಿಯನ್ನು ಪಾವತಿಸಬೇಕು. ಉಳಿದ ಮೊತ್ತಕ್ಕೆ ನೀವು 7 ವರ್ಷಗಳ ಸಾಲದ ಆಯ್ಕೆಯನ್ನು ಆರಿಸಿದರೆ, ನೀವು ಪಾವತಿಸಬೇಕಾದ EMI ಕೇವಲ ರೂ.5,000 ಆಗಿದೆ. ಡೌನ್ ಪೇಮೆಂಟ್ (down payment )ಹೆಚ್ಚಾದಷ್ಟೂ ಇಎಂಐ ಕಡಿಮೆಯಾಗುತ್ತದೆ.
ಮಾರುತಿ ಸುಜುಕಿ ಆಲ್ಟೊ ಕೆ10 ವೈಶಿಷ್ಯತೆ ಈ ಕೆಳಗಿನಂತಿದೆ :
ಸದ್ಯ ಆಲ್ಟೊ ಕೆ10 ಮೊದಲ ಬಾರಿಗೆ ಇಂಪ್ಯಾಕ್ಟೊ ಮತ್ತು ಗ್ಲಿಂಟೊ ವೈಯಕ್ತೀಕರಣ ಥೀಮ್‌ಗಳೊಂದಿಗೆ ಬರುತ್ತದೆ. 2022 ಆಲ್ಟೊ ಕೆ10 ಹಿಂದಿನ ಸೆಲೆರಿಯೊ ಮಾದರಿಯಲ್ಲಿ ಕಂಡುಬರುವ ಹಾರ್ಟೆಕ್ಟ್ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ಮುಂಭಾಗವು ಹೊಸ ಪೆಪ್ಪಿ ಹೆಡ್‌ಲ್ಯಾಂಪ್‌ಗಳು, ಡೈನಾಮಿಕ್ ಮಾದರಿಯ ಗ್ರಿಲ್‌ನೊಂದಿಗೆ ಆಕರ್ಷಕವಾಗಿದೆ. ಡಿಜಿಟಲ್ ಸ್ಪೀಡೋಮೀಟರ್ ಡಿಸ್ಪ್ಲೇ, ಇನ್ಸ್ಟ್ರುಮೆಂಟ್ ಪ್ಯಾನೆಲ್, ರಿಮೋಟ್ ಕೀಲೆಸ್ ಎಂಟ್ರಿ, ಸ್ಟೀರಿಂಗ್ ಮೌಂಟೆಡ್ ಆಡಿಯೊ ವಾಯ್ಸ್ ಕಂಟ್ರೋಲ್‌ಗಳು, 7-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಿದೆ.
ಇನ್ನು ಡ್ಯುಯಲ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ವಿತರಣೆಯೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಸೇರಿವೆ. ಜೊತೆಗೆ ಕೆ ಸಿರೀಸ್ 1.0 ಲೀಟರ್ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್ ಇದೆ.
ಮುಖ್ಯವಾಗಿ ಆಲ್ಟೊ ಕೆ10 ಮಾದರಿಯು 5 ಸ್ಪೀಡ್ ಎಎಟಿ ಗೇರ್ ಬಾಕ್ಸ್, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿದೆ. ಮೈಲೇಜ್ ವಿಚಾರದಲ್ಲಿ ಮ್ಯಾನುವಲ್ ಮಾಡೆಲ್ ಪ್ರತಿ ಲೀಟರ್ ಗೆ 24.39 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿ ಪ್ರತಿ ಲೀಟರ್ ಗೆ 24.90 ಕಿ.ಮೀ ಮೈಲೇಜ್ ಪಡೆಯುತ್ತದೆ.
ಗ್ರಾಹಕರಿಗೆ (customer) 2022 ಆಲ್ಟೊ ಕೆ10 ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸಿಜ್ಲಿಂಗ್ ರೆಡ್, ಪ್ರೀಮಿಯಂ ಅರ್ಥ್ ಗೋಲ್ಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಸ್ಪೀಡಿ ಬ್ಲೂ, ಸಾಲಿಡ್ ವೈಟ್ ಬಣ್ಣಗಳಲ್ಲಿ ಲಭ್ಯವಿದ್ದು, ಈ ಕಾರು ಖರೀದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಅದಲ್ಲದೆ 2022 ಮಾರುತಿ ಸುಜುಕಿ ಆಲ್ಟೊ K10 Std, Lxi, Vxi, Vxi AMT, Vxi+, Vxi+ AMT ರೂಪಾಂತರಗಳಲ್ಲಿ ಲಭ್ಯವಿದೆ.