Ramnagara: ವೇದಿಕೆ ಮೇಲೆ ಮುದ್ದಾಗಿ ಕಿತ್ತಾಡಿದ ಕುಮಾರಣ್ಣ ಮತ್ತು ಅನಿತಕ್ಕ! ವೈರಲ್ ಆಯ್ತು ಕ್ಯೂಟ್ ಜಗಳದ ವಿಡಿಯೋ!
Kumaraswamy :ರಾಜಕೀಯ(Political) ವಲಯದಲ್ಲಿ ಗಂಡ ಹೆಂಡತಿ ಇಬ್ಬರೂ ಸಕ್ರಿಯವಾಗಿರೋದು ತುಂಬಾ ವಿರಳ. ಆದರೂ ನಮ್ಮ ರಾಜ್ಯ ರಾಜಕೀಯದಲ್ಲಿ ಇಂತಹ ಕೆಲವು ದಂಪತಿಗಳನ್ನು ಕಾಣಬಹುದು. ಅದರಲ್ಲೂ ನಮ್ಮ ಮಾಜಿ ಮುಖ್ಯಮಂತ್ರಿ ಕುಮಾರಣ್ಣ(Kumaraswamy) ಮತ್ತು ಅನಿತಾ ಕುಮಾರಸ್ವಾಮಿ(Anita Kumaraswamy)ಅವರ ಜೋಡಿಯೇ ಭಾರೀ ಫೇಮಸ್ಸು. ಸದ್ಯ ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಮುದ್ದಾಗಿ ಕಿತ್ತಾಡಿದ ದೃಶ್ಯ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ(Social Media)ವೈರಲ್ ಆಗಿದ್ದು, ನೋಡುಗರೆಲ್ಲರೂ ತುಟಿಬಿಚ್ಚಿ ನಗುವಂತೆ ಮಾಡಿದೆ.
ರಾಮನಗರ(Ramanagara) ಜಿಲ್ಲಾ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದ ಸಮಯದಲ್ಲಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಮುದ್ದು ಮುದ್ದಾಗಿ ಕಿತ್ತಾಡಿದ್ದಾರೆ. ಈ ಕ್ಯೂಟ್ ಕ್ಯೂಟ್ ವಿಡಿಯೋ ಎಲ್ಲೆಡೆ ಹರಿದಾಡಿದ್ದು, ಕುಮಾರಣ್ಣ ಹಾಗೂ ಅನಿತಕ್ಕನ ಜಗಳ ನೋಡಿ ಜನರು ಮುಕದಲ್ಲಿ ನಗು ತರಿಸಿಕೊಂಡು ಬಗೆ ಬಗೆಯಾಗಿ ಕಮೆಂಟಿಸಿದ್ದಾರೆ.
ವೇದಿಕೆಯಲ್ಲಿ ಇಬ್ಬರೂ ಅಕ್ಕ ಪಕ್ಕ ಕುಳಿತಿದ್ದು, ಕುಮಾರಸ್ವಾಮಿ ಅವರು ಮೊದಲೇ ಯಾವುದೋ ವಿಚಾರಕ್ಕೆ ಸಣ್ಣಗೆ ಸಿಟ್ಟು ಮಾಡಿಕೊಂಡಿದ್ರು ಕಾಣ್ತದೆ. ಅದೇ ಹುಸಿ ಸಿಟ್ಟಲ್ಲಿ ಅನಿತಕ್ಕಂಗೆ ಏನೋ ಹೇಳ್ತಿದ್ದಾರೆ. ಅನಿತಕ್ಕನೂ ಕೋಪದಲ್ಲಿ ಮಾತನಾಡಿ ಮುಂದೆ ಕ್ಯಾಮೆರಾ ಇರೋದು ನೋಡಿ ಸಮ್ಮನಾಗ್ತಾರೆ. ಆದ್ರೂ ಕುಮಾರಸ್ವಾಮಿ ಏನೋ ಹೇಳಲು ಹೋದಾಗಾ, ಅಯ್ಯೋ ಸುಮ್ನಿರ್ರೀ ನಿಮ್ದೊಂದು ಎಂದು ಕ್ಯೂಟ್ ಆಗಿ ಸನ್ನೆ ಮಾಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಒಟ್ಟಿನಲ್ಲಿ ಈ ಜೋಡಿಯ ಕ್ಯೂಟ್ ಜಗಳ ಜನರಿಗೆ ಬಲು ಇಷ್ಟವಾಗಿದೆ ಅನ್ಬೋದು.
ಕಮೆಂಟ್ ಬಾಕ್ಸ್, ಹಲವಾರು ನಗುವ ಹಾಗೂ ಹಾರ್ಟಿನ ಇಮೋಜಿಗಳಿಂದ ತುಂಬಿ ಹೋಗಿವೆ. ಒಬ್ಬರು ‘ಕುಮಾರಣ್ಣ ರಾಜ್ತಕ್ಕೆ ಸಿಎಂ ಆಗಿದ್ರೂ ತನ್ನ ಹೆಂಡತಿಗೆ ಗಂಡನೇ ಅಲ್ವೇ? ಎಂದಿದ್ದಾರೆ. ಇನ್ಬೊಬ್ರೂ ಮಾಜಿ ಸಿಎಂ ಗೆ ಹೆಂಡತಿ ಕ್ಲಾಸ್ ತಗೋತಾರೆ ಅಂದ್ರೆ ಮನೆಯಲ್ಲಿ ನಾವ್ಯಾವ ಲೆಕ್ಕ, ಅಲ್ವಾ? ಎಂದಿದ್ದಾರೆ. ಮತ್ತೊಬ್ಬರು ಮುಖ್ಯಮಂತ್ರಿ ಆದವರಿಗೂ ಹೆಂಡತಿ ಬೈಗುಳ ತಪ್ಪಿದ್ದಲ್ಲ ಎಂದಿದ್ದಾರೆ.
https://www.facebook.com/reel/1393667028046762