Army Agniveer Apply Online : ಮಂಗಳೂರು : ಅಗ್ನಿಪಥ ಯೋಜನೆಯ ಅಗ್ನಿವೀರರ ಹುದ್ದೆಗಳು, ಹೆಚ್ಚಿನ ಮಾಹಿತಿ ಇಲ್ಲಿದೆ!

Army Agniveer Apply Online : 2023-24ನೇ ಸಾಲಿಗೆ ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕಾತಿಗೆ ಭಾರತೀಯ ಮಿಲಿಟರಿಯು ವಿವಿಧ ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ನೇಮಕಾತಿ ಪರೀಕ್ಷೆ, ನೇಮಕಾತಿ ರ‍್ಯಾಲಿ ನಡೆಸಲು ಮುಂದಾಗಿದೆ. ರಾಜ್ಯದಲ್ಲಿ ಬೆಂಗಳೂರು ಹಾಗೂ ಮಂಗಳೂರು ಮಿಲಿಟರಿ ಸಿಬ್ಬಂದಿ ನೇಮಕ ಕಛೇರಿಗಳು ಕೂಡ ಅಗ್ನಿವೀರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
2023-24 ನೇ ಸಾಲಿನ ಅಗ್ನಿವೀರರ ನೇಮಕಾತಿಗೆ( Army Agniveer Apply Online)ಅರ್ಜಿ ಆಹ್ವಾನಿಸಿದ್ದು, ಮಂಗಳೂರು ಮಿಲಿಟರಿ ಸಿಬ್ಬಂದಿ ನೇಮಕಾತಿ ಕಚೇರಿ ಹಾಗೂ ಬೆಂಗಳೂರು ಮಿಲಿಟರಿ ಸಿಬ್ಬಂದಿ ನೇಮಕಾತಿ ಕೇಂದ್ರ ಕಛೇರಿಗಳು ಪ್ರಕಟಣೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಏಪ್ರಿಲ್ ತಿಂಗಳಲ್ಲಿ ಆನ್‌ಲೈನ್ ಪರೀಕ್ಷೆ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಖಾಲಿ ಹುದ್ದೆಗಳು, ವೇತನದ ಬಗ್ಗೆ ಮಾಹಿತಿ ಅರಿತಿರುವುದು ಅವಶ್ಯಕ.
ಹುದ್ದೆಯ ಹೆಸರು : ಅಗ್ನಿಪಥ ಯೋಜನೆಯ ಅಗ್ನಿವೀರರ ಹುದ್ದೆಗಳು(Army Agniveer Apply Online)
ನೇಮಕಾತಿ ಪ್ರಾಧಿಕಾರ : ಮಂಗಳೂರು, ಬೆಂಗಳೂರು ಆರ್ಮಿ ನೇಮಕಾತಿ ಕೇಂದ್ರಗಳು
ಅಗ್ನಿವೀರರು ಹುದ್ದೆ ವಿಭಾಗವಾರು ಶೈಕ್ಷಣಿಕ ಅರ್ಹತೆಗಳು(ಎಲ್ಲಾ ರಕ್ಷಣಾ ಪಡೆಗಳು) ಹೀಗಿವೆ:
ಅಗ್ನಿವೀರ್ (ಜೆನೆರಲ್ ಡ್ಯೂಟಿ) : 10ನೇ ತರಗತಿ ಪಾಸ್ ಆಗಿರಬೇಕು.
ಅಗ್ನಿವೀರ್ (ಟೆಕ್ನಿಕಲ್) : ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಆಗಿರಬೇಕು.
ಅಗ್ನಿವೀರ್ (ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್) : ಯಾವುದೇ ಸ್ಟ್ರೀಮ್‌ನಲ್ಲಿ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.
ಅಗ್ನಿವೀರ್ (ಟ್ರೇಡ್ಸ್‌ಮನ್) : 8ನೇ ತರಗತಿ, 10ನೇ ತರಗತಿ ಪಾಸ್ ಮಾಡಿರಬೇಕು.
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು 15-03-2023 ಕೊನೆ ದಿನಾಂಕವಾಗಿದೆ. ಮಂಗಳೂರು ಆರ್ಮಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ ಆನ್‌ಲೈನ್ ಪರೀಕ್ಷೆ 17-04-2023 ನಡೆಯಲಿದೆ. ಬೆಂಗಳೂರು ಆರ್ಮಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ 12-04-2023 ಆನ್‌ಲೈನ್ ಪರೀಕ್ಷೆ ನಡೆಯಲಿದೆ.
ವಯೋಮಿತಿ:(Age Limits)
ಕನಿಷ್ಠ ವಯೋಮಿತಿ: 17 ವರ್ಷ 06 ತಿಂಗಳು.
ಗರಿಷ್ಠ ವಯೋಮಿತಿ : 21 ವರ್ಷ ಮೀರಿರಬಾರದು.
ಅಭ್ಯರ್ಥಿಗಳು ದಿನಾಂಕ 01-08-2002 ಮತ್ತು 01-04-2006 ರ ನಡುವೆ ಜನಿಸಿರಬೇಕು.
ನೇಮಕಾತಿ ಪ್ರಕ್ರಿಯೆ:
ನೇಮಕಾತಿ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ ನಡೆಯಲಿದ್ದು, ಎರಡನೇ ಹಂತದಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ.
ಮಂಗಳೂರು ಆರ್ಮಿ ನೇಮಕಾತಿ ಕೇಂದ್ರಕ್ಕೆ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯವರು ನೇಮಕಾತಿ ರ‍್ಯಾಲಿಗೆ ಭಾಗವಹಿಸಬೇಕಾಗುತ್ತದೆ. ಬೆಂಗಳೂರು ಆರ್ಮಿ ನೇಮಕಾತಿ ಕೇಂದ್ರಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಲಾಪುರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಅಭ್ಯರ್ಥಿಗಳು ನೇಮಕಾತಿ ರ‍್ಯಾಲಿಗೆ ಹಾಜರಾಗಬೇಕಾಗುತ್ತದೆ.
ಅಗ್ನಿವೀರರಿಗೆ ವೇತನ, ಭತ್ಯೆಗಳು
ಅಗ್ನಿವೀರರಿಗೆ ವೇತನ ಮೊದಲನೇ ವರ್ಷ ರೂ.30,000 ಜತೆಗೆ ಇತರೆ ಭತ್ಯೆಗಳು ಲಭ್ಯವಾಗುತ್ತದೆ.
ಅಗ್ನಿ ವೀರರಿಗೆ ಎರಡನೇ ವರ್ಷ ರೂ.33,000 ಜತೆಗೆ ಇತರೆ ಭತ್ಯೆಗಳು ದೊರೆಯುತ್ತವೆ.
ಮೂರನೇ ವರ್ಷ ರೂ.36,500 ಜತೆಗೆ ಇತರೆ ಭತ್ಯೆಗಳು ಲಭ್ಯವಾಗುತ್ತವೆ.
ನಾಲ್ಕನೇ ವರ್ಷ ರೂ.40,000 ಜತೆಗೆ ಇತರೆ ಭತ್ಯೆಗಳು ದೊರೆಯುತ್ತವೆ.
ಏರ್‌ಫೋರ್ಸ್ ಅಗ್ನಿವೀರ್ ಹುದ್ದೆಯಿಂದ ನಿವೃತ್ತಿ ಪಡೆದ ಸಂದರ್ಭದಲ್ಲಿ ಸೇವಾನಿಧಿ ಪ್ಯಾಕೇಜ್ – 10.04 ಲಕ್ಷ ರೂ ಅಭ್ಯರ್ಥಿಗೆ ಲಭ್ಯವಾಗುತ್ತದೆ.
ಅರ್ಹ ಅಭ್ಯರ್ಥಿಗಳು 15-03-2023 ಕೊನೆ ದಿನಾಂಕದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.