IRCTC : ಐಆರ್ ಸಿಟಿಸಿಯಿಂದ ಅಂಡಮಾನ್ ಪ್ರವಾಸ, 6 ದಿನಗಳ ಟೂರ್ ಪ್ಯಾಕೇಜ್, ಹೆಚ್ಚಿನ ಮಾಹಿತಿ ಇಲ್ಲಿದೆ!

IRCTC Andaman tour :ಆರಾಮವಾಗಿ ರಾಜಾದಿನ ಕಳೆಯಲು ತಂಪಾದ (cool) ಮತ್ತು ವಿಶಾಲವಾದ ಸ್ಥಳವನ್ನು ಆಯ್ಕೆ (select) ಮಾಡುತ್ತೇವೆ ಜೊತೆಗೆ ಪ್ರಕೃತಿ ಸೊಬಗನ್ನು ಆನಂದಿಸಲು ಬಯಸುತ್ತೇವೆ. ಅದರಲ್ಲೂ ಬೀಚ್ ಸ್ಥಳವಾದ ಅಂಡಮಾನ್ ಐಲ್ಯಾಂಡ್ ಇಷ್ಟಪಡುವುದು ಸಹಜ. ಯಾಕೆಂದರೆ ಅಂಡಮಾನ್ ಸುಂದರವಾದ ಕರಾವಳಿ ಪ್ರದೇಶವಾಗಿದೆ. ಸೊಬಗಾದ ಕಾಡಿನ (forest )ನೋಟವನ್ನು ನೋಡಲು ಬಯಸುವವರಿಗೆ ಅಂಡಮಾನ್ ಅತ್ಯದ್ಭುತ ಸ್ಥಳವಾಗಿದೆ.
ಸದ್ಯ ನೀವು ಅಂಡಮಾನ್ ಐಲ್ಯಾಂಡ್ ಸ್ಥಳಕ್ಕೆ ಭೇಟಿ ನೀಡಲು ಬಯಸಿದ್ದರೆ ಇಲ್ಲಿದೆ ಸಿಹಿ ಸುದ್ದಿ. ಹೌದು ಐಆರ್‌ಸಿಟಿಸಿಯ(IRCTC )ವತಿಯಿಂದ ಆಫರ್ ನೀಡಲಾಗುತ್ತಿದೆ. ಇಂಡಿಯನ್ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) 6 ದಿನಗಳ 5 ರಾತ್ರಿಗಳ ವಿಮಾನಯಾನ ಪ್ಯಾಕೇಜ್ ಅನ್ನು ನೀಡುತ್ತಿದೆ.
ಈ ಪ್ಯಾಕೇಜ್ ಪ್ರಕಾರ ಪ್ರಯಾಣವು (travel ) ದೆಹಲಿಯಲ್ಲಿ ಮೊದಲು ಆರಂಭವಾಗಲಿದೆ. ಈ ಪ್ಯಾಕೇಜ್‌ನ ಹೆಸರು ‘ಅಮೇಜಿಂಗ್ ಅಂಡಮಾನ್ ಎಕ್ಸ್ ದೆಲ್ಲಿ’ (IRCTC Andaman tour) ಎಂದಾಗಿದೆ. ಈ ಪ್ಯಾಕೇಜ್ ಅಡಿಯಲ್ಲಿ ಮಾರ್ಚ್ 13 ಮತ್ತು ಮಾರ್ಚ್ 27ರಂದು ಅಂಡಮಾನ್ ಪ್ರವಾಸ ಮಾಡಬಹುದು.
ಸದ್ಯ ಮುಂಜಾನ್ 5:50ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ವಿಮಾನ ಪ್ರಯಾಣ ಆರಂಭವಾಗಲಿದೆ. ಪೋರ್ಟ್ ಬ್ಲೇರ್‌ಗೆ 11 ಗಂಟೆಗೆ ತಲುಪಲಿದೆ. ಅಲ್ಲಿಂದ ಪ್ರಯಾಣ ಮುಂದುವರಿಯುತ್ತದೆ. ಪ್ರವಾಸಿಗರ ಸಂಖ್ಯೆಯ ಆದಾರದಲ್ಲಿ ಪ್ರವಾಸದ ಪ್ಯಾಕೇಜ್ ನಿರ್ಧಾರವಾಗುತ್ತದೆ. ಈ ಪ್ರವಾಸದ ಟಿಕೆಟ್ ದರವು ಪ್ರತಿ ವ್ಯಕ್ತಿಗೆ 53,500 ರೂಪಾಯಿ ಆಗಿದೆ.
ಮೂರು ಜನರು ಜೊತೆಯಾಗಿ ಪ್ರಯಾಣ ಮಾಡುವುದಾದರೆ ಪ್ರತಿ ಒಬ್ಬ ವ್ಯಕ್ತಿಗೆ 53,500 ರೂಪಾಯಿ ಟಿಕೆಟ್ ಇರಲಿದೆ. ಒಬ್ಬರಿಗೆ ಮಾತ್ರ ಪ್ರಯಾಣ ದರವು, ತಲಾ 54,500 ರೂಪಾಯಿ ಆಗುತ್ತದೆ. ಓರ್ವ ವ್ಯಕ್ತಿ ಪ್ರವಾಸ ಮಾಡುವುದಾದರೆ ಪ್ಯಾಕೇಜ್ 67,100 ರೂಪಾಯಿ ಆಗಿರುತ್ತದೆ. 5-11 ವರ್ಷದವರೆಗಿನ ಮಕ್ಕಳಿಗೆ ಬೆಡ್ ಸೇರಿದಂತೆ 48,900 ರೂಪಾಯಿ ಪ್ಯಾಕೇಜ್ ಆಗಿದೆ. ಬೆಡ್ ಇಲ್ಲದೆ, 46,800 ರೂಪಾಯಿ ಆಗಿದೆ. 2-4 ವರ್ಷದ ಮಕ್ಕಳಿಗೆ ಬೆಡ್ ಇಲ್ಲದೆ 35,200 ರೂಪಾಯಿ ಪ್ಯಾಕೇಜ್ ದರವಾಗಿದೆ.
ಪ್ಯಾಕೇಜ್‌ನಲ್ಲಿ ನೀವು ಗೋ ಫಸ್ಟ್ ಏರ್‌ಲೈನ್ಸ್ ವಿಮಾನ ಟಿಕೆಟ್ (ದೆಹಲಿ – ಪೋರ್ಟ್ ಬ್ಲೇರ್ ಮತ್ತು ಪೋರ್ಟ್ ಬ್ಲೇರ್ – ದೆಹಲಿ) ಮೂಲಕ ಎಸಿ ರೂಮ್‌ನಲ್ಲಿ ಉತ್ತಮ ವಸತಿ ವ್ಯವಸ್ಥೆ (ಪೋರ್ಟ್ ಬ್ಲೇರ್‌ನಲ್ಲಿ ಮೂರು ರಾತ್ರಿ, ನೇಲ್‌ನಲ್ಲಿ ಒಂದು ರಾತ್ರಿ, ಹಾವ್‌ಲಾಕ್‌ನಲ್ಲಿ ಒಂದು ರಾತ್ರಿ) ಇನ್ನು ಎಸಿ ವಾಹನದಲ್ಲಿ ಪ್ರವಾಸ ಮತ್ತು ಸುತ್ತಮುತ್ತಲಿನ ವಾತಾವರಣ ನೋಡುವ ಅವಕಾಶ ಇದೆ. ಜೊತೆಗೆ ಹೋಟೆಲ್‌ನಲ್ಲಿ ಊಟ ತಿಂಡಿ ವ್ಯವಸ್ಥೆ, 5 ಬಾರಿ ತಿಂಡಿ, 5 ಡಿನ್ನರ್ ವ್ಯವಸ್ಥೆ, ಜೊತೆಗೆ ಸಮುದ್ರಯಾಣ, ಸೆಲ್ಯೂಲರ್ ಜೈಲ್, ಚಥಾಮ್ ಮಿಲ್, ಸಮುದ್ರಿಕಾ ನವಲ್ ಮೆರೈನ್ ಮ್ಯೂಸಿಯಂನ ಪ್ರವೇಶ ಶುಲ್ಕ ಮತ್ತು ಜಿಎಸ್‌ಟಿ ಹಾಗೂ ಇತರೆ ತೆರಿಗೆಗಳು ಕೂಡಾ ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗಿದ್ದು ನೀವು ಪ್ಯಾಕೇಜ್ ದರ ಹೊರತು ಯಾವುದೇ ಶುಲ್ಕವನ್ನು ಕಟ್ಟಬೇಕಾಗಿಲ್ಲ.
ಮುಖ್ಯವಾಗಿ ಅಮೇಜಿಂಗ್ ಅಂಡಮಾನ್ ಎಕ್ಸ್ ದೆಲ್ಲಿ ಪ್ಯಾಕೇಜ್ ಮೂಲಕ ನೀವು ಅದ್ಭುತ ಸ್ಥಳಗಳಾದ ಪೋರ್ಟ್ ಬ್ಲೇರ್, ಹಾವ್‌ಲಾಕ್ ಐಸ್‌ಲ್ಯಾಂಡ್, ನೇಲ್, ನಾರ್ತ್ ಬೇ, ರಾಸ್ ಐಸ್‌ಲ್ಯಾಂಡ್ ಮುಂತಾದ ಕಡೆಗೆ ಭೇಟಿ ನೀಡಬಹುದು.