Sushmita Sen: ನಟಿ ಸುಶ್ಮಿತಾ ಸೇನ್​ಗೆ ಹೃದಯಾಘಾತ;

Sushmita Sen :  ಸುಶ್ಮಿತಾ ಸೇನ್ ಎಂಬ ಹೆಸರು ಇತ್ತೀಚಿನ ದಿನದಲ್ಲಿ ಎಲ್ಲರಿಗೂ ಚಿರಪರಿಚಿತ. ಮಾಜಿ ವಿಶ್ವಸುಂದರಿಯಾಗಿ ಗುರುತಿಸಿಕೊಂಡ ಸುಶ್ಮಿತಾ ಸೇನ್ (Sushmita Sen) ಅವರಿಗೆ ಹೃದಯಾಘಾತ (Heart Attack) ಆಗಿದೆ ಎಂದು ತಿಳಿದುಬಂದಿದೆ.

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರಿಗೆ ಕೆಲ ದಿನಗಳ ಹಿಂದೆ ಹೃದಯಾಘಾತ (Heart Attack) ಆಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಈ ಬಗ್ಗೆ ಸ್ವತಃ ಸುಶ್ಮಿತಾ ಸೇನ್​ (Sushmita Sen) ಅವರು ತಡವಾಗಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ಆಘಾತಕಾರಿ ಮಾಹಿತಿ ಕೇಳಿ ಸುಶ್ಮಿತಾ ಸೇನ್ ಅವರ ಅಭಿಮಾನಿಗಳು ಅಚ್ಚರಿಗೊಳಗಾಗಿ ಆತಂಕ ವ್ಯಕ್ತಪಡಿಸಿದ್ದಾರೆ. ಅತೀ ಸಣ್ಣ ಹರೆಯದಲ್ಲೇ ನಟಿಗೆ ಹೃದಯಾಘಾತ ಆಗಿರುವ ಹಿನ್ನೆಲೆ ಬೇರೇನಾದರೂ ಸಮಸ್ಯೆ ಇದೆಯೇ ಎಂಬ ಕಳವಳ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ನಾವು ಹಿಂದಿ ಚಿತ್ರರಂಗದ ಹಿರಿಯ ನಟಿಯ ಬಗ್ಗೆ ಮಾತನಾಡಿದರೆ, ಅದರಲ್ಲಿ ಸುಶ್ಮಿತಾ ಸೇನ್ ಹೆಸರು ಖಂಡಿತ ಕೇಳಲ್ಪಡುತ್ತದೆ. ಆದರೆ ಈ ಸಮಯದಲ್ಲಿ ಸುಶ್ಮಿತಾ ಸೇನ್ ಬಗ್ಗೆ ದೊಡ್ಡ ಸುದ್ದಿ ಕೇಳಿ ಬರುತ್ತಿದೆ. ಕೆಲ ದಿನಗಳ ಹಿಂದೆ ತನಗೆ ಮೊದಲ ಹೃದಯಾಘಾತವಾಗಿತ್ತು ಎಂದು ಸುಶ್ಮಿತಾ ಸೇನ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಸುಶ್ಮಿತಾ ಸೇನ್ ಅವರ ಈ ಪೋಸ್ಟ್ ಕಾಣಿಸಿಕೊಂಡ ತಕ್ಷಣ ವೈರಲ್ ಆಗಿದೆ.

ಸುಶ್ಮಿತಾ ಸೇನ್ ಗೆ ಹೃದಯಾಘಾತ

ಗುರುವಾರ, ಸುಶ್ಮಿತಾ ಸೇನ್ ತನ್ನ ಅಧಿಕೃತ Instagram ಹ್ಯಾಂಡಲ್‌ನಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಇನ್‌ಸ್ಟಾ ಪೋಸ್ಟ್‌ನಲ್ಲಿ, ಸುಶ್ಮಿತಾ ಸೇನ್ ತನ್ನ ತಂದೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದ ಶೀರ್ಷಿಕೆಯಲ್ಲಿ, ಸುಶ್ಮಿತಾ ಸೇನ್ ಹೀಗೆ ಬರೆದಿದ್ದಾರೆ- ‘ನನ್ನ ತಂದೆ ಸುಬೀರ್ ಸೇನ್ ಅವರ ಕೆಲವು ಮಾತುಗಳು, ನಿಮ್ಮ ಹೃದಯವನ್ನು ಸಂತೋಷದಿಂದ ಮತ್ತು ಧೈರ್ಯದಿಂದ ಇಟ್ಟುಕೊಳ್ಳಿ ಮತ್ತು ನಿಮಗೆ ಅಗತ್ಯವಿರುವಾಗ ಅದು ಯಾವಾಗಲೂ ನಿಮ್ಮೊಂದಿಗೆ ನಿಲ್ಲುತ್ತದೆ. ಕೆಲವು ದಿನಗಳ ಹಿಂದೆ ನನಗೆ ಹೃದಯಾಘಾತವಾಗಿತ್ತು, ನಂತರ ಆಂಜಿಯೋಪ್ಲಾಸ್ಟಿ ಮಾಡಿ ಸ್ಟೆಂಟ್ ಅಳವಡಿಸಲಾಯಿತು ಮತ್ತು ಮುಖ್ಯವಾಗಿ ನನ್ನ ಹೃದಯ ತಜ್ಞರು ನನ್ನ ಹೃದಯ ದೊಡ್ಡದಾಗಿದೆ ಎಂದು ಹೇಳಿದ್ದಾಗಿ ಬರೆದುಕೊಂಡಿದ್ದಾರೆ.

‘ಸರಿಯಾದ ಸಮಯದಲ್ಲಿ ಅವರ ಸಹಾಯ ಮತ್ತು ಬೆಂಬಲಕ್ಕಾಗಿ ನಾನು ಅನೇಕ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಹಿತೈಷಿಗಳಿಗೆ ಮತ್ತು ಪ್ರೀತಿಪಾತ್ರರಿಗೆ ಈ ಒಳ್ಳೆಯ ಸುದ್ದಿಯೊಂದಿಗೆ ನಾನು ತಿಳಿಸಲು ಬಯಸುತ್ತೇನೆ, ಎಲ್ಲವೂ ಉತ್ತಮವಾಗಿದೆ ನಾನು ನಿಮ್ಮೆಲ್ಲರನ್ನೂ ಇನ್ನೂ ತುಂಬಾ ಪ್ರೀತಿಸುತ್ತೇನೆʼ ಎಂದು ಕೂಡಾ ಬರೆದಿದ್ದಾರೆ.

 

View this post on Instagram

 

A post shared by Sushmita Sen (@sushmitasen47)

Leave A Reply

Your email address will not be published.