Interesting Fact: ಈ ದೇಶದಲ್ಲಿ ಲೈಂಗಿಕತೆ ಮಾಡೋದು ಕೂಡ ಅಪರಾಧ! ಬೆತ್ತಲಾಗಬೇಕು ಅನ್ನೋ ಕಾರಣಕ್ಕೆ ಇಲ್ಲಿ ಸ್ನಾನಾನೂ ಮಾಡಲ್ಲ!

Physical relationship: ದಾಂಪತ್ಯದ ಜೀವನ ನೆಮ್ಮದಿಯಿಂದ ಇರಬೇಕಾದರೆ ಅದರಲ್ಲಿ ದೈಹಿಕ ಸಂಬಂಧವೂ ಅತಿ ಮುಖ್ಯ. ಲೈಂಗಿಕ ಕ್ರಿಯೆಯ (Physical relationship) ಮೂಲಕ ಗಂಡ-ಹೆಂಡತಿ ಮುಕ್ತ ಮನಸ್ಥಿತಿಗಳನ್ನು ಹೊಂದೋ ಮೂಲಕ ಅನ್ಯೋನ್ಯತೆ ಜೀವನ ಸಾಗಿಸುತ್ತಾರೆ. ಇದರಿಂದ ಸುಂದರವಾದ ಕುಟುಂಬ ಬೆಳೆಯುತ್ತದೆ. ಇದು ಸಂಸಾರಸ್ಥರ ಬದುಕಿನಲ್ಲಿ ಸರ್ವೇ ಸಾಮಾನ್ಯ. ಆದರೆ ಈ ಲೈಂಗಿಕ ಕ್ರಿಯೆಯನ್ನು ಮಹಾ ಪಾಪವೆಂದು ಪರಿಗಣಿಸಿರುವ ದೇಶವೊಂದಿದೆ ಅಂದ್ರೆ ನೀವು ನಂಬ್ತೀರಾ? ನಂಬಲೇ ಬೇಕು ಬಿಡಿ. ಹಾಗಿದ್ರೆ ಯಾವುದು ಆ ದೇಶ, ಅವರ್ಯ್ಯಾಕೆ ದೈಹಿಕವಾಗಿ ಸುಖ ಪಡೋದನ್ನ ವಿರೋಧಿಸ್ತಾರೆ? ಅವರ ಸಂಪ್ರದಾಯಗಳಾದ್ರೂ ಏನು ಗೊತ್ತಾ?

ಇದು ವಿಚಿತ್ರ ಎನಿಸಿದರೂ ಸತ್ಯ. ಐರ್ಲೆಂಡ್(Ireland), ಹೆಸರು ಯಾರು ಕೇಳಿಲ್ಲ ಹೇಳಿ? ವಾಯುವ್ಯ ಯುರೋಪ್‌(Europe)ನಲ್ಲಿರುವ ಇದು ವಿಶ್ವದ ಅತ್ಯಂತ ಸುಂದರವಾದ ದೇಶಗಳಲ್ಲಿ ಒಂದು. ಅಲ್ಲದೆ ಇದರ ಬಹುತೇಕ ಭಾಗಗಳು ಸಮುದ್ರದ ಮಧ್ಯದಲ್ಲಿವೆ. ಅನೇಕ ರೀತಿಯ ಬುಡಕಟ್ಟು ಜನಾಂಗದವರು (Tribal people)ಇಲ್ಲಿ ವಾಸಿಸುತ್ತಾರೆ. ಅವರ ಸಂಪ್ರದಾಯಗಳು ಸಹ ವಿಭಿನ್ನವಾಗಿವೆ. ಅದರಲ್ಲಿ ಒಂದು ಬುಡಕಟ್ಟು ಜನಾಂಗದಲ್ಲಿ ಗಂಡ-ಹೆಂಡತಿ ಒಟ್ಟಿಗೆ ಸೇರುವುದೇ ಇಲ್ಲಿನವರ ಪ್ರಕಾರ ಅಪರಾದವಂತೆ.

ಹೌದು, ಐರ್ಲೆಂಡ್‌ನ ‘ಇನಿಸ್ ಬೇಗ್'(Enis Beg) ದ್ವೀಪದಲ್ಲಿ ವಾಸಿಸುವ ಬುಡಕಟ್ಟು ಜನರು ವಿಚಿತ್ರವಾದ ನಿಯಮಗಳನ್ನು ಹೊಂದಿದ್ದಾರೆ. ಇಲ್ಲಿನ ಜನರು ತಮ್ಮ ಸಂಪ್ರದಾಯಗಳ ಬಗ್ಗೆ ಅಗಾಧವಾದ ನಂಬಿಕೆ ಉಳ್ಳವರು. ಈ ಇನಿಸ್ ಬೇಗ್‌ನಲ್ಲಿ ವಾಸಿಸುವ ಜನರೇ ದೈಹಿಕ ಸಂಬಂಧವನ್ನು ಕೆಟ್ಟದ್ದೆಂದು ಪರಿಗಣಿಸುವವರು. ಇಲ್ಲಿ ವಿವಾಹಿತ ದಂಪತಿಗಳು (Couple) ಮಗುವನ್ನು ಹೊಂದಲು ಬಯಸಿದಾಗ ಮಾತ್ರ ದೈಹಿಕವಾಗಿ ಒಂದಾಗುತ್ತಾರೆ.

ಇನ್ನೂ ವಿಚಿತ್ರವೆಂದರೆ ಅವರು ಸಂಭೋಗ ನಡೆಸುವಾಗ ಬೆತ್ತಲೆ ಆಗುವಂತಿಲ್ಲ! ಮೈಮೇಲೆ ಬಟ್ಟೆಗಳನ್ನು ಹೊಂದಿಯೇ ಭೋಗಿಸಬೇಕು. ಅದನ್ನು ಸಣ್ಣ ಒಂದು ಕೆಲಸದ ರೀತಿ ತಕ್ಷಣ ಮುಗಿಸಿಬಿಡುತ್ತಾರಂತೆ. ಕೆಲಸವಾದ ಬಳಿಕ ಇಬ್ಬರೂ ಒಂದೊಂದು ಮೂಲೆಗೆ ಹೋಗಿ ಮಲಗಬೇಕಂತೆ. ಅದೂ ಕೂಡ ಮಗುವಾದ ನಂತರ ದೈಹಿಕ ಸಂಪರ್ಕವನ್ನು ಇಟ್ಟುಕೊಳ್ಳುವಂತಿಲ್ಲ. ಹಾಗೇನಾದರೂ ಮಾಡಿದರೆ ಅದನ್ನು ಪಾಪವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರೊಂದಿಗೆ ಅಥವಾ ತಮ್ಮ ಮಡದಿಯೊಂದಿಗೆ ನಿರಂತರವಾಗಿ ದೈಹಿಕ ಸಂಬಂಧವನ್ನು ಹೊಂದುವುದು, ಅವರ ಮೇಲೆ ನಡೆಸುವ ದಬ್ಬಾಳಿಕೆ ಎಂದು ಈ ಬುಡಕಟ್ಟು ಜನಾಂಗದವರ ನಂಬಿಕೆಯಂತೆ.

ಇನ್ನು ಈ ದ್ವೀಪದಲ್ಲಿ ಮದುವೆಗೂ ಮುನ್ನ ರೊಮ್ಯಾನ್ಸ್(Romance) ಮಾಡುವುದು ಕೂಡ ತಪ್ಪಂತೆ! ಮದುವೆ ನಂತರವೂ ಭೋಗಿಸೋ ಹಾಗಿಲ್ಲ ಅಂದಮೇಲೆ ಮೊದಲೇ ರೊಮ್ಯಾನ್ಸ್ ಮಾಡುವಂತಿಲ್ಲ ಅನ್ನೋದ್ರಲ್ಲಿ ಆಶ್ಚರ್ಯವೇನಿಲ್ಲ ಬಿಡಿ. ಆದ್ರೆ ಹಸ್ತಮೈಥುನ ಮಾಡೋದು ಕೂಡ ಅಪರಾದವಂತೆ!, ಚುಂಬನ (Kiss) ಮತ್ತು ಸಲಿಂಗಕಾಮ(Lesbian)ವನ್ನೂ ಇಲ್ಲಿ ನಿಷೇಧಿಸಲಾಗಿದೆ. ಯಾರಾದರೂ ಹಾಗೆ ಮಾಡುತ್ತಿರುವುದು ಕಂಡು ಬಂದರೆ ಅವರಿಗೆ ತಕ್ಕ ಶಿಕ್ಷೆಯಾಗುತ್ತದೆ.

ಇದೆಲ್ಲ ಬಿಡಿ ಹೋಗಲಿ, ಇನ್ನೂ ಆಶ್ಚರ್ಯ ಏನಂದ್ರೆ ಬಟ್ಟೆ ಬಿಚ್ಚಬೇಕು, ಬೆತ್ತಲೆಯಾಗಬೇಕು ಅನ್ನೋ ಒಂದೇ ಒಂದು ಕಾರಣಕ್ಕೆ ಈ ಜನ ಸ್ನಾನನೇ ಮಾಡೋದಿಲ್ವಂತೆ! ಹೌದು, ಕೃಷಿ, ಪಶುಪಾಲನೆ ಮತ್ತು ಸಮುದ್ರ ಮೀನುಗಳನ್ನು ನಂಬಿ ಬದುಕುವ ಇಲ್ಲಿನ ಜನರು ಎಂದಿಗೂ ಬೆತ್ತಲೆಯಾಗಿರುವುದಿಲ್ಲ. ತಮ್ಮ ಕೈ, ಕಾಲು ಮತ್ತು ಮುಖವನ್ನು ನೀರಿನಿಂದ ಮಾತ್ರ ತೊಳೆಯುತ್ತಾರೆ.

Leave A Reply

Your email address will not be published.