ಚಲಿಸುತ್ತಿದ್ದ ರೈಲು ಬಡಿದು ಆರೋಗ್ಯ ಇಲಾಖೆಯ ಸಿಬ್ಬಂದಿ ಮೃತ್ಯು

Kasaragodu  : ಕಾಸರಗೋಡು: ಚಲಿಸುತ್ತಿದ್ದ ರೈಲು ಬಡಿದು ಆರೋಗ್ಯ ಇಲಾಖೆಯ ಸಿಬ್ಬಂದಿಯೋರ್ವರು ಮೃತಪಟ್ಟ ಬಗ್ಗೆ ವರದಿಯಾಗಿದೆ.

 

ಕೇರಳದ ಕಾಸರಗೋಡು (Kasaragodu) ಜಿಲ್ಲೆಯ ಉಪ್ಪಳ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

ನೀಲೇಶ್ವರ ದೇವನ್ ಆರ್ಟ್ಸ್ ನ ವಿಪಿನ್ ರವರ ಪತ್ನಿ,ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಪಿ. ಐಶ್ವರ್ಯ (27) ಮೃತ ಪಟ್ಟವರು. ಇವರು ಬುಧವಾರ ಸಂಜೆ ಕೆಲಸ ಮುಗಿಸಿ ನೀಲೇಶ್ವರ ದಲ್ಲಿರುವ ಮನೆಗೆ ತೆರಳಲು ಉಪ್ಪಳ ರೈಲು ನಿಲ್ದಾಣ ಸಮೀಪ ಹಳಿ ದಾಟುತ್ತಿದ್ದಾಗ ರೈಲು ಬಡಿದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಘಟನೆ ಕುರಿತಂತೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

Leave A Reply

Your email address will not be published.