Beauty News: ಇಲ್ಲಿದೆ ನೋಡಿ ಜಗತ್ತಿನ ಅತಿ ದುಬಾರಿ ನೈಲ್ ಪಾಲಿಶ್! ಈ ‘ಬ್ಲಾಕ್ ಡೈಮಂಡ್ ಕಿಂಗ್’ ಬೆಲೆಯಲ್ಲಿ ನೀವು ಮನೆ ಖರೀದಿಸಬಹುದು!

Black diamond king :ಸೌಂದರ್ಯ ಪ್ರಿಯ ಹುಡುಗಿಯರು, ತಮ್ಮ ಸೌಂದರ್ಯ ಹೆಚ್ಚಿಸಲು ಬಳಸುವ ಅಲಂಕಾರಿಕ ವಸ್ತುಗಳ ಪೈಕಿ ನೇಲ್ ಪಾಲಿಶ್(Nail Polish) ಕೂಡ ಒಂದು. ಹುಡುಗಿಯರ ವ್ಯಾನಿಟಿ ಬ್ಯಾಗ್(Vanity Bag) ನಲ್ಲಿ ಒಂದು ನೇಲ್ ಪಾಲಿಶ್ ಇಲ್ಲ ಅಂದ್ರೆ ಅದನ್ನು ನಂಬೋದು ಸಾಧ್ಯವಿಲ್ಲ. ಅಂದಹಾಗೆ ಸಮಾನ್ಯವಾಗಿ ಈ ನೇಲ್ ಪಾಲಿಶ್ಗಳ ಬೆಲೆ ಎಷ್ಟಿರಬಹುದು ಹೇಳಿ. ಇಪ್ಪತ್ತು, ಮೂವತ್ತು ರೂಪಾಯಿಗಳಿಂದ ಆರಂಭ ಆಗೋ ಇವುಗಳ ಬೆಲೆ ಹೆಚ್ಚೆಂದರೆ 1000ರೂಪಾಯಿ ಇರಬಹುದು ಅಥವಾ ಅದಕ್ಕೂ ಸ್ವಲ್ಪ ಜಾಸ್ತೀನೂ ಇರಬಹುದು. ಆದ್ರೆ ಇಲ್ಲೊಂದು ನೇಲ್ ಪಾಲಿಶ್ ಬೆಲೆ ನಿಮ್ಮ ತಲೆ ತಿರುಗಿಸುತ್ತೆ! ಅಲ್ಲದೆ ಇದು ಜಗತ್ತಿನ ಅತೀ ದುಬಾರಿ ಉಗುರು ಬಣ್ಣ! ಹಾಗಿದ್ರೆ ಅದರ ಬೆಲೆ ಎಷ್ಟಿರಬಹುದು, ಎಲ್ಲಿ ಇದರ ಮಾರಟವಿದೆ ಎಂದು ತಿಳ್ಕೊಳ್ಳೋಣ ಅಲ್ವಾ?

ಹೌದು, ಇಂದು ಜನರ ಬೇಡಿಕೆ (Demand) ಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಕೂಡ ಹಲವಾರು ರೀತಿಯ ನೇಲ್ ಪಾಲಿಶ್ ಗಳು ಲಭ್ಯವಾಗುತ್ತದೆ. ಗುಣಮಟ್ಟ ಮತ್ತು ಗಾತ್ರದ ಅನುಗುಣವಾಗಿ ನೇಲ್ ಪಾಲಿಶ್ ನ ಬೆಲೆ (Price) ಯನ್ನು ಕೂಡ ನಿಗದಿ ಮಾಡಲಾಗುತ್ತದೆ. ಕೈಗೆಟುಕುವ ದರದಲ್ಲಿ ನಮಗೆ ಲಭ್ಯವಾಗೋ ಈ ನೇಲ್ ಪಾಲಿಶ್ ಗಳ ನಡುವೆ ಕೋಟಿ ಕೋಟಿ ಬೆಲೆ ಬಾಳೋ ನೇಲ್ ಪಾಲಿಶ್ ಇದೆ ಅಂದ್ರೆ ನಂಬ್ತೀರಾ? ನಂಬಲೇ ಬೇಕು. ಈ ದುಬಾರಿ ನೇಲ್ ಪಾಲಿಶ್ ಬೆಲೆಯಲ್ಲಿ ನೀವು ಒಂದು ಮನೆಯನ್ನೇ ಖರೀದಿಸಬಹುದು!

ಈ ಬೆಲೆಬಾಳುವ ನೇಲ್ ಪಾಲಿಶ್ ಹೆಸರು ‘ಅಜೇಚರ್'(Ajechar). ಈ ದುಬಾರಿ ಬೆಲೆಯ ನೇಲ್ ಪಾಲಿಶ್ ಅನ್ನು ಲಾಸ್ ಎಂಜೆಲಿಸ್(Laas Enjalis) ನ ವಿನ್ಯಾಸಕ ಎಜೆಟ್ಯೂರ್ ಪೊಗೋಸಿಯನ್(Ejeture Pogosiyan) ಅವರು ತಯಾರಿಸಿದ್ದಾರೆ. ಇದರ ಬೆಲೆಯನ್ನು ನೀವು ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಅಜೇಚರ್ ನೇಲ್ ಪಾಲಿಶ್ ಬೆಲೆ ಬರೋಬ್ಬರಿ 250000 ಡಾಲರ್ ಗಳು. ಅಂದರೆ ಸುಮಾರು 1 ಕೋಟಿ 90 ಲಕ್ಷ ರೂಪಾಯಿಗಳು! ಬೆಲೆ ಬಾಳುವ ವಸ್ತುಗಳನ್ನು ಬಳಸಿ ತಯಾರಿಸಲಾಗುವ ಈ ನೇಲ್ ಪಾಲಿಶ್ ‘ಬ್ಲ್ಯಾಕ್ ಡೈಮಂಡ್ ಕಿಂಗ್’(Black Diamond King)ಎಂದೇ ಪ್ರಖ್ಯಾತಿ ಪಡೆದಿದೆ.

ಇನ್ನು ಇದರ ವಿಶೇಷತೆ ಏನು ಗೊತ್ತಾ? ಸಾಮಾನ್ಯವಾಗಿ ಎಲ್ಲ ನೇಲ್ ಪಾಲಿಶ್ ಗಳನ್ನು ಕೆಲವು ರಾಸಾಯನಿಕಗಳನ್ನು ಬಳಸಿ ತಯಾರಿಸುತ್ತಾರೆ. ಆದರೆ ಈ ದುಬಾರಿ ಬೆಲೆಯ ನೇಲ್ ಪಾಲಿಶ್ ತಯಾರಿಸಲು ಪ್ಲೆಟೆನಿಯಮ್ ಪೌಡರ್ ಮತ್ತು ಡೈಮಂಡ್ ಅನ್ನು ಬಳಸಲಾಗುತ್ತದೆ! ಹಾಗಾಗಿ 267 ಕ್ಯಾರೆಟ್ ಡೈಮಂಡ್ ಅನ್ನು ಈ ನೇಲ್ ಪಾಲಿಶ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇಷ್ಟು ದಿನ ಕುತ್ತಿಗೆಯ ಚೈನ್, ಉಂಗರ, ಬಳೆ, ಕಿವಿಯೋಲೆ ಮುಂತಾದ ಆಭರಣಗಳಲ್ಲಿ ಉಪಯೋಗವಾಗುವ ಡೈಮಂಡ್ ಗಳು ಈಗ ಉಗುರಲ್ಲೂ ಕಾಣಿಸಿಕೊಳ್ಳುತ್ತಿವೆ!

Leave A Reply

Your email address will not be published.