ಶೀಘ್ರದಲ್ಲಿಯೇ ಹೆಚ್ಚಾಗಲಿದೆ ಮೊಬೈಲ್ ಸೇವಾ ಶುಲ್ಕ!

Bharti Airtel : ಟೆಕ್ನಾಲಜಿ ಜಗತ್ತಿನಲ್ಲಿ ಅತೀ ಹೆಚ್ಚು ಕೇಳಿಬರುತ್ತಿರುವ ಪದವೆಂದರೆ ಏರ್ಟೆಲ್. ಅತೀ ವೇಗ ಓಡುತ್ತಿರುವ ಈ ನೆಟವರ್ಕ್ ಪ್ರಪಂಚದಲ್ಲಿ ಭಾರಿ ಸಂಚಲನವನ್ನೇ ಮೂಡಿಸುತ್ತಿದೆ. ಏರ್ಟೆಲ್ (airtel)  ಹೊಸ ಹೊಸ ಯೋಜನೆಗಳನ್ನು ರೂಪಿಸುವುದರ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಲೇ ಬಂದಿದೆ. ಆದರೆ ಇದೀಗ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ನ್ನು ನೀಡಿದೆ.

ಹೌದು. ಭಾರ್ತಿ ಏರ್ಟೆಲ್ (Bharti Airtel) ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ ಮಹತ್ವದ ಮಾಹಿತಿಯೊಂದನ್ನು ತಿಳಿಸಿದ್ದು, ಶೀಘ್ರದಲ್ಲಿಯೇ ಮೊಬೈಲ್ ಸೇವಾ ಶುಲ್ಕಗಳನ್ನು ಎಲ್ಲ ಹಂತಗಳಲ್ಲಿ ಹೆಚ್ಚಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.

ಏರ್ಟೆಲ್ ಇತ್ತೀಚೆಗೆ ಅಷ್ಟೇ ಆರಂಭಿಕ ಹಂತದ ಮೊಬೈಲ್ ಸೇವಾ ಶುಲ್ಕವನ್ನು 155 ರೂಪಾಯಿಗಳಿಗೆ ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಹಂತಗಳಲ್ಲಿಯೂ ಸೇವಾ ಶುಲ್ಕ ಹೆಚ್ಚಳವಾಗಲಿದೆ ಎಂದು ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಪಾಲ್ಗೊಂಡು ಸುನಿಲ್ ಭಾರತಿ ಹೇಳಿದ್ದಾರೆ. ಪ್ರಸ್ತುತ ಹೂಡಿಕೆ ಮಾಡಿದ ಬಂಡವಾಳಕ್ಕೆ ಸಿಗುತ್ತಿರುವ ವರಮಾನ ಅತ್ಯಂತ ಕಡಿಮೆ ಇದೆ. ಹೀಗಾಗಿ ಸೇವಾ ಶುಲ್ಕವನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.

Leave A Reply

Your email address will not be published.