South Korea :ಉತ್ತರ ಕೊರಿಯಾದ ರೂಲ್ಸ್ ಬಗ್ಗೆ ಗೊತ್ತಿದೆ, ಆದ್ರೆ ದಕ್ಷಿಣ ಕೊರಿಯಾದ ಬಗ್ಗೆ ಎಂದಾದ್ರೂ ಕೇಳಿದ್ದೀರಾ? ಇಲ್ಲೂ ಇವೆ ವಿಚಿತ್ರವಾದ ರೂಲ್ ಗಳು!

South korea : ಉತ್ತರ ಕೋರಿಯಾ(North Korea)ಅಂದ್ರೆ ಎಲ್ಲರಿಗೂ ನೆನಪಾಗೋದು, ಅಲ್ಲಿ ತನಗೆ ಮನಬಂದಂತೆ ಆಡಳಿತ ನಡೆಸೋ ಅದರ ಅಧ್ಯಕ್ಷ ಹಾಗೂ ಅಲ್ಲಿನ ಚಿತ್ರ ವಿಚಿತ್ರವಾದ ರೂಲ್ಸ್ ಗಳು. ಇದರ ಬಗ್ಗೆಯಂತೂ ನಾವೀಗಾಗಲೇ ಸಾಕಷ್ಟು ಕೇಳಿರುತ್ತೇವೆ. ಆದ್ರೆ ಅದರ ನೆರೆ ರಾಷ್ಟ್ರ ದಕ್ಷಿಣ ಕೋರಿಯಾ(South Korea) ಬಗ್ಗೆ ನಿಮಗೆ ಗೊತ್ತಾ? ಆ ದೇಶ ಕೂಡ ಇಂತಹ ವಿಚಿತ್ರ ರೂಲ್ಸ್(Rules) ಗಳನ್ನು ಜನರ ಮೇಲೆ ಹೇರೋದ್ರಲ್ಲಿ ಹಿಂದೆ ಬಿದ್ದಿಲ್ಲ. ಹಾಗಾಗಿ ಈ ಉತ್ತರ ಹಾಗೂ ದಕ್ಷಿಣ ಕೋರಿಯಾ ವಿಚಿತ್ರ ದೇಶಗಳು. ಇಲ್ಲಿ ಜಾರಿಯಲ್ಲಿರುವ ಕೆಲ ನಿಯಮ, ಸಂಪ್ರದಾಯಗಳು ಹುಬ್ಬೇರಿಸುವಂತೆ ಮಾಡುತ್ತವೆ. ಉತ್ತರ ಕೊರಿಯಾದ ಬಗ್ಗೆ ನಾವು ಇದಾಗಲೇ ಸಾಕಷ್ಟು ತಿಳ್ಕೊಂಡಿದ್ದೀವಿ. ಹಾಗಾಗಿ ಇಂದು ದಕ್ಷಿಣ ಕೋರಿಯಾದ ಕೆಲವು ಇಂಟ್ರೆಸ್ಟಿಂಗ್ ನಿಯಮಗಳ, ನಂಬಿಕೆಗಳ ಬಗ್ಗೆ ತಿಳ್ಕೊಳ್ಳೋಣ ಬನ್ನಿ.

ಹುಟ್ಟಿದ ತಕ್ಷಣ ಮಗುವಿಗಾಗುತ್ತೆ ಒಂದು ವರ್ಷ : ಹೌದು, ಇಲಕ ಮಗು ಹುಟ್ಟಿದ ತಕ್ಷಣ ಅದರ ವಯಸ್ಸನ್ನು ಒಂದು ವರ್ಷವೆಂದು ನಂಬಲಾಗುತ್ತದೆ. ಇಲ್ಲಿ ಕಾನೂನು ಕೂಡ ಅದನ್ನೇ ಹೇಳುತ್ತದೆ. ಇಲ್ಲಿ ಪ್ರತಿಯೊಬ್ಬ ಮನುಷ್ಯನು ತನ್ನ ನೈಜ ವಯಸ್ಸಿಗಿಂತ ಒಂದು ವರ್ಷ ದೊಡ್ಡವನಾಗಿರುತ್ತಾನೆ.

ಒಂದೇ ಸರ್ ನೇಮ್(Surname) ಇರೋರು ಮದುವೆ ಆಗುವಂತಿಲ್ಲ : ದಕ್ಷಿಣ ಕೊರಿಯಾದ ಸಂಪ್ರದಾಯದ ಪ್ರಕಾರ, ಒಂದೇ ಸರ್ ನೇಮ್ ಅಂದ್ರೆ, ಒಂದೇ ರೀತಿಯ ಉಪನಾಮ ಹೊಂದಿರುವ ಜನರು ಮದುವೆಯಾಗಲು ಸಾಧ್ಯವಿಲ್ಲ. ಇಂಥವರು ಮದುವೆಯಾದ್ರೆ ರಕ್ತ ಅಶುದ್ಧವಾಗುತ್ತದೆ ಎಂದು ಇಲ್ಲಿ ನಂಬಲಾಗಿದೆ.

ಪ್ರತಿ ತಿಂಗಳ 14 ನೇ ದಿನಕ್ಕೆ ವಿಶೇಷ ಮಹತ್ವ : ಇಲ್ಲಿ ಪ್ರತಿ ತಿಂಗಳ 14 ನೇ ದಿನವು ರೊಮ್ಯಾಂಟಿಕ್(Romantic) ದಿನವಾಗಿದೆ. ಕೆಲ ತಿಂಗಳ 14ನೇ ದಿನಾಂಕದಂದು ವಿಶೇಷ ಪದ್ಧತಿಗಳನ್ನು ಆಚರಿಸಲಾಗುತ್ತದೆ. ಮಾರ್ಚ್ 14 ರಂದು, ಹುಡುಗರು ಹುಡುಗಿಯರು ಅಥವಾ ಹೆಂಡತಿಗೆ ಉಡುಗೊರೆ ನೀಡ್ಬೇಕು.

ಈ ಸಂಖ್ಯೆ ಅಶುಭ : ದಕ್ಷಿಣ ಕೊರಿಯಾ ಜನರು ಸಂಖ್ಯೆ ನಾಲ್ಕನ್ನು ಅಶುಭವೆಂದು ನಂಬುತ್ತಾರೆ. ಅವರಿಗೆ ನಾಲ್ಕರ ಮೇಲೆ ಭಯ (Fear) ವಿದೆ. ಯಾರೂ ನಾಲ್ಕನ್ನು ಉಚ್ಛರಿಸೋದಿಲ್ಲ. ದಕ್ಷಿಣ ಕೊರಿಯಾದ ಆಸ್ಪತ್ರೆ (Hospital), ಶಾಲೆ, ಕಚೇರಿ ಹೀಗೆ ಯಾವುದೇ ಕಟ್ಟಡದಲ್ಲೂ ನಾಲ್ಕನೇ ಮಹಡಿ ಇರೋದೇ ಇಲ್ಲ.

ಪುರುಷರ ಸೌಂದರ್ಯಕ್ಕೆ ಮಹತ್ವ : ದಕ್ಷಿಣ ಕೋರಿಯಾದಲ್ಲಿ ಪುರುಷರು ತಮ್ಮ ಸೌಂದರ್ಯ(Beauty)ಕ್ಕೆ ಹೆಚ್ಚು ಬೆಲೆ ನೀಡ್ತಾರೆ. ಹಾಗಾಗಿಯೇ ಇಲ್ಲಿನ ಪುರುಷರು ಮೇಕಪ್‌ಗಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಬಿಬಿ ಕ್ರೀಮ್ ಫೌಂಡೇಶನ್ ಅವರ ನೆಚ್ಚಿನ ಸೌಂದರ್ಯ ಉತ್ಪನ್ನವಾಗಿದೆ.

ಮಳೆಯಲ್ಲೂ ಕೆಲಸ : ದಕ್ಷಿಣ ಕೋರಿಯಾದಲ್ಲಿ ಎಷ್ಟೇ ಮಳೆ ಬಂದ್ರೂ ಜನರು ಮನೆಯಲ್ಲಿ ಕುಳಿತುಕೊಳ್ಳುವಂತಿಲ್ಲ. ಅವರು ಕೊಡೆ ಹಿಡಿದು ಕೆಲಸ ಮಾಡ್ಬೇಕು. ಹುಡುಗಿಯರ ತಲೆ ಒದ್ದೆಯಾದ್ರೆ ಶಿಕ್ಷೆಯಾಗುತ್ತದೆ.

ಮುಖ ಮುಚ್ಚಿ ನಗ್ಬೇಕು : ಕೊರಿಯನ್ ಹುಡುಗಿಯರು ನಗುವಾಗ ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕು. ಕೊರಿಯಾದ ಇತಿಹಾಸದ ಪ್ರಕಾರ, ಹುಡುಗಿಯರು ನಗುವುದು ಒಳ್ಳೆಯದಲ್ಲ, ಆದ್ದರಿಂದ ಹುಡುಗಿಯರು ಅಲ್ಲಿ ನಗುವಾಗ ಬಾಯಿ ಮುಚ್ಚಿಕೊಳ್ಳಬೇಕು.

ಚಿಕ್ಕ ಸರ್ಟ್ – ಕಂಬಳಿ ಖಾಯಂ : ಇಲ್ಲಿನ ಹುಡುಗಿಯರು ಕುಳಿತುಕೊಳ್ಳುವಾಗ ತೊಡೆ ಮೇಲೆ ಕಂಬಳಿ ಹಾಕಿಕೊಳ್ತಾರೆ. ಇದಕ್ಕೆ ಕಾರಣ ಚಳಿಯಲ್ಲ. ಅವರು ಹಾಕುವ ಚಿಕ್ಕ ಸ್ಕರ್ಟ್. ದಕ್ಷಿಣ ಕೋರಿಯಾ ಹುಡುಗಿಯರ ಚಿಕ್ಕ ಸ್ಕರ್ಟ್ ಪ್ರಸಿದ್ಧಿ ಪಡೆದಿದೆ.

ಕೆಂಪು ಶಾಯಿ(Read Ink)ಯೆಂದ್ರೆ ಅದು ರಕ್ತ : ಇಲ್ಲಿನ ಜನರು ಕೆಂಪು ಶಾಯಿ ಬಳಸಲು ಹೆದರುತ್ತಾರೆ. ದಕ್ಷಿಣ ಕೊರಿಯಾದ ಜನರಲ್ಲಿ ಕೆಂಪು ಬಣ್ಣವು ರಕ್ತದ ಬಣ್ಣವಾಗಿದೆ. ಕೆಂಪು ಶಾಯಿಯಲ್ಲಿ ಯಾರದಾದರೂ ಹೆಸರು ಬರೆದರೆ ಅವರಿಗೆ ಏನಾದರೂ ಒಂದು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಇವರು ನಂಬುತ್ತಾರೆ.

Leave A Reply

Your email address will not be published.