World’s Richest Person : ಬರ್ನಾರ್ಡ್ ಆರ್ನಾಲ್ಟ್ ಹಿಂದಿಕ್ಕಿ ಮತ್ತೆ ಜಗತ್ತಿನ ನಂಬರ್ 1 ಶ್ರೀಮಂತರಾದ ಎಲಾನ್ ಮಸ್ಕ್
World’s Richest Person : ತನ್ನನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಎಲ್‌ವಿಎಂಎಚ್ ಚೇರ್ಮನ್ ಬರ್ನಾರ್ಡ್ ಆರ್ನಾಲ್ಟ್ ಅವರನ್ನು ಎಲಾನ್ ಮಸ್ಕ್ (Elan Mask) ಹಿಂದಕ್ಕೆ ಸರಿಸಿದ್ದಾರೆ. ಮತ್ತೆ ನಂಬರ್ 1 ಸ್ಥಾನ ಅವರದಾಗಿದೆ. ಜಗತ್ತಿನ ಶತ-ಶತ ಕೋಟ್ಯಧಿಪತಿ, ಸ್ಪೇಸ್ ಎಕ್ಸ್ ನ ಜನಕ, ಟೆಸ್ಲಾ, ಟ್ವಿಟ್ಟರ್ ಇತ್ಯಾದಿ ಹಲವು ಕಂಪನಿಗಳ ಒಡೆಯ- ನಾಯಕರಾದ ಎಲಾನ್ ಮಸ್ಕ್ ಈಗ ಮತ್ತೆ ಜಗತ್ತಿನ ಅಗ್ರ ಶ್ರೀಮಂತ ವ್ಯಕ್ತಿ ( World’s Richest Person)ಯಾಗಿದ್ದಾರೆ. ಅದರ ಮೂಲಕ ತಿಂಗಳ ಹಿಂದೆ ತನ್ನನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ್ದ ಪ್ರಾನ್ಸಿನ LVMH ಚೇರ್ಮನ್ ಬರ್ನಾರ್ಡ್ ಆರ್ನಾಲ್ಟ್ ಅವರನ್ನು ಹಿಂದಕ್ಕೆ ಸರಿಸಿ ಮತ್ತೆ ಮುನ್ನುಗ್ಗಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಫ್ರಾನ್ಸ್‌ನ ಲಗ್ಷುರಿ ಬ್ರ್ಯಾಂಡ್ ಲೂಯಿಸ್ ವುಯಿಟನ್‌ನ ಸಿಇಒ ಬರ್ನಾರ್ಡ್ ಅವರು ಟೆಸ್ಲಾ ಮತ್ತು ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ಎರಡು ತಿಂಗಳ ಕಾಲ ಜಗತ್ತಿನ ನಂಬರ್ ಒನ್ ಶ್ರೀಮಂತರಾಗಿದ್ದರು. ಆದರೆ ಕಳೆದ ಒಂದು ತಿಂಗಳಲ್ಲಿ, ಎಲಾನ್ ಮಸ್ಕ್ ಅವರ ಟೆಸ್ಲಾ ಷೇರುಗಳ ದರವು ಶೇಕಡ 25 ರಷ್ಟು ಏರಿಕೆ ಕಂಡ ಪರಿಣಾಮ ವಿಶ್ವ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ ಮಸ್ಕ್ ಮತ್ತೆ ಉತ್ತುಂಗದಲ್ಲಿ ನಿಂತಿದ್ದಾರೆ. ಈ ಸೂಚ್ಯಂಕದ ಪ್ರಕಾರ ಆರ್ನಾಲ್ಟ್ ಅವರು ಜಗತ್ತಿನ ಎರಡನೇ ಅಗ್ರ ಶ್ರೀಮಂತರಾಗಿದ್ದಾರೆ. ಆರ್ನಾಲ್ಟ್ ಅವರು 185.3 ಬಿಲಿಯನ್ ಡಾಲರ್ ಸಂಪತ್ತಿನ ದೊರೆಯಾಗಿದ್ದರೆ, ಮಸ್ಕ್ ಅವರು ಇದರಿಂದ ಇವರ ಸಂಪತ್ತು 187.1 ಬಿಲಿಯನ್ ಡಾಲರ್ ಶ್ರೀಮಂತಿಕೆಯ ಕುಬೇರ !
ಇದಕ್ಕೂ ಕೆಲ ತಿಂಗಳುಗಳ ಮೊದಲು ಅಮೆಜಾನ್ ಸ್ಥಾಪಕ ಜೆಫ್ ಬಿಜೋಸ್ ಅವರನ್ನು 2021ರ ಸೆಪ್ಟೆಂಬರ್‌ನಲ್ಲಿ ಹಿಂದಿಕ್ಕಿ ಎಲಾನ್ ಮಸ್ಕ್ ಅವರು ನಂಬರ್ ಒನ್ ಶ್ರೀಮಂತರಾಗಿದ್ದರು. ಕಳೆದ ವರ್ಷ ವರು ನಂಬರ್ ಒನ್ ಸ್ಥಾನದಲ್ಲಿಯೇ ಇದ್ದರು. 2021ರ ನವೆಂಬರ್‌ನಲ್ಲಿ ಎಲಾನ್ ಮಸ್ಕ್ ಅವರ ಸಂಪತ್ತು 340 ಬಿಲಿಯನ್ ಡಾಲರ್‌ಗೆ ಉಬ್ಬಿಕೊಂಡು ನಿಂತಿತ್ತು. ಆದರೆ ಕಳೆದ ವರ್ಷದ ಕೊನೆಯಲ್ಲಿ ಮಸ್ಕ್ ಅವರ ಸಂಪತ್ತು ಕೆಂಪನೆಯ ಕಾವಲಿಗೆ ಹಾಕಿದ ಮಂಜುಗಡ್ಡೆಯ ಥರ ಕರಗಿತ್ತು. ಆಗ ಇವರ ಸಂಪತ್ತು 200 ಬಿಲಿಯನ್ ಡಾಲರ್ ಕರಗಿ ನೀರಾಗಿತ್ತು. ವ್ಯಕ್ತಿಯೊಬ್ಬರ ಜೀವಮಾನದಲ್ಲಿ ಒಬ್ಬರ ಸಂಪತ್ತು ಇಷ್ಟು ತೀವ್ರ ಕುಸಿದಿರುವುದು ಇದೇ ಮೊದಲಂತೆ. ಅದಕ್ಕೆ ಕಾರಣ ಆದದ್ದು ಸೆಪ್ಟೆಂಬರ್ 2011ರ ಬಳಿಕ ಟೆಸ್ಲಾ ಷೇರು ದರಗಳು ಸುಮಾರು ಶೇಕಡ 11 ರಷ್ಟುಕಂಡ ಕುಸಿತ.
ಆಗ ಎಲಾನ್ ಮಸ್ಕ್‌ಗೆ ಪ್ರತಿನಿತ್ಯ 2,500 ಕೋಟಿ ರೂ. ನಷ್ಟ ಆಗುತ್ತಿತ್ತು. 2022 ವರ್ಷದ ಅಂತ್ಯದಲ್ಲಿ ಜಗತ್ತಿನಾದ್ಯಂತ ಎಲಾನ್ ಮಸ್ಕ್ ಸುದ್ದಿಯಲ್ಲಿದ್ದರು. ಅವರು ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಟ್ವಿಟ್ಟರ್ ಅನ್ನು ಹಠಕ್ಕೆ ಬಿದ್ದು ಖರೀದಿಸಿದ್ದರು. 44 ಬಿಲಿಯನ್ ಡಾಲರ್‌ಗೆ ಟ್ವಿಟ್ಟರ್ ಅನ್ನು ಅವರು ತನ್ನ ಬುಟ್ಟಿಗೆ ಹಾಕಿಕೊಂಡರು. ಈ ಸಮಯದಲ್ಲಿ ಎಲಾನ್ ಮಸ್ಕ್ ಕೈಗೊಂಡ ನಿರ್ಧಾರಗಳ ಮೇಲೆ ಟೆಸ್ಲಾ ಷೇರುದಾರರು ನಂಬಿಕೆ ಕಳೆದುಕೊಂಡರು ಎನ್ನಲಾಗಿದ್ದು, ಅದಕ್ಕಾಗಿ ಟೆಸ್ಲಾ ಷೇರುಗಳ ದರಗಳು ಪತನದ ಹಾದಿ ಕಂಡಿದ್ದವು.
ಟೆಸ್ಲಾ ಕಂಪನಿಯ ಪತನಕ್ಕೆ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಹಕ್ಕಿಯ ಪುಕ್ಕ ಹಿಡಿದಿರುವುದೇ ಪ್ರಮುಖ ಕಾರಣ ಎನ್ನಲಾಗಿತ್ತು. ಆದರೆ ಟ್ವಿಟ್ಟರ್ ಹಕ್ಕಿ ಮತ್ತು ಸ್ಪೇಸ್ ಎಕ್ಸ್ ಆಕಾಶದ ಹಕ್ಕಿ ಎರಡೂ ಈಗ ಎಲಾನ್ ಮಾಸ್ಕ ಮೇಲೆ ಭಾರೀ ವಿಶ್ವಾಸದಲ್ಲಿದೆ ಎನ್ನಲಾಗಿದ್ದು, ಮತ್ತೆ ಮಸ್ಕ್ ಸಂಪತ್ತು ಏರುತ್ತಿದೆ. ಇವತ್ತಿಗೆ ಅವರು ಮತ್ತೆ ಜಗತ್ತಿನ ನಂಬರ್ ಒನ್ ಸಾಹುಕಾರ !