UNO: ವಿಶ್ವಸಂಸ್ಥೆ ಸಭೆಯಲ್ಲಿ ಕೈಲಾಸದ ನಿತ್ಯಾನಂದನ ಮಹಿಳಾ ಪ್ರತಿನಿಧಿಗಳು ಭಾಗಿ! ಭಾರತದಿಂದ ನಮ್ಮ ಗುರುಗಳಿಗೆ ರಕ್ಷಣೆ ನೀಡಿರೆಂದು ಬೇಡಿಕೆ!
UNO : ಫೆಬ್ರವರಿ 23ರಂದು ಸ್ವಿಡ್ಜರ್ಲೆಂಡ್(Switzerland)ನ ಜಿನಿವಾ(Jineva) ನಗರದಲ್ಲಿ ನಡೆದಿದ್ದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ( UNO) ವೊಂದರಲ್ಲಿ ಸ್ವಾಮಿ ನಿತ್ಯಾನಂದನ(Nityananda) ಕೈಲಾಸ ರಾಷ್ಟ್ರದ ಪ್ರತಿನಿಧಿಗಳು ಭಾಗವಹಿಸಿದ್ದರೆಂಬ ಮಾಹಿತಿಯೊಂದನ್ನು ಆನ್ ಲೈನ್ ಮಾಧ್ಯಮವೊಂದು ಹೊರಗೆಡವಿದೆ. ಇದರಲ್ಲಿ ಅಮೆರಿಕ, ಯುನೈಟೆಡ್ ಕಿಂಗ್ ಡಮ್(UK), ಫ್ರಾನ್ಸ್(France) ಸ್ಲೊವೇನಿಯಾ(Sloveniya) ಮುಂತಾದ ರಾಷ್ಟ್ರಗಳಲ್ಲಿ ಕೈಲಾಸ ಶಾಖೆಗಳನ್ನು ಮುನ್ನಡೆಸುತ್ತಿರುವ ಮಹಿಳೆಯರು ಅಂದರೆ ನಿತ್ಯಾನಂದ ಶಿಷ್ಯೆಯರು ಭಾಗವಹಿಸಿದ್ದರೆಂದು ಹೇಳಲಾಗಿದೆ.
ಹೌದು, ಇತ್ತಿಚೆಗೆ ವಿಶ್ವಸಂಸ್ಥೆ ವತಿಯಿಂದ ಜಿನೇವಾದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆ ನಡೆದಿದ್ದು, ಈ ಸಭೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ(United State of Kailasa)ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸ್ವಘೋಷಿತ ದೇವಮಾನವ, ಕಾಲ್ಪನಿಕ ʼಕೈಲಾಸʼ ರಾಷ್ಟ್ರದ ಸೂತ್ರಧಾರಿ, ಅತ್ಯಾಚಾರ ಆರೋಪಿ ಸ್ವಾಮಿ ನಿತ್ಯಾನಂದನ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆ ಸಭೆಯೊಂದರಲ್ಲಿ ತನ್ನ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ನಿತ್ಯಾನಂದ ತನ್ನ ದ್ವೀಪವನ್ನು ʼಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸʼ ಎಂದು ಕರೆದುಕೊಂಡಿದ್ದಾನೆ.
ಆದರೆ ಈ ದ್ವೀಪಕ್ಕೆ ವಿಶ್ವಸಂಸ್ಥೆ ರಾಷ್ಟ್ರದ ಸ್ಥಾನಮಾನ ನೀಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈತನ ದ್ವೀಪ ಎಲ್ಲಿದೆ ಎಂಬುದೂ ಖಚಿತವಾಗಿಲ್ಲ. ಈ ಕುರಿತು 24-7 ಪ್ರೆಸ್ ರಿಲೀಸ್ ಎಂಬ ಆಂಗ್ಲ ಜಾಲತಾಣ ವರದಿ ಮಾಡಿದ್ದು, ವಿಶ್ವಸಂಸ್ಥೆಯ ಪ್ರಕಟಣೆಯೆಂದೇ ಪ್ರಕಟಿಸಲಾಗಿರುವ ಆ ವರದಿಯಲ್ಲಿ, ನಿತ್ಯಾನಂದನನ್ನು ಹಿಂದೂ ಧರ್ಮದ ಪರಮೋಚ್ಛ ಗುರು (ಸುಪ್ರೀಂ ಪಾಂಟಿಫ್ ಆಫ್ ಹಿಂದೂಯಿಸಂ – ಎಸ್ ಪಿಎಚ್) ಎಂದು ಹೇಳಲಾಗಿದೆ. ಜೊತೆಗೆ, ವಿಶ್ವಸಂಸ್ಥೆಯು ಫೆ. 23ರಂದು ಆಯೋಜಿಸಿದ್ದ, ವಿಶ್ವಸಂಸ್ಥೆಯ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸಮಿತಿಯ 84ನೇ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರೆಂದು ಹೇಳಲಾಗಿದೆ.
ಇನ್ನು ಈ ಮಹಾಸಭೆಯಲ್ಲಿ ವಿಶ್ವಸಂಸ್ಥೆಯಲ್ಲಿ ಕೈಲಾಸ ರಾಷ್ಟ್ರದ ಶಾಶ್ವತ ರಾಯಭಾರಿಯಾಗಿರುವ ಮಾತೆ ವಿಜಯಪ್ರಿಯ ನಿತ್ಯಾನಂದ, ಲಾಸ್ ಏಂಜಲೀಸ್ ನ ಕೈಲಾಸ ಶಾಖೆಯ ಮುಖ್ಯಸ್ಥೆಯಾದ ಮಾತೆ ಮುಕ್ತಿಕಾ ಆನಂದ, ಸೇಂಟ್ ಲೂಯಿಸ್ ನ ಕೈಲಾಸ ಶಾಖೆಯ ಮಾತೆ ಸೋನಾ ಕಾಮತ್, ಯುನೈಟೆಡ್ ಕಿಂಗ್ ಡಮ್ ನ ಕೈಲಾಸ ಶಾಖೆಯ ಮುಖ್ಯಸ್ಥೆ ಮಾತೆ ನಿತ್ಯ ಆತ್ಮದಾಯಕಿ, ಫ್ರಾನ್ಸ್ ನಲ್ಲಿರುವ ಕೈಲಾಸ ಶಾಖೆಯ ಮುಖ್ಯಸ್ಥೆ ಮಾತೆ ನಿತ್ಯ ವೆಂಕಟೇಶಾನಂದ ಹಾಗೂ ಸ್ಲೊವೇನಿಯ ಕೈಲಾಸ ಶಾಖೆಯ ಮುಖ್ಯಸ್ಥೆ ಮಾತೆ ಪ್ರಿಯಾ ಪ್ರೇಮ ಭಾಗವಹಿಸಿದ್ದರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅತ್ಯಾಚಾರ ಆರೋಪ ಹೊತ್ತು ಭಾರತ ಬಿಟ್ಟು ಪರಾರಿಯಾಗಿರುವ ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ ಪ್ರತಿನಿಧಿಯಾಗಿ ಭಾಗವಹಿಸಿರುವ ವಿಜಯಪ್ರಿಯಾ ನಿತ್ಯಾನಂದ ಎಂಬಾಕೆ, ʼʼಹಿಂದೂಧರ್ಮದ ಸುಪ್ರೀಂ ಗುರುವಾಗಿರುವ ನಿತ್ಯಾನಂದ ಭಾರತದಿಂದ ಕಿರುಕುಳ, ಅತ್ಯಾಚಾರ ಆರೋಪ ಅನುಭವಿಸುತ್ತಿದ್ದಾರೆ. ಅವರಿಗೆ ರಕ್ಷಣೆ ನೀಡಬೇಕು, ಜಗತ್ತಿನಲ್ಲಿ ಶೇ.82ರಷ್ಟು ಮಹಿಳೆಯರು ಪದೇ ಪದೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸಿದ್ದಕ್ಕಾಗಿ ಶೇ. 42ರಷ್ಟು ಮಹಿಳೆಯರು, ಅತ್ಯಾಚಾರ ಸೇರಿದಂತೆ ಅನೇಕ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾಳಂತೆ.
ಅಲ್ಲದೇ, ಕೈಲಾಸ ಹಿಂದೂ ಧರ್ಮದ ಮೊದಲ ಸಾರ್ವಭೌಮ ರಾಜ್ಯ. ಅದನ್ನು ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶ ನಿತ್ಯಾನಂದ ಪರಮಶಿವಂ ಸ್ಥಾಪಿಸಿದ್ದಾರೆ ಎಂದು ನಿತ್ಯಾನಂದನ ಶಿಷ್ಯರು ಪ್ರತಿಪಾದಿಸಿದ್ದಾರೆ. ನಿತ್ಯಾನಂದ ಅವರು ಪ್ರಬುದ್ಧ ಹಿಂದೂ ನಾಗರಿಕತೆ ಮತ್ತು ಆದಿಶೈವ, ಸ್ಥಳೀಯ ಬುಡಕಟ್ಟು ಸೇರಿ ಹಿಂದೂ ಧರ್ಮದ 10 ಸಾವಿರ ಸಂಪ್ರದಾಯಗಳನ್ನ ಪುನರುಜ್ಜೀವನಗೊಳಿಸಿದ್ದಾರೆ. ಕೈಲಾಸ ಸುಸ್ಥಿರ ಅಭಿವೃದ್ಧಿಯೊಂದಿಗೆ ಯಶಸ್ವಿಯಾಗಿದೆ ಎಂದು ವಿಜಯಪ್ರಿಯ ಹೇಳಿದ್ದಾರೆ.
2019ರಲ್ಲಿ ಈ ನಿತ್ಯಾನಂದ ಭಾರತ ಬಿಟ್ಟು ಪರಾರಿಯಾಗಿದ್ದ. ಅದಕ್ಕೆ ಮುನ್ನ ಇಲ್ಲಿ ಹಲವಾರು ಕಡೆ ಆಶ್ರಮಗಳನ್ನು ನಡೆಸುತ್ತಿದ್ದ ಈತನ ಮೇಲೆ ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಮಕ್ಕಳ ಅಪಹರಣ ಮುಂತಾದ ಪ್ರಕರಣಗಳು ದಾಖಲಾಗಿವೆ. 2010ರಲ್ಲಿ ಕರ್ನಾಟಕದ ಕೋರ್ಟ್ ಈತನಿಗೆ ಜಾಮೀನುರಹಿತ ವಾರಂಟ್ ಹೊರಡಿಸಿತ್ತು.