SSLC Annual Exam 2023 : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ ಗಮನಿಸಿ, ವಾರ್ಷಿಕ ಪರೀಕ್ಷೆ ಕುರಿತು ಮಹತ್ವದ ಮಾಹಿತಿ!
SSLC Annual Exam 2023: ಎಸ್‌ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ ಕುರಿತು ಪರೀಕ್ಷಾ ಮಂಡಲಿಯು ಮಹತ್ವದ ಮಾಹಿತಿಯನ್ನು ನೀಡಿದೆ. 2023ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ (SSLC Annual Exam 2023) ನೋಂದಣಿಯಾಗಿರುವ ಶಾಲಾ ವಿದ್ಯಾರ್ಥಿಗಳ ಬಗ್ಗೆ, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರಿಗೆ ಕರ್ನಾಟಕ ಶಾಲಾ ಪರೀಕ್ಷೆ(KARNATAKA SCHOOL EXAMINATION) ಮತ್ತು ಮೌಲ್ಯನಿರ್ಣಯ ಮಂಡಳಿ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರಿಗೆ ಮಂಡಳಿ ಮಹತ್ವದ ಮಾಹಿತಿ ನೀಡಿದ್ದು, ತಮ್ಮ ಶಾಲೆಯ 2023ರ ಎಸ್‌ಎಸ್‌ಎಲ್ ಸಿ(SSLC) ಮುಖ್ಯ ಪರೀಕ್ಷೆಯನ್ನು (SSLC Annual Exam) ಬರೆಯಲಿರುವ ಶಾಲಾ ವಿದ್ಯಾರ್ಥಿಗಳ(students) ಆಂತರಿಕ ಅಂಕಗಳನ್ನು ಆನ್‌ಲೈನ್‌ನಲ್ಲಿ ನಮೂದು ಮಾಡುವಂತೆ ಮಂಡಲಿ ಸೂಚನೆ ನೀಡಿದೆ.
ನಮೂದು ಮಾಡಲು ದಿನಾಂಕ ಸೂಚಿಸಿದ್ದು, 27-02-2023 ರಿಂದ ಅವಕಾಶ ಕಲ್ಪಿಸಿದೆ. ಹಾಗೆಯೇ ಮಂಡಲಿಯ ವೆಬ್ ಸೈಟ್ https://kseab.karnataka.gov.in/ ರಲ್ಲಿ ಲಭ್ಯವಿರುವ ತಂತ್ರಾಶವನ್ನು ಬಳಸಿ, ಎಲ್ಲಾ ಶಾಲೆಗಳ ಮುಖ್ಯಸ್ಥರು ಆಯಾ ಶಾಲೆಯ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್‌ಲೈನ್(online) ಮೂಲಕ ನಮೂದು ಮಾಡಬೇಕು ಎಂದು ಸೂಚಿಸಿದೆ.
ಪ್ರತಿಯೊಬ್ಬ ವಿದ್ಯಾರ್ಥಿ ಕನಿಷ್ಠ ಶೇಕಡಾ 75ರಷ್ಟು ಹಾಜರಾತಿಯನ್ನು ಹೊಂದಿರುವ ಬಗ್ಗೆ, ‘Yes’ ಎಂದು ಆಯ್ಕೆ ಮಾಡಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರವೇ ಆಂತರಿಕ ಅಂಕಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದ್ದು, ‘NO’ ಎಂದು ಆಯ್ಕೆ ಮಾಡಲ್ಪಟ್ಟ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನಮೂದಿಸಲು ಅವಕಾಶ ಇರುವುದಿಲ್ಲ. ಇದರ ಅರ್ಥ, NO ಎಂದು ಆಯ್ಕೆ ಮಾಡಲ್ಪಟ್ಟ ವಿದ್ಯಾರ್ಥಿಗಳು 2023ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯನ್ನು ಬರೆಯಲು ಅರ್ಹನಿರುವುದಿಲ್ಲ. 75% ಹಾಜರಾತಿ ಇಲ್ಲವಾದರೆ ಆ ವಿದ್ಯಾರ್ಥಿ ಪರೀಕ್ಷೆ ಬರೆಯುವಂತಿಲ್ಲ. 2023-24ನೇ ಸಾಲಿನಲ್ಲಿ ಶಾಲೆಗೆ ಪುನಃ ದಾಖಲಾಗಿ, ಪರೀಕ್ಷೆ ಬರೆಯಬೇಕು.
ಇನ್ನು ಶಾಲಾ ಮುಖ್ಯಸ್ಥರು, ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದಿಸಿ Freeze ಮಾಡಲು ಕೊನೆಯ ದಿನಾಂಕ 12-03-2023 ಆಗಿದೆ. ಹಾಗೆಯೇ ಉಪನಿರ್ದೇಶಕರು (ಆಡಳಿತ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಶಾಲೆಗಳಲ್ಲಿ ಆಂತರಿಕ ಅಂಕಗಳನ್ನು ನಮೂದಿಸುವ ಕಾರ್ಯವನ್ನು ಕೊಟ್ಟಿರುವ, ನಿಗದಿತ ಅವಧಿಯ ಒಳಗೆ ಪೂರ್ಣಗೊಳಿಸುವಂತೆ ನೋಡಿಕೊಳ್ಳಲು ಸೂಚನೆ ನೀಡಿದೆ.
ಮುಖ್ಯ ಶಿಕ್ಷಕರು ಆಂತರಿಕ ಅಂಕಗಳನ್ನು ಆನ್‌ಲೈನ್‌ನಲ್ಲಿ ನಮೂದು ಮಾಡುವ ಸಂದರ್ಭದಲ್ಲಿ ಏನಾದರೂ ಪ್ರಶ್ನೆಗಳು ಅಥವಾ ಸಮಸ್ಯೆಗಳು ಎದುರಾದರೆ, ಅದನ್ನು ಪರಿಹರಿಸಿಕೊಳ್ಳಲು ಮಂಡಲಿಯ ಸಹಾಯವಾಣಿ ಸಂಖ್ಯೆ 08023310075 ಯನ್ನು ಸಂಪರ್ಕಿಸಬಹುದು. ಇಲ್ಲವೇ ಮಂಡಲಿಯ ಆಯಾ ಜಿಲ್ಲೆಗೆ ಸಂಬಂಧಪಟ್ಟ ಶಾಖಾಧಿಕಾರಿಗಳನ್ನೂ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಶಾಲಾ ಮುಖ್ಯಸ್ಥರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ.