ʼಮಲʼ ದ ವಾಸನೆ ಮೂಸಿದರೆ ಸಿಗುತ್ತೆ ಲಕ್ಷಗಟ್ಟಲೇ ಸಂಬಳ! ಈ ಕೆಲಸ ಬೇಕಿದ್ದರೆ ಇಲ್ಲಿದೆ ವಿವರ!

Poop smell: ನೀವು ಕೂಡ ಉದ್ಯೋಗಾಕಾಂಕ್ಷಿಗಳೇ ಹಾಗಿದ್ದರೆ ನೀವು ಕೂಡ ಈ ರೀತಿಯ ವಿಚಿತ್ರ ನೌಕರಿಯ ಬಗ್ಗೆ ಕೇಳಿದ್ದೀರಾ? ಆದರೆ, ಈ ನೌಕರಿಯ ಬಗ್ಗೆ ಕೇಳಿದರೆ ನಾಲ್ಕು ದಿನ ನೀವು ಸರಿಯಾಗಿ ನಿದ್ದೆ ಕೂಡ ಮಾಡಲು ಸಾಧ್ಯವಿಲ್ಲವೇನೋ!! ಸಾಮಾನ್ಯವಾಗಿ ಖಾಲಿ ಹುದ್ದೆಗೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳು ಬೇಕಾದಾಗ ಜಾಹೀರಾತು( Advertisement) ನೀಡುವುದನ್ನು ಎಲ್ಲರೂ ನೋಡಿರುತ್ತೇವೆ. ಅದರಲ್ಲೇನು ವಿಶೇಷತೆ ಇದೆ ಎಂಬ ಪ್ರಶ್ನೆ ನಿಮಗೆ ಕಾಡಬಹುದು.

ಉದ್ಯೋಗದಲ್ಲಿಯೂ ಹೋಟೆಲ್ (Hotel) ರೆಸ್ಟೋರೆಂಟ್ (Restuarant) ಬ್ಯಾಂಕ್ (Bank) , ಆಫೀಸ್ ( office) ಕ್ಲರ್ಕ್ ( clerk) ಮ್ಯಾನೇಜರ್ (Manager) ಸಪೈಯರ್ (suppliers), ಡಾಕ್ಟರ್ಸ್ (Doctors), ನರ್ಸ್ (Nu rse), ಹೀಗೆ ನಾನಾ ಹುದ್ದೆಗಳಿಗೆ ಜಾಹೀರಾತು ನೀಡೋದು ಕಾಮನ್. ಆದರೆ, ಇಲ್ಲಿ ಜಾಹೀರಾತು(Advertisement) ನೀಡಿರುವ ಹುದ್ದೆಯ ಬಗ್ಗೆ ಕೇಳಿದರೆ ವಾಕರಿಕೆ ಬಂದರೂ ಅಚ್ಚರಿಯಿಲ್ಲ. ಅರೇ, ಅಂತಹ ಹುದ್ದೆ ಏನು ಅನ್ನೋರಿಗೆ ಇಲ್ಲಿದೆ ನೋಡಿ ಉತ್ತರ.

ಜನರ ಮಲದ ವಾಸನೆಯನ್ನು(Poop smell) ಕಂಡುಹಿಡಿಯುವ ವಿಲಕ್ಷಣ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದು, ಆಸಕ್ತರಿಗೆ ಈ ರೀತಿಯ ವಿಚಿತ್ರ ನೌಕರಿಯ ಆಫರ್ ಕೂಡ ನೀಡಲಾಗಿದೆ. ಕೇಳಿದಾಗ ಅಚ್ಚರಿ ಎನಿಸಿದರೂ ನಿಜ ಕಣ್ರೀ!!  ಜಾಬ್ ಆಫರ್ ನೀಡಿದ್ದು ಒಂದೆಡೆಯಾದರೆ ಈ ನೌಕರಿಗೆ ಸಂಬಳ ಕೇಳಿದರೆ ನೀವು ಶಾಕ್ ಆಗೋದು ಫಿಕ್ಸ್!! ಅಷ್ಟಕ್ಕೂ ಈ ರೀತಿಯ ವಿಚಿತ್ರ ನೌಕರಿಯ ಆಫರ್ ನೀಡಲು ಕಾರಣ ಕೂಡ ಇದೆ.

ಇಂಗ್ಲೆಂಡ್​ ಮೂಲದ ಫೀಲ್ ಕಂಪ್ಲೀಟ್ ಎಂಬ ನ್ಯೂಟ್ರಿಷನ್ ಸಂಸ್ಥೆಯು ಈ ಉದ್ಯೋಗಕ್ಕೆ ಆಫರ್​ ನೀಡಿದ್ದು, ಮಲದ ವಾಸನೆಯ ಮೂಲಕ ಅನೇಕ ರೋಗಗಳನ್ನು(Disease) ಕಂಡು ಹಿಡಿಯಲು ಸಾಧ್ಯವಾಗುತ್ತದೆ. ಹೀಗಾಗಿ, ಮಲದ ವಾಸನೆಯನ್ನು ಪರೀಕ್ಷಿಸಲು ಉದ್ಯೋಗಿಗಳಿಗೆ ಆಹ್ವಾನ ನೀಡಲಾಗಿದೆ.

ಕರುಳಿನ ಆರೋಗ್ಯ ಸಲಹಾ ಸೇವೆಗಳನ್ನು ಒದಗಿಸುವ  ನಿಟ್ಟಿನಲ್ಲಿ ಈ ಕೆಲಸಕ್ಕೆ ಆಫರ್ ನೀಡಲಾಗಿದ್ದು, ಸಂಬಳ ಕೇಳಿದಾಗ ಮಾತ್ರ ಅಚ್ಚರಿ ಮೂಡಿಸುತ್ತದೆ. ಈ ನೌಕರಿಗೆ(Employment) ಕಂಪೆನಿ £ 1,500 (ಅಂದರೆ ಸುಮಾರು ಒಂದೂವರೆ ಲಕ್ಷ ರೂ!) ಆಫರ್‌ ನೀಡಿ ಈ ನೌಕರಿಯಲ್ಲಿ ಕೆಲಸ ಮಾಡಲು ಆಸಕ್ತಿ (Interest) ಇದ್ದವರು ಅರ್ಜಿ ಸಲ್ಲಿಸಲು ಕಂಪೆನಿ ತಿಳಿಸಿದೆ.

ಫೀಲ್ ಕಂಪ್ಲೀಟ್ ಅವರ ವೆಬ್‌ಸೈಟ್‌ನ ನಿರೀಕ್ಷಿತ ಪೋಮೋಮೆಲಿಯರ್‌ಗಳು ಕನಿಷ್ಠ 18 ವರ್ಷ ವಯಸ್ಸಿನವರಗಿರಬೇಕು. ಮಾರ್ಚ್ 2023 ರಿಂದ ಪ್ರಾರಂಭವಾಗುವ ತರಬೇತಿಯಲ್ಲಿ ಆರು ತಿಂಗಳುಗಳ ಕಾಲ ಭಾಗವಹಿಸಬೇಕು ಮತ್ತು ವಾಸನೆಯ ತೀವ್ರ ಪ್ರಜ್ಞೆಯನ್ನು ಹೊಂದಿರಬೇಕು ಎಂದುಮಾಹಿತಿ ನೀಡಿದೆ. ಕರುಳಿನ ಆರೋಗ್ಯ, ಪೋಷಣೆಯ ಎಲ್ಲಾ ಅಂಶಗಳ ಮಾಹಿತಿ ತಿಳಿದಿರಬೇಕು. ಇದಲ್ಲದೆ,  ಮಲವನ್ನು ಪರಿಶೀಲಿಸಲು ಸರಿಯಾಗಿ ತಿಳಿದಿರಬೇಕು. ಈ ಕೆಲಸಕ್ಕೆ ಅರ್ಹ  ಸೂಕ್ಷ್ಮಗ್ರಾಹಿ ಅಭ್ಯರ್ಥಿಗಳನ್ನು ಆರಿಸಲಾಗುತ್ತದೆ. ವಿಶ್ವದ ಮೊದಲ ಪೂಮ್‌ಮೆಲಿಯರ್’ ಅನ್ನು ಕಂಡುಹಿಡಿಯುವುದು ಮತ್ತು ತರಬೇತಿ ನೀಡುವುದು ನಮಗೆ ಒಂದು ಗಮನಾರ್ಹ ಅಂಶವಾಗಿದೆ’ ಎಂದು ಕಂಪೆನಿ ಸಿಇಒ ಆರನ್ ಪ್ರಾವಿಡೆನ್ಸ್, ಪೂ ತಜ್ಞರು ತಿಳಿಸಿದ್ದಾರೆ ಎನ್ನಲಾಗಿದೆ.

ಸರಿಯಾದ ರೀತಿಯಲ್ಲಿ ಮಲದ ವಾಸನೆ ನೋಡುವ ಅಭ್ಯರ್ಥಿ ಗಳು ಉದ್ಯೋಗಕ್ಕೆ ಆಯ್ಕೆಯಾಗಲಿದ್ದು, ತರಬೇತಿ ದೊರೆತ ನಂತರ ಅಂತಿಮವಾಗಿ, ಒಬ್ಬ ಅಭ್ಯರ್ಥಿಯು ಅಂತಿಮವಾಗಿ ಸ್ಥಾನವನ್ನು ಪಡೆಯಲು ಅರ್ಹನಾಗುತ್ತಾನೆ. ಯಾರೊಬ್ಬರ ಪೂ ವಾಸನೆ ಉತ್ತಮವಾಗಿದ್ದರೂ ಕೂಡ  ಇದು ಕಳಪೆ ಕರುಳಿನ ಆರೋಗ್ಯದ (Health) ಸಂಕೇತ ಎಂದು ಹೇಳಲಾಗಿದೆ. ಏನೇ ಹೇಳಿ ನಮ್ಮಲ್ಲಿ ಈ ರೀತಿ ಆಫರ್ ನೀಡಿದರೆ ನೀವು ಕೋಟಿ ಕೊಟ್ಟರೂ ನಮಗೆ ಈ ಕೆಲಸವು ಬೇಡ ಏನು ಬೇಡ ಎಂದುಕೊಂಡು ಅಭ್ಯರ್ಥಿಗಳು ಹಿಂದಿರುಗಿದರು ಅತಿಶೋಕ್ತಿಯಲ್ಲ.

Leave A Reply

Your email address will not be published.