Volodymyr Zelensky: ರಷ್ಯಾ ಅಧ್ಯಕ್ಷ ಪುಟಿನ್‌ನನ್ನು, ಅವರ ಆಪ್ತ ವಲಯದವರೇ ಕೊಂದು ಹಾಕುತ್ತಾರೆ: ತೀವ್ರ ಕುತೂಹಲಕ್ಕೆ ಕಾರಣವಾಯ್ತು ಉಕ್ರೇನ್ ಅಧ್ಯಕ್ಷರ ಭವಿಷ್ಯ!
Volodymyr Zelensky : ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 1 ವರ್ಷವಾಗಿದೆ. ಈ ಸಮಯದಲ್ಲಿ ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಒಂದು ದಿನ ತಮ್ಮ ಆಪ್ತ ವಲಯದವರಿಂದಲೇ ಕೊಲ್ಲಲ್ಪಡುತ್ತಾರೆ ಎಂದು ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಭವಿಷ್ಯ ನುಡಿದಿದ್ದಾರೆ.
ರಷ್ಯಾ, ಉಕ್ರೇನ್ ಮೇಲೆ ಯುದ್ಧ ಸಾರಿ ಒಂದು ವರ್ಷಗಳಾದ ಬಳಿಕ ಗತಿಸಿದ ಎಲ್ಲಾ ಘಟನೆಗಳ ವಿವರಗಳನ್ನು ಒಳಗೊಂಡಂತಹ ‘ಇಯರ್’ ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಲಾಗಿದೆ. ಅಲ್ಲದೆ ಇದನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಪುಟಿನ್ ಸಾವಿನ ಕರಿತು ನೀಡಿದ ಹೇಳಿಕೆ ಕೂಡ ಉಕ್ರೇನ್‌ನ ಈ ‘ಇಯರ್’ (Year) ಸಾಕ್ಷ್ಯಚಿತ್ರದಲ್ಲಿ (Documentary) ಕಂಡುಬಂದಿದೆ.
ಅಲ್ಲದೆ ಇದರೊಂದಿಗೆ ‘ರಷ್ಯಾ ಅಧ್ಯಕ್ಷ ನಾಯಕತ್ವದಲ್ಲಿ ದುರ್ಬಲತೆಯ ಅವಧಿ ಬರಲಿದೆ. ಅವರ ಆಪ್ತ ವಲಯದವರೇ ಅಧ್ಯಕ್ಷನ ವಿರುದ್ಧ ಪಿತೂರಿ ರೂಪಿಸೆ ಕೆಲಸ ಮಾಡಲು ಪ್ರೇರೇಪಿಸುವ ಕಾಲವೂ ಸನ್ಹಿತವಾಗಲಿದೆ. ಪರಭಕ್ಷಕಗಳು ಪರಭಕ್ಷಕನನ್ನು ತಿನ್ನುತ್ತವೆ. ಕೊಲೆಗಾರನನ್ನು ಕೊಲ್ಲಲು ಅವರು ಕಾರಣಗಳನ್ನು ಕಂಡುಕೊಳ್ಳುತ್ತಾರೆ. ಇದು ಖಂಡಿತಾ ನಡೆಯುತ್ತದೆ, ಆದರೆ ಯಾವಾಗ ಆಗುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ’ ಎಂದು ಉಕ್ರೇನ್ ಅಧ್ಯಕ್ಷ ಹೊಸದಾಗಿ ಬಾಂಬ್ ಸಿಡಿಸಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಸಾರಿದ ಬಳಿಕ ಆಗಾಗ ಅಧ್ಯಕ್ಷ ಪುಟಿನ್ ಬಗ್ಗೆ ಅವರ ಆಂತರಿಕ ವಲಯದಲ್ಲೇ ಅಸಮಾಧಾನ ಹೊಂದಿರುವ ಬಗ್ಗೆ ರಷ್ಯಾದಲ್ಲಿ ವರದಿಯಾಗಿದೆ. ಪುಟಿನ್‌ರ ಆಪ್ತ ವಲಯದವರೇ ಅವರ ಬಗ್ಗೆ ಹೆಚ್ಚು ಹತಾಶೆಗೊಂಡಿದ್ದಾರೆ ಎಂದು ಹೇಳಲಾಗಿದೆ. ಯುದ್ಧದ ವೇಳೆಯೂ ರಷ್ಯಾದ ಸೈನಿಕರು ಅಧ್ಯಕ್ಷನ ವಿರುದ್ಧ ದೂರುವುದು ಹಲವು ವೀಡಿಯೋಗಳಲ್ಲಿ ಕಂಡುಬಂದಿದೆ. ಇಂತಹ ಸಮಯದಲ್ಲಿ ಉಕ್ರೇನ್ ಅಧ್ಯಕ್ಷರ ಈ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ರಷ್ಯಾ-ಉಕ್ರೇನ್ (Russia-Ukraine) ಯುದ್ಧವು ಒಂದು ವರ್ಷವನ್ನು ಪೂರ್ಣಗೊಳಿಸುತ್ತಿದ್ದಂತೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಯುದ್ಧವನ್ನು ಕೊನೆಗೊಳಿಸಿ ಶಾಂತಿ ನಿರ್ಣಯವನ್ನು ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದೆ. ರಷ್ಯಾ ಉಕ್ರೇನ್ ಎರಡೂ ದೇಶಗಳು ಒಬ್ಬರನ್ನೊಬ್ಬರು ಸೋಲಿಸುವ ಸ್ಪರ್ಧೆಯಲ್ಲಿ ನಿರತವಾಗಿದ್ದು, ಈ ಹಿನ್ನಲೆಯಲ್ಲಿ ನಡೆಯುತ್ತಿರುವ ಸಾವು ನೋವು, ನಷ್ಟಗಳಿಗೆ ಆದ್ಯತೆ ನೀಡುತ್ತಿಲ್ಲ ಹಾಗೂ ಯುದ್ಧವನ್ನು (War) ಕೊನೆಗೊಳಿಸಿ ಶಾಂತಿಯನ್ನು ಕಾಪಾಡುವುದೇ ಈಗ ಮುಂದಿರುವ ದಾರಿ ಎಂದು ವಿಶ್ವಸಂಸ್ಥೆ ನಿರ್ಧರಿಸಿದೆ ಅಂತೆಯೇ ಅದಕ್ಕಾಗಿ ನಿರ್ಣಯ ಕೈಗೊಳ್ಳುವ ಕುರಿತು ಚರ್ಚಿಸುತ್ತಿದೆ.