Oppo F21 Pro ಮತ್ತು Pro 5G ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ!

Oppo F21 Pro5G : ಗ್ರಾಹಕರಿಗೆ ಉತ್ತಮ ಬೆಲೆಗೆ ದೊರೆಯುವ ಆಕರ್ಷಕ ವಿನ್ಯಾಸ, ಉತ್ತಮ ಬ್ಯಾಟರಿ , ಕ್ಯಾಮರಾಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳ ಬೇಡಿಕೆ ಯಾವುತ್ತಿಗೂ ಕಡಿಮೆ ಆಗುವುದಿಲ್ಲ. ಹಾಗೆಯೇ ಭಾರತದ(india )ಮೊಬೈಲ್ (Mobile )ಮಾರುಕಟ್ಟೆಯಲ್ಲಿ (market )ಕಳೆದ ವರ್ಷ ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡಿದ್ದ Oppo F21 Pro ಸರಣಿಯಲ್ಲಿನ Oppo F21 Pro ಮತ್ತು Oppo F21 Pro5G ಎರಡೂ ಸ್ಮಾರ್ಟ್‌ಫೋನ್‌ಗಳ(smartphone )ಬೆಲೆಗಳು ಇಳಿಕೆಯಾಗಿದೆ.

ಹೌದು ಮುಖ್ಯವಾಗಿ 64MP ಟ್ರಿಪಲ್ ಕ್ಯಾಮೆರಾ ಸೆಟಪ್, ಕ್ವಾಲ್ಕಾಮ್ ಚಿಪ್‌ಸೆಪ್ ಮತ್ತು SUPERVOOC ಚಾರ್ಜರ್ ನಂತಹ ಹಲವು ಬಹು ವೈಶಿಷ್ಟ್ಯಗಳೊಂದಿಗೆ Oppo F21 Pro ಮತ್ತು Oppo F21 Pro 5G ಎರಡೂ ಸ್ಮಾರ್ಟ್‌ಫೋನ್‌ಗಳನ್ನು ದೇಶದ ಮಾರುಕಟ್ಟೆಗೆ ಮಧ್ಯಮ ಬೆಲೆಗಳಲ್ಲಿ ಪರಿಚಯಿಸಲಾಗಿತ್ತು. ಇದೀಗ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಬೆಲೆಗಳಲ್ಲಿ ಸ್ವಲ್ಪ ಇಳಿಕೆ ಮಾಡಲಾಗಿದ್ದು, ಇದೊಂದು ಖುಷಿಯ ವಿಚಾರವು ಹೌದು. ಸದ್ಯ Oppo F21 Pro ಮತ್ತು Oppo F21 Pro 5G ಎರಡೂ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸಂಪೂರ್ಣ (complete )ಮಾಹಿತಿ ತಿಳಿಸಲಾಗಿದೆ.

Oppo F21 Pro ಮತ್ತು Oppo F21 Pro 5G ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ :

• Oppo F21 Pro ಮತ್ತು F21 Pro 5G ಎರಡೂ ಸ್ಮಾರ್ಟ್‌ಪೋನ್‌ಗಳು ಒಂದೇ ಗಾತ್ರದ 6.43-ಇಂಚಿನ HD+ AMOLED ಡಿಸ್‌ಪ್ಲೇ (display )ಹೊಂದಿವೆ.
• Oppo F21 Pro 5G ಆವೃತ್ತಿಯು ಫುಲ್ HD+ AMOLED ಡಿಸ್‌ಪ್ಲೇ ಯೊಂದಿಗೆ ಬಿಡುಗಡೆಯಾಗಿದೆಯಾದರೂ ಇದು ಕೇವಲ 60Hz ರಿಫ್ರೆಶ್ ರೇಟ್ ಹೊಂದಿರುವುದು ಆಶ್ಚರ್ಯಕರವಾಗಿದೆ.
• ಆದರೆ, 4G ರೂಪಾಂತರವು 90Hz ರಿಫ್ರೆಶ್ ರೇಟ್ ಹೊಂದಿದೆ. ಹುಡ್ ಅಡಿಯಲ್ಲಿ, OPPO F21 Pro ಸ್ಮಾರ್ಟ್‌ಫೋನನ್ನು Qualcomm Snapdragon 680 ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ.
• OPPO F21 Pro 5G ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G ಪ್ರೊಸೆಸರ್ ಹೊಂದಿದೆ.
• ಎರಡೂ ಫೋನ್‌ಗಳ ಪ್ರೊಸೆಸರ್ 128GB ಸಂಗ್ರಹಣೆ ಮತ್ತು 8GB RAM ಜೊತೆ ಸಂಯೋಜನೆಯಾಗಿದೆ.
• ಈ ಎರಡೂ ಮಾದರಿಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಂದಿವೆ.
• ಇದರಲ್ಲಿ F21 Pro ಫೋನ್ 64MP ಮುಖ್ಯ ಕ್ಯಾಮೆರಾ ಜೊತೆಗೆ 2MP ಮೈಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಕ್ಯಾಮೆರಾ ಸೆಟಪ್ ಹೊಂದಿದ್ದರೆ, F21 Pro 5G ಫೋನ್ 2MP ಡೆಪ್ತ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾದೊಂದಿಗೆ 64MP ಹೈ-ರೆಸ್ ಮುಖ್ಯ ಕ್ಯಾಮೆರಾ ಸೆಟಪ್ ಹೊಂದಿದೆ.
• ಆದರೆ, F21 Pro 5G ಫೋನಿನಲ್ಲಿ 16MP ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದರೆ, Oppo F21 Pro ಪೋನ್ ಮಾತ್ರ 32MP ಸೆಲ್ಫಿ ಕ್ಯಾಮೆರಾ ಹೊಂದಿದೆ.
• ಇವುಗಳಲ್ಲಿನ ಡ್ಯುಯಲ್ ವ್ಯೂ ವೀಡಿಯೊ ವೈಶಿಷ್ಟ್ಯವು ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳಲ್ಲಿ ಏಕಕಾಲದಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಲು ಅನುಮತಿಸುತ್ತದೆ.
• Oppo F21 Pro ಸರಣಿಯಲ್ಲಿನ Oppo F21 Pro ಮತ್ತು Oppo F21 Pro 5G ಎರಡೂ ಸಾಧನಗಳು 4,500mAh ಬ್ಯಾಟರಿ ಮತ್ತು 33W SUPERVOOC ನೊಂದಿಗೆ ಬರುತ್ತವೆ. 33W SUPERVOOC ತಂತ್ರಜ್ಞಾನದ ಸಹಾಯದಿಂದ 63 ನಿಮಿಷಗಳಲ್ಲಿ ಸಾಧನಗಳು ಸಂಪೂರ್ಣವಾಗಿ ಚಾರ್ಜ್ ಆಗುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ.
• Oppo ನ ಹೊಸ ColorOS 12 ಜೊತೆಗೆ Android 12 ಆಧಾರಿತವಾಗಿ ಕೆಲಸ ಮಾಡಲಿವೆ. ಎರಡೂ ಫೋನ್‌ಗಳಲ್ಲಿಯೂ RAM ವಿಸ್ತರಣೆ ತಂತ್ರಜ್ಞಾನದ ಮೂಲಕ ಹೆಚ್ಚುವರಿ 5GB RAM ಬಳಸಿಕೊಳ್ಳಬಹುದಾದ ವೈಶಿಷ್ಟ್ಯವಿದೆ.
• Wi-Fi 5, ಬ್ಲೂಟೂತ್(Bluetooth ), USB ಟೈಪ್-C ಪೋರ್ಟ್ ಮತ್ತು ‘ಸ್ಮಾರ್ಟ್ ನೋಟಿಫಿಕೇಶನ್ ಹೈಡಿಂಗ್’ ನಂತಹ ಹಲವು ವೈಶಿಷ್ಟ್ಯಗಳು ಎರಡೂ ಪೋನ್‌ಗಳಲ್ಲಿಯೂ ಇರಿಸಲಾಗಿದೆ.

ಸದ್ಯ ದೇಶದಲ್ಲಿ Oppo F21 Pro 4G ಸ್ಮಾರ್ಟ್‌ಫೋನ್ 8GB + 128GB ಸ್ಟೋರೇಜ್ ಮಾದರಿಯಲ್ಲಿ 22,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ಸ್ಮಾರ್ಟ್‌ಫೋನ್ ಬೆಲೆ 20,999 ರೂ.ಗೆ ಇಳಿಕೆಯಾಗಿದೆ. ಹಾಗೆಯೇ, 26,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದ್ದ 5G-ಸಕ್ರಿಯ Oppo F21 Pro 5G ಸ್ಮಾರ್ಟ್‌ಫೋನ್ ಇದೀಗ ಬೆಲೆ ಇಳಿಕೆಯ ನಂತರ 25,999 ರೂ. ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ.

ಜೊತೆಗೆ HDFC, ICICI ಮತ್ತು SBI ಬ್ಯಾಂಕ್ ಗ್ರಾಹಕರಿಗೆ 2000 ರೂ. ಕ್ಯಾಶ್‌ಬ್ಯಾಕ್ ಮತ್ತು 20 ಸಾವಿರ ರೂ. ವರೆಗೂ ಎಕ್ಸ್‌ಚೇಂಜ್ ಆಫರ್‌ನಲ್ಲಿ ಎರಡೂ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ದೊರೆಯುತ್ತಿವೆ. ಗ್ರಾಹಕರಿಗೆ ಸ್ಮಾರ್ಟ್ ಖರೀದಿಸಲು ಇದೊಂದು ಉತ್ತಮ ಅವಕಾಶ ಇದೆ.

Leave A Reply

Your email address will not be published.