Mobile Data : ನಿಮ್ಮ ಮೊಬೈಲ್‌ ಡೇಟಾ ಬೇಗ ಖಾಲಿಯಾಗದೇ ಇರಲು ಈ ಟ್ರಿಕ್ಸ್‌ ಫಾಲೋ ಮಾಡಿ!

Mobile data :ಸ್ಮಾರ್ಟ್ ಫೋನಿನಲ್ಲಿ ಡೇಟಾ (data )ಇದ್ದರೆ ಮಾತ್ರ ನಾವು ಇಂಟರ್ನೆಟ್ (Internet ) ಬಳಸಲು ಸಾಧ್ಯ ಆಗುತ್ತದೆ. ಪ್ರಸ್ತುತ ಜಗತ್ತಿನಲ್ಲಿ ಗಾಳಿ, ನೀರು, ಆಹಾರದಂತೆ ಸ್ಮಾರ್ಟ್‍ಫೋನ್ (smartphone ) ಇಂಟರ್ನೆಟ್ ಕೂಡ ಒಂದಾಗಿದೆ. ಆದರೆ ಕೆಲವೊಮ್ಮೆ ಇದ್ದ ಡೇಟಾವೂ ಬೇಗನೆ ಖಾಲಿಯಾಗುತ್ತದೆ. ಅದರಲ್ಲೂ ಯಾವುದಾದರು ಮುಖ್ಯವಾದ ಕೆಲಸ ಮಾಡುವಾಗ ಡೇಟಾ ಖಾಲಿಯಾದರಂತೂ ದಿಕ್ಕು ತೋಚದಂತೆ ಆಗುತ್ತದೆ. ಒಟ್ಟಿನಲ್ಲಿ ಮೊಬೈಲ್ ಫೋನ್ ಆಗಿರಲಿ ಅಥವಾ ಮನೆಯಲ್ಲಿ ವೈ-ಫೈ ಆಗಿರಲಿ, ಎಲ್ಲೆಡೆ 24 ಗಂಟೆಗಳ ಕಾಲ ಇಂಟರ್ನೆಟ್ ಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ಯಾವ ಕೆಲಸಾನು ನಡೆಯೋಲ್ಲಾ. ಹೌದು ಸ್ಮಾರ್ಟ್‍ಫೋನ್ ಗಳಲ್ಲಿ ಹಲವು ಅಪ್ಲಿಕೇಶನ್ (application )ಗಳು ಕಾರ್ಯನಿರ್ವಹಿಸಲು ಮೊಬೈಲ್ ಡೇಟಾ ಬೇಕೇ ಬೇಕು.

ಆದರೆ ದೈನಂದಿನ ಡೇಟಾವನ್ನು ನಿಯಮಿತವಾಗಿ ಬಳಸಲು ಸಾಧ್ಯ. ಅದಕ್ಕೊಂದು ಸುಲಭವಾದ ಟ್ರಿಕ್ ಇದೆ. ಅದರ ಮೂಲಕ ಡೇಟಾವನ್ನು ಖಾಲಿಯಾಗದಂತೆ ನಿಯಮಿತವಾಗಿ ಮತ್ತು ನಿರಂತರವಾಗಿ ಬಳಸಬಹುದಾಗಿದೆ. ನಿಮ್ಮ ಸ್ಮಾರ್ಟ್‍ಫೋನ್ ನಲ್ಲಿ ಒಂದೇ ಒಂದು ಸೆಟ್ಟಿಂಗ್ ಬದಲಾಯಿಸುವ ಮೂಲಕ ಈ ಸಮಸ್ಯೆಯಿಂದ ಶೀಘ್ರದಲ್ಲೇ ಪರಿಹಾರ ಪಡೆಯಬಹುದು.

ವಾಸ್ತವವಾಗಿ, ನಿಮ್ಮ ಮೊಬೈಲ್ ಡೇಟಾ(mobile data ) ತ್ವರಿತವಾಗಿ ಖಾಲಿ ಆಗಲು ಹಲವು ಕಾರಣಗಳಿರಬಹುದು. ಅವುಗಳಲ್ಲಿ ಹೈ ಡೆಫಿನಿಶನ್ ಗೇಮ್ಸ್, ಹೆಚ್ಚು ಹೆಚ್ಚು ವಿಡಿಯೋ ವಾಚ್ ಮಾಡಿರುವುದು ಕೂಡ ಒಂದು ಕಾರಣವಿರಬಹುದು. ಆದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೇಟಾ ತ್ವರಿತವಾಗಿ ಖಾಲಿಯಾಗಲು ಅಪ್ಲಿಕೇಶನ್‌ಗಳ ನವೀಕರಣವು ಒಂದು ಪ್ರಮುಖ ಕಾರಣವಾಗಿದೆ. ಡೀಫಾಲ್ಟ್ ಸೆಟ್ಟಿಂಗ್‌ಗಳಿಂದಾಗಿ ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತವೆ. ಕೆಲವೊಮ್ಮೆ ನಾವು ಯಾವುದೋ ಕಾರಣಕ್ಕೆ ಇನ್ಸ್ಟಾಲ್ ಮಾಡಿದ, ಹೆಚ್ಚು ಬಳಕೆಯಲ್ಲಿಲ್ಲದ ಅಪ್ಲಿಕೇಶನ್‌ಗಳಿಂದಲೂ ಕೂಡ ಡೇಟಾ ಬೇಗ ಖಾಲಿಯಾಗುತ್ತದೆ. ಇದನ್ನು ತಪ್ಪಿಸಲು ಒಂದು ಸೆಟ್ಟಿಂಗ್(setting )ಅನ್ನು ಆಫ್ ಮಾಡಿದರೆ ಅಷ್ಟೇ ಸಾಕು.

ಮೊಬೈಲ್ ಡೇಟಾ ಬೇಗ ಖಾಲಿಯಾಗುವುದನ್ನು ತಡೆಯಲು ಈ ರೀತಿ ಮಾಡಿ :
• ಈ ಸೆಟ್ಟಿಂಗ್ ಆಫ್ ಮಾಡಲು ನೀವು ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಬೇಕು.
• ಇಲ್ಲಿ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಸ್ವಯಂ ನವೀಕರಣವನ್ನು(update )ಆಫ್ ಮಾಡಿ.
• ಡೌನ್‌ಲೋಡ್ ಮಾಡಿದ ಎಲ್ಲಾ ಅಪ್ಲಿಕೇಶನ್‌ಗಳಿಗೆ ನೀವು ಸ್ವಯಂ ನವೀಕರಣ ಆಯ್ಕೆಯನ್ನು ಆಫ್ ಮಾಡಬಹುದು.
• ಮಾತ್ರವಲ್ಲ, ಯಾವುದೇ ಆ್ಯಪ್ ಹೆಚ್ಚು ಅಪ್‌ಡೇಟ್‌ಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದನ್ನು ಕೂಡ ನೀವು ಆಫ್ ಮಾಡಬಹುದು.

ಮೊಬೈಲ್ ಡೇಟಾ ಬೇಗ ಖಾಲಿಯಾಗುವುದನ್ನು ತಡೆಯಲು ಇತರ ಕ್ರಮಗಳು :
• ನೀವು ಲೈಟ್ ಆವೃತ್ತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಈ ಲೈಟ್ ಆವೃತ್ತಿಯ ಅಪ್ಲಿಕೇಶನ್‌ಗಳ ಪ್ರಮುಖ ವೈಶಿಷ್ಟ್ಯವೆಂದರೆ ಇವು ಕಡಿಮೆ ಡೇಟಾ ಬಳಸುತ್ತವೆ.
• ಡೇಟಾ ಸೇವರ್ ಮೋಡ್ ಸಹ ಉತ್ತಮ ಆಯ್ಕೆಯಾಗಿದೆ. ಡೇಟಾ ಬಳಕೆಯನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ. ಹಾಗಿದ್ದಾಗ ಮಾತ್ರ ಇಂಟರ್ನೆಟ್ ಬಳಕೆಯನ್ನು ನಿಯಮಿತ ಮಾಡಬಹುದಾಗಿದೆ.
• ಮೊಬೈಲ್ ಡೇಟಾ ರನ್ ಆಗುತ್ತಿರುವಾಗ, ಕೆಲವು ಆ್ಯಪ್ ಗಳು ಗೊತ್ತಿಲ್ಲದೆ ಅಪ್ಡೇಟ್ ಆಗುತ್ತದೆ. ಸೆಟ್ಟಿಂಗ್ ಗಳಿಗೆ ಹೋಗುವ ಮೂಲಕ ಇದನ್ನು ಬದಲಾಯಿಸಬಹುದು. ಇದಕ್ಕಾಗಿ ವೈಫೈ ಮೂಲಕ ಆಟೋ ಅಪ್ಡೇಟ್ ಆಪ್ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ಮಾಡುವುದರಿಂದ, ನಿಮ್ಮ ಫೋನ್ನ ಅಪ್ಲಿಕೇಶನ್ಗಳನ್ನು ವೈ-ಫೈನಲ್ಲಿ ಮಾತ್ರ ನವೀಕರಿಸಲಾಗುತ್ತದೆ.
• ಸ್ಮಾರ್ಟ್ಫೋನ್ ಬಳಕೆದಾರರು ಸೆಟ್ಟಿಂಗ್ ನಲ್ಲಿ ಡೇಟಾ ಮಿತಿಯನ್ನು ಹೊಂದಿಸುವುದು ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ, ಡೇಟಾ ಬಳಕೆಯ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ಡೇಟಾ ಮಿತಿ ಮತ್ತು ಬಿಲ್ಲಿಂಗ್ ಸೈಕಲ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ 1GB ಮಾಡಿದರೆ, 1GB ಖಾಲಿಯಾದ ನಂತರ ಇಂಟರ್ನೆಟ್ ಅನ್ನು ಮುಚ್ಚಲಾಗುತ್ತದೆ.

ಒಟ್ಟಿನಲ್ಲಿ ಮೊಬೈಲ್ ಡೇಟಾವನ್ನು ಬಳಸುವಾಗ, ಹೆಚ್ಚು ಡೇಟಾವನ್ನು ಬಳಸುವ ಅಪ್ಲಿಕೇಶನ್​ಗಳ ಬಳಕೆಯನ್ನು ಕಡಿಮೆ ಮಾಡಿ. ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್​​ಫಾರ್ಮ್​ಗಳಲ್ಲಿ ವಿಡಿಯೊಗಳನ್ನು (video )ವೀಕ್ಷಿಸುವುದರಿಂದ ಹೆಚ್ಚಿನ ಡೇಟಾ ಖಾಲಿಯಾಗುತ್ತದೆ. ಅಲ್ಲದೆ, ಹೆಚ್ಚು ಜಾಹೀರಾತುಗಳನ್ನು ತೋರಿಸುವ ಅಪ್ಲಿಕೇಶನ್ ಗಳಿಂದ ದೂರವಿರಿ. ಇದು ನಿಮ್ಮ ಡೇಟಾವನ್ನು ಬೇಗನೆ ಖಾಲಿ ಮಾಡುತ್ತದೆ. ಇಂತಹ ಅಪ್ಲಿಕೇಶನ್ ಗಳನ್ನು ಬಳಸುವುದನ್ನು ನಿಲ್ಲಿಸಿದರೆ, ಡೇಟಾ ವ್ಯರ್ಥವಾಗುವುದನ್ನು ತಡೆಯಬಹುದಾಗಿದೆ.

Leave A Reply

Your email address will not be published.