ಓದುಗರೇ ನಿಮಗೊಂದು ಚಾಲೆಂಜ್ : ಎಲೆಗಳ ನಡುವೆ ಅಡಗಿ ಕೂತಿರೋ ಹಕ್ಕಿಯನ್ನು ಹುಡುಕಬಲ್ಲಿರಾ?

Optical Illusion Photo : ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ. ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ.

 

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆ(Optical Illusion Photo )ಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು,ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಎಲೆಗಳ ನಡುವೆ ಅಡಗಿ ಕೂತಿರೋ ಹಕ್ಕಿಗಳನ್ನು ಹುಡುಕುವುದು.

ಸೆಕೆಂಡುಗಳ ಲೆಕ್ಕದಲ್ಲಿ ಸಮಯ ಕೊಟ್ಟಾಗ ಅನೇಕರಿಗೆ ಇದು ಕಷ್ಟಕರವಾಗಿದ್ದಿದೆ. ಇನ್ನೂ ಕೆಲವರು ಸಮಯ ಮೀರಿದರೂ ಉತ್ತರ ಹುಡುಕುವುದರಲ್ಲಿ ಆಸಕ್ತಿ ವಹಿಸಿರುತ್ತೀರಿ. ಉತ್ತರ ಸಿಗದಿದ್ದರೂ ಮೆದುಳಿಗೆ ವ್ಯಾಯಾಮ ನೀಡಲು ಇಂಥ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುವುದು ಉತ್ತಮ.

ಇದೀಗ ಸತ್ತ ಕಂದು ಎಲೆಗಳ ಗುಂಪಿನ ನಡುವೆ ಹಕ್ಕಿಯೊಂದು ಅಡಗಿ ಕೂತಿರೋ ಆಪ್ಟಿಕಲ್ ಭ್ರಮೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ಅಡಗಿರುವ ಹಕ್ಕಿಯನ್ನು ನೋಡುಗರಾದ ನೀವೂ ಹುಡುಕಬೇಕಾಗಿದೆ. ಎಲೆಗಳು, ಕೊಂಬೆಗಳು ಮತ್ತು ಕೊಂಬೆಗಳು ನೋಡುಗರಿಗೆ ಗೊಂದಲವನ್ನುಂಟುಮಾಡುತ್ತಿದ್ದು, ಕಣ್ಣಿಗೆ ಒಳ್ಳೆಯ ಕೆಲಸ ನೀಡುತ್ತಿದೆ. ಈಗ ನಿಮಗೆ ಸಹಾಯ ಮಾಡಲೆಂದು ಒಂದು ಸಲಹೆ ನೀಡುತ್ತೇವೆ. ಬಲಭಾಗದ ಮಧ್ಯೆ ಸೂಕ್ಷ್ಮವಾಗಿ ನೋಡಿದರೆ ಹಕ್ಕಿ ಕಾಣಿಸುತ್ತದೆ. ಇದನ್ನು ಪತ್ತೆಹಚ್ಚೋ ಕೆಲಸ ನಿಮ್ಮದು. ಚಾಲೆಂಜ್ ಅಂದ್ರೆ ನಿಮಗಿರೋದು ಎಂಟು ಸೆಕೆಂಡು. ಬೇಗ ಬೇಗ ನಿಮ್ಮ ಕೆಲಸ ಶುರು ಹಚ್ಚಿಕೊಳ್ಳಿ..

ಎಂಟು ಸೆಕೆಂಡ್​ ಸಮಯದಲ್ಲಿ ಹುಡುಕಾಟ ನಡೆಸಿದ್ರೋ ಇಲ್ವೋ ಗೊತ್ತಿಲ್ಲ. ಆದ್ರೆ, ಹುಡುಕಿ ಸಾಕಾಗಿ ಚಾಲೆಂಜ್ ಅಲ್ಲಿ ಸೋತ್ರೀ ಅಂತ ಒಪ್ಪಿಕೊಂಡೋರು ಮಾತ್ರ ಈ ಕೆಳಗಿನ ಚಿತ್ರ ನೋಡಿ. ಒಂದು ವೇಳೆ ನೀವು ಮೊದಲೇ ಪತ್ತೆ ಹಚ್ಚಿದ್ರಿ ಎಂದಿದ್ರೆ ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದೆ ಎಂದು ಭಾವಿಸಿಕೊಳ್ಳಿ. ಇನ್ನೂ ಗುರುತಿಸಲು ಆಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿರುವವರು ಈ ಕೆಳಗಿನ ಚಿತ್ರವನ್ನು ನೋಡಿ ಉತ್ತರ ಪಡೆದುಕೊಳ್ಳಿ..ಮಾರ್ಕ್ ಮಾಡಿದ ಜಾಗ ಗಮನಿಸಿದ ಮೇಲೆ ನಿಮಗೆ ಹುಡುಕುತ್ತಿರುವ ಚಿತ್ರವು ಸ್ಪಷ್ಟವಾಗಿ ಕಾಣುತ್ತದೆ. ಅದೇ ಆಪ್ಟಿಕಲ್​ ಇಲ್ಲ್ಯೂಷನ್​ಗಾಗಿ ಚಿತ್ರಿಸಿದ ಡ್ರಾಯಿಂಗ್​, ರೇಖಾಚಿತ್ರಗಳ ಗುಟ್ಟು.

Leave A Reply

Your email address will not be published.