ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ : ವ್ಯಾಪಾರ ಪ್ರಾರಂಭಿಸಲು ಈ ಯೋಜನೆ ಮೂಲಕ ಪಡೆಯಬಹುದು 10 ಲಕ್ಷದವರೆಗೆ ಸಾಲ!

Mudra Loan : ಸರ್ಕಾರವು ಜನರಿಗೆ ನೆರವಾಗುವ ನಿಟ್ಟಿನಿಂದ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಬಂದಿದ್ದು, ಅವುಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಸಾಲ ( Mudra Loan) ಯೋಜನೆ ಕೂಡ ಒಂದು. ದೇಶದಾದ್ಯಂತ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೆಗೊಳಿಸಿದೆ.

 

ಮುದ್ರಾ ಸಾಲದ ಮೇಲೆ ಯಾವುದೇ ಸ್ಥಿರ ಬಡ್ಡಿ ದರವಿಲ್ಲ. ಸಾಮಾನ್ಯವಾಗಿ ಕನಿಷ್ಠ ಬಡ್ಡಿ ದರವು 12% ಆಗಿದೆ. ವ್ಯಾಪಾರವನ್ನ ಪ್ರಾರಂಭಿಸಲು ಸುಲಭವಾಗಿ ಸಾಲವನ್ನ ಪಡೆಯಬಹುದು. ಈ ಯೋಜನೆಯಲ್ಲಿ 10 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ. ಅಲ್ಲದೆ ಈ ಸಾಲವನ್ನು ಪಾವತಿಸಲು 3 ಅಥವಾ 5 ವರ್ಷಗಳ ಕಾಲಾವಕಾಶ ನೀಡುತ್ತದೆ. ವಾಣಿಜ್ಯ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, MFI ಗಳು ಮತ್ತು NBFC ಗಳ ಮೂಲಕ ಉದ್ಯಮಿಗಳಿಗೆ ಈ ಸಾಲಗಳನ್ನು ಒದಗಿಸಲಾಗುತ್ತದೆ.

ಈ ಸಾಲ ಪಡೆಯಲು ನೀವು ಸಂಪೂರ್ಣ ವ್ಯಾಪಾರ ಯೋಜನೆಯನ್ನು ಹೊಂದಿರಬೇಕು. ಇದರ ಹೊರತಾಗಿ ಆಧಾರ್ ಕಾರ್ಡ್, ಪಾಸ್ಪೋರ್ಟ್, ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಯಾವುದೇ ಇತರ ಅಗತ್ಯವಿರುವ ಯುಟಿಲಿಟಿ ಬಿಲ್. ಮತ್ತೊಂದೆಡೆ, ನೀವು SC-ST ಅಥವಾ OBC ವರ್ಗಕ್ಕೆ ಸೇರಿದವರಾಗಿದ್ದರೆ ನಿಮ್ಮ ಜಾತಿ ಪ್ರಮಾಣಪತ್ರವನ್ನು ಸಹ ನೀವು ಸಲ್ಲಿಸಬೇಕು. ಅದೇ ಸಮಯದಲ್ಲಿ ಈ ಸಾಲಕ್ಕೆ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಆದಾಯ ಪ್ರಮಾಣಪತ್ರವನ್ನು ಸಹ ನೀಡಬೇಕು. ಇದರೊಂದಿಗೆ ನಿಮ್ಮ ವ್ಯಾಪಾರ, ವಿಳಾಸ, ವ್ಯಾಪಾರದ ಯಾವುದೇ ಪುರಾವೆಗಳನ್ನು ಒದಗಿಸಬೇಕು.

ಅರ್ಜಿ ಸಲ್ಲಿಕೆ :
*ಪ್ರಧಾನ ಮಂತ್ರಿ ಮುದ್ರಾ ಯೋಜನೆ ವೆಬ್ಸೈಟ್ ಗೆ ಭೇಟಿ ನೀಡಿ, ಮುಖಪುಟದಲ್ಲಿ ಮುದ್ರಾ ಲೋನ್ಗೆ ಅನ್ವಯಿಸು ಲಿಂಕ್ ಮಾಡಿ.
* ನಂತರ ನಿಮ್ಮ ಫೋನ್ಗೆ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್’ನ್ನ SMS ಮೂಲಕ ಕಳುಹಿಸಲಾಗುತ್ತದೆ. ಎಲ್ಲಾ ಅಗತ್ಯ ದಾಖಲೆಗಳನ್ನ ತಯಾರಿಸಿ.
* ನಂತರ ಅರ್ಜಿ ನಮೂನೆಯನ್ನ ಸಂಪೂರ್ಣವಾಗಿ ಭರ್ತಿ ಮಾಡಿ, ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

ಅಧಿಕೃತ ವೆಬ್ಸೈಟ್ : udyamimitra.in

Leave A Reply

Your email address will not be published.