C.M. Ibrahim: ಕಾಂಗ್ರೆಸ್ನಲ್ಲಿ ಇರೋರೆಲ್ಲ ಕತ್ತೆಗಳೇ, ಒಂದೂ ಕುದುರೆಗಳಿಲ್ಲ!!!ಸಿದ್ದರಾಮಯ್ಯರನ್ನು ಕೆಣಕಿದ ಸಿ.ಎಂ.ಇಬ್ರಾಹಿಂ

Share the Article

C.M.Ibrahim: ಕಾಂಗ್ರೆಸ್​(Congress) ಪಕ್ಷದಲ್ಲಿ ಕುದುರೆ ಇರಲೇ ಇಲ್ಲ, ಬರೀ ಕತ್ತೆಗಳಿದ್ದವು. ನಾನು ಸಾಬ್ರು ಅಲ್ಲಿದ್ದೆ, ನಾನು ಅದಕ್ಕೆಲ್ಲಾ ಮಾಲೀಶ್ ಮಾಡಿ ಕುದುರೆ ಮಾಡಿದ್ದೆ. ಸದ್ಯ ನಾನು ಕಾಂಗ್ರೆಸ್ ಬಿಟ್ಟಾಗಿದೆ. ಈಗ ಆ ಪಕ್ಷದಲ್ಲಿರುವುದೆಲ್ಲಾ ಬರೀ ಕತ್ತೆಗಳೇ ಎಂದು ಜೆಡಿಎಸ್(JDS) ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (C.M.Ibrahim) ಅವರು ಹೇಳಿದ್ದಾರೆ.

ಹೌದು, ತಮ್ಮ ತೀಕ್ಷ್ಣವಾದ, ವ್ಯಂಗ್ಯವಾದಾ ಹಾಗೂ ಪ್ರಬುದ್ಧವಾದ ಮಾತುಗಳ ಮೂಲಕ ಸದಾ ಸುದ್ಧಿಯಲ್ಲಿರುವವರೆಂದರೆ ಪ್ರಸ್ತುತ ಜೆಡಿಎಸ್ ನ ರಾಜ್ಯಾದಕ್ಷರಾದ ಸಿಎಂ ಇಬ್ರಾಹಿಂ(C.M Ibrahim) ಅವರು. ಇಂತಹ ನುಡಿಗಳಿಂದಲೇ ಇಬ್ರಾಹಿಂ ಪ್ರತಿಪಕ್ಷಗಳನ್ನು ತಿವಿಯುತ್ತಿರುತ್ತಾರೆ. ಅಂತೆಯೇ ಇದೀಗ ಕಾಂಗ್ರೆಸ್ಸಿನಲ್ಲಿರುವವರೆಲ್ಲ ಕತ್ತೆಗಳು, ಅಲ್ಲಿ ಯಾವ ಕುದುರೆಗಳು ಇಲ್ಲ ಎಂದು ವ್ಯಂಗ್ಯದೊಂದಿಗೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ(Sidharamahya)ನವರಿಗೆ ಟಾಂಗ್ ನೀಡಿದ್ದಾರೆ.

ಕಳೆದ ಸಲ ವಿಧಾನಸಭೆಯ ಚುನಾವಣೆ(Assembly Election) ಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಗದ ಕಾರಣ ಬಿಜೆಪಿಗೆ ಅಧಿಕಾರ ಸಿಗಬಾರದೆಂಬ ಆಶಯದೊಂದಿಗೆ ಕಾಂಗ್ರೆಸ್, ಜೆಡಿಎಸ್​ ಜೊತೆ ಸೇರಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿತ್ತು. ಆದರೆ ಈ ಸರ್ಕಾರ ಒಂದೇ ವರ್ಷಕ್ಕೆ ಪತನಗೊಂಡಿತ್ತು. ಇದನ್ನು ಟೀಕಿಸುತ್ತಾ ಸಿದ್ದರಾಮಯ್ಯ ಅವರು, ಕೊಟ್ಟ ಕುದುರೆಯನ್ನ ಏರದವ ವೀರನನೂ ಅಲ್ಲಾ ಶೂರನೂ ಅಲ್ಲಾ ಎಂದು ಕುಮಾರಸ್ವಾಮಿ ಅವರನ್ನು ಟೀಕಿಸಿದ್ದರು. ಇದೀಗ ಈ ಮಾತಿಗೆ ಇಬ್ರಾಹಿಂ ‘ಕಾಂಗ್ರೆಸ್​ ಪಕ್ಷದಲ್ಲಿ ಕುದುರೆ ಇರಲೇ ಇಲ್ಲ, ಬರೀ ಕತ್ತೆಗಳಿದ್ದವು. ನಾನು ಸಾಬ್ರು ಅಲ್ಲಿದ್ದೆ, ನಾನು ಅದಕ್ಕೆಲ್ಲಾ ಮಾಲೀಶ್ ಮಾಡಿ ಕುದುರೆ ಮಾಡಿದ್ದೆ. ಸದ್ಯ ನಾನು ಕಾಂಗ್ರೆಸ್ ಬಿಟ್ಟಾಗಿದೆ. ಈಗ ಆ ಪಕ್ಷದಲ್ಲಿರುವುದೆಲ್ಲಾ ಬರೀ ಕತ್ತೆಗಳೇ’ ಎಂದು ತಮ್ಮ ಧಾಟಿಯಲ್ಲೇ ಎದುರಾಡಿದ್ದಾರೆ.

ಈ ಕುರಿತು ಹಿಂದೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ(Kumaraswamy) ಅವರು ‘ನೀವೆ ಸಿಎಂ ಸ್ಥಾನ ತಗೊಂಡು‌ ಕೆಲಸ ಮಾಡಿ ಅಂದಿದ್ದೆ. ಆದರೆ ಏನಾಯ್ತು ಅಂತ ಸಿದ್ದರಾಮಯ್ಯ ಅವರು ಜನತೆ ಮುಂದೆ ಹೇಳಲಿ. ಅವರು ಕೊಟ್ಟ ಕುದುರೆ ಹೇಗಿತ್ತು ಅಂದರೆ, ಕುದುರೆಯ ನಾಲ್ಕು ಕಾಲು ಮುರಿದು ಓಡಿಸಲು ಬಿಟ್ಟಿದ್ದರು’ ಎಂದು ಹೇಳಿದ್ದರು.

ಸಿಎಂ ಇಬ್ರಾಹಿಂ ಅವರು ತಮ್ಮ ರಾಜಕೀಯ ಆರಂಭವನ್ನು ಶುರು ಮಾಡಿದ್ದು ಜೆಡಿಎಸ್ ಪಕ್ಷದಿಂದಲೇ. ದೇವೇಗೌಡರು(Devegowda) ಪ್ರಧಾನಿಯಾಗಿದ್ದಂತ ಸಂದರ್ಭದಲ್ಲಿ ಅವರು ದೇವೇಗೌಡರ ಬಲಗೈಯಂತೆ ಕಾರ್ಯನಿರ್ವಹಿಸಿದ್ದರು. ತದನಂತರ ಕಾರಣಾಂತರಗಳಿಂದ ಅವರು ಜೆಡಿಎಸ್ ನಿಂದ ಉಚ್ಚಾಟನೆಗೊಂಡು ಕಾಂಗ್ರೆಸ್ ಪಕ್ಷವನ್ನು ಸೇರುವಂತಾಯಿತು. ಆದರೆ ಇದೀಗ ಮತ್ತೆ ಕಾಂಗ್ರೆಸ್ ನಲ್ಲಿ ಮನಸ್ತಾಪಗಳು ಉಂಟಾಗಿ ವಾಪಸ್ಸು ಜೆಡಿಎಸ್ ಪಕ್ಷಕ್ಕೆ ಸೇರಿ ಜೆಡಿಎಸ್ ನ ರಾಜ್ಯ ಅಧ್ಯಕ್ಷರಾಗಿದ್ದಾರೆ.

Leave A Reply