Bharat Jodo 2.0: 2ನೇ ಹಂತದ ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ತಯಾರಿ! ಎಲ್ಲಿಂದ ಎಲ್ಲಿಗೆ ಗೊತ್ತ 2.0 ಯಾತ್ರೆ?

Bharat Jodo 2.0: ದಕ್ಷಿಣ ಭಾರತದ ಕನ್ಯಾಕುಮಾರಿ (Kanyakumari) ಯಿಂದ ಉತ್ತರದ ಕಾಶ್ಮೀರ(Kashmira)ದವರೆಗೆ ನಡೆದ ಕಾಂಗ್ರೆಸ್‌(Congress) ಪಕ್ಷದ ಭಾರತ್‌ ಜೋಡೋ ಯಾತ್ರೆ(Bharat Jodo) ದೊಡ್ಡ ಮಟ್ಟದ ಯಶಸ್ಸು ಕಂಡು ದೇಶದ ಗಮನ ಸೆಳೆದಿತ್ತು. ಇದರ ಸಮಾರೋಪವೂ ಕಾಶ್ಮೀರದಲ್ಲಿ ಸಂಪನ್ನಗೊಂಡಿತ್ತು. ಆದರೀಗ ಮತ್ತೆ ಯಾತ್ರೆಯ 2ನೇ ಭಾಗವನ್ನು ಆರಂಭ ಮಾಡಲು ಕಾಂಗ್ರೆಸ್‌ ಸಿದ್ಧತೆ ನಡೆಸಿದ್ದು, ಅರುಣಾಚಲ(Arunachalam) ಪ್ರದೇಶದಿಂದ ಗುಜರಾತ್‌ನ(Gujarath)ವರೆಗೆ ಭಾರತ್ ಜೋಡೋ ಯಾತ್ರೆ 2.0 ( Bharat Jodo 2.0) ನಡೆಸಲು ತೀರ್ಮಾನ ಮಾಡಿದೆ.

ಹೌದು, ಜೋಡೋ ಯಾತ್ರೆಯು ಕಾಂಗ್ರೆಸ್‌ ಪಕ್ಷದ ಪಾಲಿಗೆ ದೊಡ್ಡ ಮಟ್ಟದ ಹುಮ್ಮಸ್ಸನ್ನು ಹಾಗೂ ಯಶಸ್ಸನ್ನು ನೀಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ 2ನೇ ಹಂತದ ಯಾತ್ರೆ ನಡೆಸುವತ್ತ ದೃಷ್ಟಿ ಹರಿಸಿದೆ. ಅಂದ್ರೆ ದಕ್ಷಿಣದಿಂದ ಉತ್ತರದ ಯಾತ್ರೆ ಮುಗಿಯಿತು. ಇದೀಗ ಪೂರ್ವದಿಂದ ಪಶ್ಚಿಮದ ಯಾತ್ರೆಗೆ ಪಕ್ಷ ರೆಡಿಯಾಗ್ತಿದೆ. ಈ ಕುರಿತು ಮಾಹಿತಿ ಹಂಚಿಕೊಂಡ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ (Jairam Ramesh) ‘ಸಾಕಷ್ಟು ಉತ್ಸಾಹ ಮತ್ತು ಶಕ್ತಿ ನಮ್ಮಲ್ಲಿ ಇದೆ. ವೈಯಕ್ತಿಕವಾಗಿ ಇದು ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಪೂರ್ವದಿಂದ ಪಶ್ಚಿಮಕ್ಕೆ ಕೈಗೊಳ್ಳುವ ಯಾತ್ರೆಯ ಸ್ವರೂಪವು, ದಕ್ಷಿಣದಿಂದ ಉತ್ತರಕ್ಕೆ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆಯ ಸ್ವರೂಪಕ್ಕಿಂತ ಭಿನ್ನವಾಗಿರಲಿದೆ’ ಎಂದು ತಿಳಿಸಿದ್ದಾರೆ.

ಅಲ್ಲದೆ ಪೂರ್ವದಿಂದ ಪಶ್ಚಿಮಕ್ಕೆ ಕೈಗೊಳ್ಳುವ ಯಾತ್ರೆಯು ಬಹುಶಃ ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಗುಜರಾತ್‌ನ ಪೋರಬಂದರ್‌ವರೆಗೆ ನಡೆಯಬಹುದು ಎಂದು ಜೈರಾಮ್‌ ಸುಳಿವು ಕೊಟ್ಟಿದ್ದಾರೆ. ಈ ಮಾರ್ಗದಲ್ಲಿ ಕಾಡುಗಳು, ನದಿಗಳು ಹೆಚ್ಚಾಗಿವೆ. ಪ್ರಮುಖವಾಗಿ ಇದು ಪಾದಯಾತ್ರೆಯಾಗಲಿದೆ. ಏಪ್ರಿಲ್‌ನಲ್ಲಿ ಕರ್ನಾಟಕ(Karnataka)ದಲ್ಲಿ ಚುನಾವಣೆ, ಜೂನ್‌(June)ನಿಂದ ಮಳೆ ಮತ್ತು ನವೆಂಬರ್‌ನಲ್ಲಿ ಮತ್ತೆ ರಾಜ್ಯ ಚುನಾವಣೆಗಳು ಇರುವುದರಿಂದ ಯಾತ್ರೆಯನ್ನು ಜೂನ್‌ಗಿಂತ ಮೊದಲು ಅಥವಾ ನವೆಂಬರ್‌(Navember)ಗಿಂತ ಮೊದಲು ಕೈಗೊಳ್ಳಬೇಕಾಗಬಹುದು. ಈ ಯಾತ್ರೆಯು ಭಾರತ್ ಜೋಡೋ ಯಾತ್ರೆಗಿಂತ ಕಡಿಮೆ ಅವಧಿಯದ್ದಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಇದೆಲ್ಲವನ್ನೂ ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Ghandi) ಹಾಗೂ ಅವರ ಸಂಗಡಿಗರು ಕಳೆದ ವರ್ಷದ ಸೆಪ್ಟೆಂಬರ್ ನಿಂದ ಈ ವರ್ಷದ ಜನವರಿ ಅವರಿಗೂ ಕೈಗೊಂಡಂತಹ ಮೊದಲ ಹಂತದ ಭಾರತ್ ಜೋಡೋ ಯಾತ್ರೆಯು, ಕನ್ಯಾಕುಮಾರದಿಂದ ಕಾಶ್ಮೀರದವರೆಗೂ ಸಾಗಿತ್ತು. ಇದು ಬರೋಬ್ಬರಿ 4 ಸಾವಿರ ಕಿಲೋಮೀಟರಿನ ಯಾತ್ರೆಯಾಗಿತ್ತು. ಯಾತ್ರೆಯ ವೇಳೆ ರಾಹುಲ್ ಹೋದಲ್ಲೆಲ್ಲ ಆಯಾ ಪ್ರಾಂತ್ಯದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ರಾಹುಲ್ ಗಾಂಧಿಯವರಿಗೆ ಸಾಥ್ ನೀಡಿ, ಯಾತ್ರೆಯು ಯಶಸ್ಸನ್ನು ಕಾಣಲು ಸಹಕಾರಿಯಾಗಿದ್ದಾರೆ.

Leave A Reply

Your email address will not be published.