ಈ ಆರೋಗ್ಯ ಸಮಸ್ಯೆ ಇರೋರು ತಿನ್ನಲೇ ಬಾರದು ಟೊಮೆಟೊ : ಇದ್ರಿಂದಾಗೋ ಅನಾನುಕೂಲಗಳು ಇಲ್ಲಿದೆ ನೋಡಿ
Tomato side effects: ಟೊಮೆಟೊದಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಟೊಮೆಟೊದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ, ತಾಮ್ರ ಮತ್ತು ನಿಯಾಸಿನ್‌ನಂತಹ ಪೋಷಕಾಂಶಗಳು ಟೊಮೆಟೊದಲ್ಲಿವೆ. ಟೊಮೆಟೊ ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ. ಆದ್ರೆ ಯಾವುದೇ ತರಕಾರಿಯಾಗ್ಲಿ, ಹಣ್ಣಾಗ್ಲಿ, ಒಣ ಹಣ್ಣುಗಳಾಗ್ಲಿ ಎಲ್ಲವನ್ನೂ ಮಿತಿ ಮೀರಿ ಸೇವನೆ ಮಾಡುವುದು ಒಳ್ಳೆಯದಲ್ಲ. ಎಲ್ಲದಕ್ಕೂ ಒಂದು ಮಿತಿ ಇರಬೇಕು.
ಹಾಗೆಯೇ ಟೊಮೆಟೊ ಸೇವನೆಗೂ ಒಂದು ನಿಯಂತ್ರಣವಿರಬೇಕು. ಎಲ್ಲ ಪದಾರ್ಥಕ್ಕೆ ಹಾಗೂ ಪ್ರತಿ ದಿನ ಟೊಮೆಟೊ ಸೇವನೆ ಒಳ್ಳೆಯದಲ್ಲ. ಟೊಮೆಟೊ ಅತಿಯಾದ ಸೇವನೆಯಿಂದ ಸಾಕಷ್ಟು ಅನಾನುಕೂಲವಿದೆ. ಹಾಗಿದ್ರೆ ಬನ್ನಿ ಟೊಮೆಟೊವನ್ನು ಯಾರು ಸೇವನೆ ಮಾಡ್ಬಾರದು. ಇದರಿಂದ ಆರೋಗ್ಯಕ್ಕೆ ಆಗುವ ಅನಾನುಕೂಲಗಳು (Tomato side effects) ಏನು ಎಂಬುದನ್ನು ಹೇಳುತ್ತೇವೆ ನೋಡಿ.
ಹೊಟ್ಟೆಯ ಸಮಸ್ಯೆ :
ಟೊಮೆಟೊ ಸೇವಿಸಿದರೆ ನಿಮಗೆ ಹಲವಾರು ತೊಂದರೆಗಳು ಉಂಟಾಗಬಹುದು. ಮತ್ತೊಂದೆಡೆ, ನೀವು ಆಹಾರವನ್ನು ಸೇವಿಸಿದ ನಂತರ ಹೊಟ್ಟೆ ಉಬ್ಬುವ ಸಮಸ್ಯೆ ಕಾಡಿದರೆ, ಟೊಮೆಟೊ ಸೇವನೆ ನಿಲ್ಲಿಸಿ. ಇದನ್ನು ಸೇವಿಸುವುದರಿಂದ ಕರುಳಿನ ಸಮಸ್ಯೆ ಉಂಟಾಗುತ್ತದೆ. ಮತ್ತೊಂದೆಡೆ, ನೀವು ಈಗಾಗಲೇ ಮಲಬದ್ಧತೆಯ ಹೊಂದಿದ್ದರೆ, ನೀವು ತಪ್ಪಿಯೂ ಸಹ ಟೊಮೆಟೊ ಸೇವಿಸಬಾರದು.
ಅಲರ್ಜಿ ಸಮಸ್ಯೆ :
ಟೊಮೆಟೊದಲ್ಲಿರುವ ಹಿಸ್ಟಮಿನ್ ಸಂಯುಕ್ತವು ಅಲರ್ಜಿಯನ್ನು ಉಂಟುಮಾಡಬಹುದು. ಆದ್ದರಿಂದ, ಟೊಮೆಟೊವನ್ನು ಅತಿಯಾಗಿ ಸೇವಿಸುವುದರಿಂದ ಕೆಮ್ಮು, ಸೀನುವಿಕೆ, ಗಂಟಲು ಸುಡುವಿಕೆ, ಮುಖ ಮತ್ತು ನಾಲಿಗೆ ಊತ ಉಂಟಾಗುತ್ತದೆ. ಆದರೆ ನಿಮಗೆ ಈಗಾಗಲೇ ಅಲರ್ಜಿಯ ಸಮಸ್ಯೆ ಇದ್ದರೆ, ನೀವು ಟೊಮೆಟೊ ಸೇವನೆಯನ್ನು ತಪ್ಪಿಸಬೇಕು.
ಕಿಡ್ನಿ ಸ್ಟೋನ್ ಸಮಸ್ಯೆ :
ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಟೊಮೆಟೊಗಳು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುವುದೇ ಇದಕ್ಕೆ ಕಾರಣ. ಆದ್ದರಿಂದ, ನೀವು ಸಹ ಇದನ್ನು ಹೆಚ್ಚು ಸೇವಿಸಿದರೆ, ಇಂದೇ ಜಾಗರೂಕರಾಗಿರಿ. ಏಕೆಂದರೆ ಇದರ ಸೇವನೆಯು ನಿಮಗೆ ಸಮಸ್ಯೆಗಳನ್ನು ತಂದೊಡ್ಡಬಹುದು.
ಎಸಿಡಿಟಿ :
ಇತ್ತೀಚಿನ ದಿನಗಳಲ್ಲಿ ಎಸಿಡಿಟಿ ಸಮಸ್ಯೆ ಹೆಚ್ಚಾಗ್ತಿದೆ. ಟೊಮೆಟೊದಲ್ಲಿ ಆಮ್ಲೀಯತೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಟೊಮೆಟೊವನ್ನು ಅತಿಯಾಗಿ ತಿಂದರೆ ಎಸಿಡಿಟಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಕೆಲವರಿಗೆ ಟೊಮೆಟೊ ಸೇವನೆ ನಂತ್ರ ಎದೆ ಉರಿ ಸಮಸ್ಯೆ ಕಾಣಿಸಿಕೊಳ್ಳುವುದು ಇದೇ ಕಾರಣಕ್ಕೆ.