ಕಾಂತಿಯುತ, ಆರೋಗ್ಯಕರವಾಗಿ ನಿಮ್ಮ ಮುಖದ ಸೌಂದರ್ಯ ಕಾಪಾಡಲು ಇಲ್ಲಿದೆ ಟಿಪ್ಸ್!
Skin Tips : ‘ಅಂದ’ ಎನ್ನುವಂತದ್ದು ಪ್ರತಿಯೊಬ್ಬ ಮನುಷ್ಯನ ಆಕರ್ಷನೀಯ ಭಾಗವಾಗಿರುತ್ತದೆ. ಹೀಗಾಗಿ, ಪ್ರತಿಯೊಬ್ಬರು ಕೂಡ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಮುಖದಲ್ಲಿ ಒಂದು ಕಲೆಯೂ ಆಗದಂತೆ ಆರೈಕೆ ಮಾಡುತ್ತಾರೆ. ಇಂದಿನ ಫ್ಯಾಷನ್ ಯುಗದಲ್ಲಿ ಪ್ರತಿಯೊಬ್ಬರು ಕೂಡ ತಮ್ಮನ್ನು ತಾವು ಚಂದ ಕಾಣಿಸಿಕೊಳ್ಳಲು ಹಲವು ಬ್ಯೂಟಿ ಟಿಪ್ಸ್ (Beauty Tips) ಗಳನ್ನು ಪಾಲಿಸಿಯೇ ಪಾಲಿಸುತ್ತಾರೆ.
ಅದರಲ್ಲೂ ಹುಡುಗಿಯರು ಅಂದ್ರೆ ಒಂದು ಕೈ ಮೇಲೆಯೇ ಎಂಬುದು ಎಲ್ಲರಿಗೂ ತಿಳಿದಿರೋ ವಿಷಯ. ಕೇವಲ ಮುಖದ ಸೌಂದರ್ಯ ಕಾಪಾಡಿ ಕೊಳ್ಳದೆ ಉಗುರು, ತಲೆ ಕೂದಲು ಹೀಗೆ ಆರೈಕೆ ಮಾಡುವುದರ ಮೂಲಕ ತಮ್ಮನ್ನು ತಾವು ಸುಂದರವಾಗಿಸುತ್ತಾರೆ. ಹೆಚ್ಚಿನವರು ತಮ್ಮ ಸೌಂದರ್ಯ ವೃದ್ಧಿಗೆ ಹಲವು ಕ್ರೀಮ್ ಗಳನ್ನು ಬಳಸುತ್ತಾರೆ. ಆದ್ರೆ, ಹೆಚ್ಚಿನ ಕೆಮಿಕಲ್ ಯುಕ್ತ ಕ್ರೀಮ್ ಗಳು ಆರೋಗ್ಯಕ್ಕೆ ಒಳಿತಲ್ಲ.
ಚರ್ಮದ ಆರೋಗ್ಯದ (Skin Tips) ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಆದ್ದರಿಂದ ನಿಮ್ಮ ತ್ವಚೆಯನ್ನು ಅತ್ಯಂತ ಆರೋಗ್ಯಕರ, ಕಾಂತಿಯುತವಾಗಿ ಹಾಗೂ ಯಾವುದೇ ಅಲರ್ಜಿ ಉಂಟಾಗದಂತೆ ಕಾಪಾಡಬೇಕು. ಹಾಗಿದ್ರೆ ಬನ್ನಿ ಕೆಲವೊಂದು ಟಿಪ್ಸ್ ಗಳನ್ನು ಪ್ರತಿದಿನ ಫಾಲೋ ಮಾಡಿ, ನಿಮ್ಮ ಸೌಂದರ್ಯ ವೃದ್ಧಿಸಲು ನಾವು ಸಹಾಯ ಮಾಡುತ್ತೇವೆ.
ನೆತ್ತಿಯ ಭಾಗಕ್ಕೆ ತೇವಾಂಶ ಅಗತ್ಯ:
ನೀವು ಸ್ನಾನ ಮಾಡುವಂತಹ ಸಮಯದಲ್ಲಿ ನೆತ್ತಿಯ ಮೇಲೆ ಶಾಂಪು ಹಚ್ಚಿದ ಬಳಿಕ ತಕ್ಷಣ ತೊಳೆದು ಬಿಡಬೇಡಿ. ನೀವು ತಲೆ ತೊಳೆಯುವ ಮೊದಲು ಕೆಲವು ನಿಮಿಷಗಳ ಕಾಲ ಶಾಂಪು ನೆತ್ತಿಯ ಮೇಲೆ ಹಾಗೆಯೇ ಬಿಡಿ. ಇದರಿಂದ ನೀವು ವ್ಯಾತ್ಯಾಸಗಳನ್ನು ಕಾಣಬಹುದು.
ಸ್ನಾನದ ನಂತರ ಮಾಯಿಶ್ಚರೈಸರ್ ಹಚ್ಚಿ:
ಸ್ನಾನ ಮಾಡಿ ಬಂದ ಕೂಡಲೇ ಚರ್ಮವು ಒದ್ದೆಯಾಗಿರುವುದರಿಂದ ಆ ಸಮಯದಲ್ಲಿ ಮಾಯಿಶ್ಚರೈಸರ್ ಹಚ್ಚುವುದು ತುಂಬಾ ಅಗತ್ಯವಾಗಿದೆ. ಯಾಕೆಂದರೆ ಚರ್ಮವು ಮಾಯಿಶ್ಚರೈಸರ್ ನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಮತ್ತು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಸಾಕಷ್ಟು ಲೇಯರ್ಗಳನ್ನು ಮುಖದ ಮೇಲೆ ಹಾಕುವುದನ್ನು ತಪ್ಪಿಸಿ:
ವಿಶೇಷ ಕಾರ್ಯಕ್ರಮಗಳ ಹೊರತಾಗಿಯೂ ಪ್ರತೀ ದಿನ ಸಾಕಷ್ಟು ಅಂದರೆ ಒಂದರ ಮೇಲೋಂದು ಕ್ರಿಮ್ಗಳನ್ನು ಬಳಸುವ ಅಭ್ಯಾಸ ನಿಮಗಿದ್ದರೆ, ಆದಷ್ಟು ಬಿಟ್ಟು ಬಿಡಿ. ನೀವು ಪ್ರತಿ ದಿನ ಅತಿಯಾದ ಕ್ರೀಮ್ಗಳನ್ನು ಬಳಸುವುದರಿಂದ ಅದರಲ್ಲಿರುವ ಕೆಮಿಕಲ್ ಮುಖಕ್ಕೆ ಹಾನಿಯುಂಟು ಮಾಡಬಹುದು.
ಎಕ್ಸ್‌ಫೋಲಿಯಂಟ್ ಅತಿಯಾಗಿ ಬಳಸಬೇಡಿ:
ಕೆಮಿಕಲ್ ಎಕ್ಸ್‌ಫೋಲಿಯಂಟ್‌ಗಳು ವಾಸನೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನದ ಸ್ನಾನದ ನಂತರ ಅಂಡರ್ ಆರ್ಮ್ಸ್ ಗಳಿಗೆ ಎಕ್ಸ್‌ಫೋಲಿಯಂಟ್ ಬಳಸಿ. ಚಿಕ್ಕ ಹತ್ತಿ ಉಂಡೆಯನ್ನು ತೆಗೆದುಕೊಂಡು ಒಂದರಿಂದ ಎರಡು ಹನಿಗಳಷ್ಟು ಮಾತ್ರ ಬಳಸಿ. ಯಾಕೆಂದರೆ ಇದು ಸೂಕ್ಷ್ಮ ಪ್ರದೇಶವಾಗಿದೆ.
ಕಣ್ಣುಗಳಿಗೆ ಬಳಸಲಾಗುವ ಸೌಂದರ್ಯ ವರ್ಧಕಗಳ ಬಗ್ಗೆ ಎಚ್ಚರವಿರಲಿ:
ವಿಶೇಷವಾಗಿ ಕಣ್ಣುಗಳ ಕೆಳಭಾಗಕ್ಕೆ ಬಳಸಲಾಗುವ ಕ್ರೀಮ್ ಅಥವಾ ಯಾವುದೇ ಸೌಂದರ್ಯ ವರ್ಧಕಗಳನ್ನು ಕಣ್ಣಿನ ಕೆಳಭಾಗದಿಂದ ಸ್ವಲ್ಪ ದೂರಕ್ಕೆ ಹಚ್ಚಿ. ಯಾಕೆಂದರೆ ಇದು ನಿಮ್ಮ ಕಣ್ಣಿನ ಗುಡ್ಡೆಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ.