Mehndi effects : ಮೆಹಂದಿ ಹಚ್ಚಿದ ಕೆಲವೇ ನಿಮಿಷದಲ್ಲಿ ಮೂರ್ಛೆ ಹೋದ ಬಾಲಕಿ!
Mehndi Effects: ಹೆಣ್ಣು ಮಕ್ಕಳಿಗೆ ಮೆಹೆಂದಿ ಎಂದರೆ ಸಾಕು ಏನೋ ಒಂದು ರೀತಿಯ ಖುಷಿ. ಅದನ್ನು ಕೈಗೆ ಹಚ್ಚಿಕೊಂಡು ಬಣ್ಣ ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲಿಯೂ ಭಾರತೀಯ ಸಂಸ್ಕೃತಿಯಲ್ಲಿ (Indian Culture) ಮೆಹಂದಿ (Mehndi) ಅಥವಾ ಗೋರಂಟಿ ವಿಶೇಷ ಪ್ರಾಧಾನ್ಯತೆ ಹೊಂದಿದೆ. ಮದುವೆ (Marriage) ಮುಂಜಿ ನಿಶ್ಚಿತಾರ್ಥ ರೀತಿಯ ಶುಭ ಸಮಾರಂಭಗಳಲ್ಲಿ ಮಹಿಳೆಯರು ತಮ್ಮ ಕೈಗಳಿಗೆ ಮೆಹೆಂದಿ ಹಚ್ಚಿಕೊಂಡು ಸಂಭ್ರಮಿಸುವ ಪರಿಪಾಠ ಇಂದಿಗೂ ನಡೆಯುತ್ತಿದೆ.ಆದರೆ, ಹೀಗೆ ಮದರಂಗಿ ಹಚ್ಚುವ ಮುನ್ನ ಎಚ್ಚರವಾಗಿರಿ. ಯಾಕೆ ಅಂತೀರಾ?
ಇಂದು ನಾವು ಮಾರುಕಟ್ಟೆಯಲ್ಲಿ ನೋಡುವ ಹೆಚ್ಚಿನ ವಸ್ತುಗಳು ನೈಸರ್ಗಿಕ ಎಂಬ ಲೇಬಲ್ ಅಡಿಯಲ್ಲಿ ರಾಸಾಯನಿಕ ಮಿಶ್ರಿತಗೊಂಡ ಅದೆಷ್ಟೋ ಸಾಮಗ್ರಿಗಳು ನಮ್ಮ ಆರೋಗ್ಯಕ್ಕೆ ತೊಂದರೆ ಉಂಟು ಮಾಡಬಹುದು. ಅದೇ ರೀತಿ, ಅನಾದಿ ಕಾಲದಿಂದಲೂ ಬಳಕೆ ಮಾಡುವ ಗೋರಂಟಿ ಸೊಪ್ಪು ಇತ್ತೀಚೆಗೆ ನೋಡಲು ಸಿಗುವುದೇ ವಿರಳ. ಅದರಲ್ಲಿಯೂ ಮಾರುಕಟ್ಟೆಯಲ್ಲಿ ಲಭ್ಯವಾಗುವ ಮದರಂಗಿ(ಮೆಹೆಂದಿ) ಸುವಾಸನೆಗೆ ಹಾಗೂ ಆಕರ್ಷಣೀಯವಾಗಿ ಕಾಣುವ ನಿಟ್ಟಿನಲ್ಲಿ ನಾನಾ ಬಗೆಯ ರಾಸಾಯನಿಕ ಮಿಶ್ರಣ ಮಾಡಲಾಗುತ್ತದೆ. ಇದರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ, ನೈಸರ್ಗಿಕ ಗೋರಂಟಿಯನ್ನು ಪ್ಯಾರಾ-ಫೆನೈಲೆನೆಡಿಯಮೈನ್ (Para-Phenylenediamine) ಎಂಬ ರಾಸಾಯನಿಕಗಳೊಂದಿಗೆ ಬೆರೆಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆ ಈ ರಾಸಾಯನಿಕ ಹಲವಾರು ಸಮಸ್ಯೆಗಳಿಗೆ ಎಡೆ ಮಾಡಿಕೊಡುವ ಬಗ್ಗೆ ಕೆಲವು ವರದಿಗಳಿಂದ ತಿಳಿದುಬಂದಿದೆ.
ಹಾಗಿದ್ರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೆಬೇಕು.ನೋಡುಗರ ಕಣ್ಮನ ಸೆಳೆಯುವ ಮೆಹೆಂದಿ( Mehndi Effects)ಅನೇಕ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ಕೂಡ ದಟ್ಟವಾಗಿದೆ. ಮೆಹಂದಿ ರೀತಿಯ ಕೆಲವು ವಸ್ತುಗಳಿಂದ ಅಪಸ್ಮಾರ(ಮೂರ್ಛೆ) ರೋಗಿಗಳು ಹೆಚ್ಚು ಸಮಸ್ಯೆಗೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಕೇವಲ ಮೆಹೆಂದಿ ಮಾತ್ರವಲ್ಲದೆ, ಪೆಟ್ರೋಲ್, ಬ್ಲೀಚಿಂಗ್ ಪೌಡರ್ ಇಲ್ಲವೇ ಫೆವಿಕಲ್ನಂತಹ ಅಂಟುಗಳ ವಾಸನೆ ಕೂಡ ಕೆಲವು ಜನರಿಗೆ ಅನಾರೋಗ್ಯ (Sick) ಉಂಟು ಮಾಡಬಹುದು. ಇದಕ್ಕೆ ನಿದರ್ಶನ ಎಂಬಂತೆ,ಒಂಬತ್ತು ವರ್ಷದ ಬಾಲಕಿ ತನ್ನ ಕೈಗೆ ಹಚ್ಚಿದ ಮೆಹಂದಿಯ ವಾಸನೆಯಿಂದ ಅಪಸ್ಮಾರ ಅಥವಾ ಮೂರ್ಛೆ (Epileptic) ರೋಗಕ್ಕೆ ತುತ್ತಾಗಿದ್ದಳು ಎಂಬುದನ್ನು ಜನವರಿ 2023 ಆವೃತ್ತಿಯಲ್ಲಿ ಕ್ಲಿನಿಕಲ್ ನ್ಯೂರೋಫಿಸಿಯಾಲಜಿ ಪ್ರಕಟಿಸಿದ ವರದಿಯ ಮೂಲಕ ಬೆಳಕಿಗೆ ಬಂದಿದೆ.
ಪ್ರಕಾಶಮಾನವಾದ ಬೆಳಕು, ಜೋರು ಧ್ವನಿ, ಮೆಹಂದಿಯಂತಹ (Mehndi Effects)ಹೆಚ್ಚಿನ ಪ್ರಮಾಣದ ವಾಸನೆ ಒಳಗೊಂಡ ಕೆಲವು ಬಣ್ಣಗಳು ಹಾಗೂ ನಿದ್ರಾ ಹೀನತೆಯು ರೋಗಗಳನ್ನು ಪ್ರಚೋದಿಸುತ್ತವೆ. ಇದರಿಂದ ಮೆದುಳಿನ ಹಾಲೆಗಳಿಂದ ಸೆಳತ ಕಂಡುಬರಬಹುದು. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗಳ ಮೆದುಳಿನಲ್ಲಿ ಸಾಮಾನ್ಯವಾಗಿ ಸೂಕ್ಷ್ಮ ಪ್ರಮಾಣದ ವಿದ್ಯುತ್ ತರಂಗಗಳು ಉತ್ಪಾದನೆಯಾಗುತ್ತವೆ. ಇದರಲ್ಲಿ ಏರುಪೇರಾದರೆ ಅಪಸ್ಮಾರ ಅಥವಾ ಮೂರ್ಛೆ ಉಂಟಾಗುತ್ತದೆ.
ನಾವು ಸಾಮಾನ್ಯವಾಗಿ ಏನೇ ಕೊಂಡುಕೊಂಡರು ಕಣ್ಣು ಮುಚ್ಚಿ ಬಳಕೆ ಮಾಡುವ ಅಭ್ಯಾಸ ರೂಡಿಸಿಕೊಂಡಿರುತ್ತೇವೆ. ನಾವು ಬಳಸುವ ಕ್ರೀಮ್, ಮೆಹೆಂದಿ ಒಳಗೊಂಡ ಸಾಮಗ್ರಿಗಳ ಬಗ್ಗೆ ಗಮನ ಹರಿಸಿವುದೇ ಇಲ್ಲ. ಒಂದು ವೇಳೆ ಹಚ್ಚಿಕೊಂಡ ಮೇಲೆ ಸಮಸ್ಯೆ ಎದುರಾದರೆ ಮಾತ್ರ ನಮ್ಮನ್ನೇ ಹಳಿದು ಕೊಳ್ಳುತ್ತೇವೆ. ಹೀಗೆ ಮಾಡುವ ಬದಲಿಗೆ, ಇದು ನೈಸರ್ಗಿಕ ಗೋರಂಟಿ ಹೌದಾ? ಎಂದು ಪ್ರಾಡಕ್ಟ್ ಅನ್ನು ಎಚ್ಚರಿಕೆಯಿಂದ ಪರಿಶೀಲನೆ ನಡೆಸುವುದು ಉತ್ತಮ. ಹೀಗೆ ಮಾಡುವುದರಿಂದ ಮುಂದೆ ಎದುರಾಗುವ ಅನೇಕ ಆರೋಗ್ಯ ಸಮಸ್ಯೆಯಿಂದ ಪಾರಾಗಬಹುದು. ಒಂದು ವೇಳೆ, ಗೋರಂಟಿ ಬಗ್ಗೆ ನಿಮಗೆ ಖಚಿತತೆ ಸಿಗದಿದ್ದರೆ ಅದನ್ನು ಬಳಕೆ ಮಾಡದೆ ಇರುವುದೇ ಉತ್ತಮ.
ಮೆಹಂದಿಯ ಹೆಚ್ಚಿನ ಬಣ್ಣವನ್ನು ಪಡೆಯಲು ಕೊಠಡಿಯನ್ನು ಬಿಸಿಯಾಗಿಡುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲ. ಹೆಚ್ಚಿನ ಬಿಸಿಯಾದ ವಾತಾವರಣದಿಂದ ನಿಮಗೆ ತಲೆತಿರುಗುವ ಅನುಭವ ಇಲ್ಲವೇ ರಕ್ತದೊತ್ತಡ ಕೂಡ ಹೆಚ್ಚಾಗುವ ಸಾಧ್ಯತೆಗಳಿವೆ. ನೀವು ನಿರಂತರವಾಗಿ ಬಳಕೆ ಮಾಡುವ ಉತ್ಪನ್ನವಾಗಿದ್ದರು ಕೂಡ ಪ್ರತಿ ಬಾರಿ ಅದನ್ನು ಪರೀಕ್ಷೆ ಮಾಡಿ ಖರೀದಿಸಿ ಉಪಯೋಗಿಸುವುದು ಒಳ್ಳೆಯದು. ಕೆಲವೊಮ್ಮೆ ನೀವು ಬಳಕೆ ಮಾಡುವ ಉತ್ಪನ್ನ (Product) (expiry date) ಎಕ್ಸ್ ಪೈರಿ ಡೇಟ್ ಮುಗಿದಿರುವ ಇಲ್ಲವೇ ಅಂಗಡಿಯವರು ಹಳೆಯ ಸ್ಟಾಕ್ ( old stock) ನೀಡಿರುವ ಸಾಧ್ಯತೆ ಕೂಡ ಇರುತ್ತದೆ.
ಟ್ಯೂಬ್ಗಳು ಮತ್ತು ಕೋನ್ಗಳ ರೂಪದಲ್ಲಿ ಲಭ್ಯವಾಗುವ ಕಪ್ಪು ಗೋರಂಟಿಯಲ್ಲಿ ಪ್ಯಾರಾ-ಫೆನೈಲೆನೆಡಿಯಮೈನ್ (PPD)ನ ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಕೈಗಳಲ್ಲಿ ಡರ್ಮಟೈಟಿಸ್ (ತುರಿಕೆ) ಉಂಟಾಗಬಹುದು. ರಾಸಾಯನಿಯಕವುಳ್ಳ ಮೆಹಂದಿಯನ್ನು ಬಳಕೆ ದೀರ್ಘಕಾಲದ ಆಲಸ್ಯ, ಅನೋರೆಕ್ಸಿಯಾ ಮತ್ತು ಗ್ಯಾಸ್ಟ್ರೊ ಕರುಳಿನ ಸಮಸ್ಯೆ ಗಂಭೀರ ಕಾಯಿಲೆಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ಕೂಡ ಇದೆ. ಅಷ್ಟೇ ಅಲ್ಲದೆ, ಲೂಪಸ್, ಆಸ್ತಮಾ, ಸ್ತನ, ಗರ್ಭಾಶಯ, ಕಿಡ್ನಿ ವೈಫಲ್ಯ ಮತ್ತು ಗಾಳಿಗುಳ್ಳೆಯ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಕೂಡ ಬರಬಹುದು. ಹೀಗಾಗಿ, ನಾವು ಬಳಕೆ ಮಾಡುವ ಉತ್ಪನ್ನಗಳ ಬಗ್ಗೆ ಅವು ಒಳಗೊಂಡ ಸಾಮಗ್ರಿಗಳ ಬಗ್ಗೆ ಮಾಹಿತಿ ತಿಳಿದು ಬಳಕೆ ಮಾಡುವುದು ಉತ್ತಮ.