A disaster from a doctor: ಆಪರೇಷನ್ ಮಾಡಬೇಕಾಗಿದ್ದು ಮಹಿಳೆಯ ನೋವಿದ್ದ ಬಲಗಾಲಿಗೆ, ಆದರೆ ಮಾಡಿದ್ದು ಎಡಗಾಲಿಗೆ! ಕೇರಳ ವೈದ್ಯರೊಬ್ಬರಿಂದ ಭಾರೀ ಎಡ್ವಟ್ಟು!
Kerala surgeon: ವೈದ್ಯರು ದೇವರ ಸಮಾನ ಎಂಬ ಮಾತಿದೆ. ನಮಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಗುಣವಾಗುವಂತೆ ಮಾಡುತ್ತಾರೆ. ಅಂತಹ ವೈದ್ಯರೇ (Doctors) ಅಪ್ಪಿತಪ್ಪಿ ತಪ್ಪು ಮಾಡಿದರೆ ರೋಗಿಗಳ ಗತಿ ಏನಾಗಬೇಡ ಹೇಳಿ. ಸದ್ಯ ಇಂತಹದೇ ಒಂದು ಭಯಾನಕ ಘಟನೆ ನಡೆದಿದ್ದು ಎಲ್ಲರೂ ಶಾಕ್ ಆಗಿದ್ದಾರೆ. ಯಾಕಂದ್ರೆ ಇಲ್ಲಾಗಿರುವುದು ಸಣ್ಣಪುಟ್ಟ ತಪ್ಪಲ್ಲ, ದೊಡ್ಡ ಎಡವಟ್ಟು. ರೋಗಿ ಹೇಳಿದ್ದೆ ಒಂದು, ವೈದ್ಯ ಮಾಡಿದ್ದು ಇನ್ನೊಂದು. ಆ ಡಾಕ್ಟ್ರು, ಅಂತದೇನಪ್ಪಾ ಮಾಡಿದ್ರು ಅನ್ಕೊಳ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ. ನೀವು ಕೂಡ ಪಕ್ಕಾ ಶಾಕ್ ಆಗ್ತೀರಾ.
ಹೌದು, ಕೇರಳ(Kerala)ದ ಕಕ್ಕೋಡಿಯ(Kakkodiya) ಸಜಿನಾ ಸುಕುಮಾರನ್ (60) ಅವರು ತಮ್ಮ ಎಡಗಾಲಿನ ಹಿಮ್ಮಡಿಯ ನರಕ್ಕೆ ಗಾಯವಾಗಿತ್ತೆಂದು ಮಾವೂರು ರಸ್ತೆಯಲ್ಲಿರುವ ರಾಷ್ಟ್ರೀಯ ಆಸ್ಪತ್ರೆಯ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ (Kerala surgeon) ಪಡೆಡಿದ್ದರು. ಆದರೆ ಶಸ್ತ್ರ ಚಿಕಿತ್ಸೆ (Operation) ಮಾಡಿಸಿಕೊಂಡ ನಂತರ ಸುಜಿನ ಅವರಿಗೆ ದೊಡ್ಡ ಶಾಕ್ ಕಾದಿತ್ತು! ಕೇರಳದ ಡಾ.ಬೆಹಿರ್ಶನ್ ಎಂಬ ವೈದ್ಯರು ಇಂತಹ ಒಂದು ಭಯಾನಕ ಘಟನೆಗೆ ಕಾರಣವಾಗಿದ್ದು, ರೋಗಿ ಹೇಳಿದ್ದೆ ಒಂದು, ವೈದ್ಯ ಮಾಡಿದ್ದು ಇನ್ನೊಂದು ಆಗಿದೆ.
ಸಜಿನಾ ಸುಕುಮಾರನ್ ಅವರು ತಮ್ಮ ಎಡಗಾಲಿನ ಹಿಮ್ಮಡಿಯ ನರಕ್ಕೆ ಗಾಯವಾಗಿತ್ತೆಂದು ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ (Treatment) ಪಡೆದುಕೊಂಡಿದ್ದರು. ಒಂದು ವರ್ಷದ ಹಿಂದೆ ಸಜಿನಾ ಅವರಿಗೆ ತಮ್ಮ ಎಡಕಾಲು ಬಾಗಿಲಿಗೆ ಸಿಕ್ಕಿ ಗಾಯವಾಗಿತ್ತಂತೆ. ನೋವು ಕಡಿಮೆಯಾಗದ ಕಾರಣ ವೈದ್ಯರ ಮೊರೆ ಹೋಗಿದ್ದಾರೆ. ಮೊದಲು ಖಾಸಗಿ ಕ್ಲಿನಿಕ್‌ನಲ್ಲಿ ಡಾ.ಬೆಹಿರ್ಶನ್ ಬಳಿ ಚಿಕಿತ್ಸೆ ಪಡೆದು ನಂತರ ಫೆ.20 ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ (ಫೆ.21) ಡಾ.ಬೆಹಿರ್ಶನ್ ಅವರೇ ಸಜಿನಾ ಅವರ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ತಮ್ಮ ಎಡಗಾಲಿನ ಹಿಮ್ಮಡಿಯಲ್ಲಿ ನೋವು ಎಂದು ಶಸ್ತ್ರ ಚಿಕಿತ್ಸೆಗೆ ಒಪ್ಪಿದ ಸುಜಿನ ಶಸ್ತ್ರ ಚಿಕಿತ್ಸೆ ನಂತರ ಎದ್ದು ನೋಡಿದಾಗ ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿರುವುದು ನೋಡಿ ಕಂಗಾಲಾಗಿದ್ದಾರೆ!
ಈ ಬಗ್ಗೆ ಮಾತನಾಡಿದ ಸುಜಿನ ‘ನಾನು ನನ್ನ ಎಡಗಾಲಿನ ನೋವಿಗೆ ಶಸ್ತ್ರ ಚಿಕಿತ್ಸೆ ಪಡೆದುಕೊಳ್ಳಲು ಒಪ್ಪಿಗೆ ನೀಡಿದ್ದೆ ಆದರೆ ನನಗೆ ಪ್ರಜ್ಞೆ ಬಂದಾಗ, ನನ್ನ ಬಲಗಾಲು ಭಾರವಾದಂತನಿಸಿತು. ಎದ್ದು ನೋಡಿದಾಗ ನನ್ನ ಬಲಗಾಲಿಗೆ ಸರ್ಜರಿ ಮಾಡಿದ್ದರು. ಎಚ್ಚರವಾದ ತಕ್ಷಣ ನಾನು ಆಘಾತಕ್ಕೊಳಗಾಗಿದ್ದೆ. ತಕ್ಷಣ ನರ್ಸ್‌ಗೆ ಕರೆ ಮಾಡಿ ವೈದ್ಯರನ್ನು ಕರೆಯುವಂತೆ ಕೇಳಿಕೊಂಡೆ. ಆದರೆ ನಾನು ವಿಷಯ ಹೇಳಿದಾಗಲಷ್ಟೇ ಅವರಿಗೆ ತಪ್ಪಾಗಿದೆ ಎಂಬುದು ಗೊತ್ತಾಯಿತು. ಯಾವುದೇ ತೊಂದರೆಗಳಿಲ್ಲದ ತನ್ನ ಬಲಗಾಲಿಗೆ ಯಾವ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತನಗೆ ತಿಳಿದಿಲ್ಲಎಂದಿದ್ದಾರೆ.
ಸುಜಿನಾ ಮಗಳು ಮಾತನಾಡಿ, ‘ನನ್ನ ತಾಯಿಯ ಬಲಗಾಲಿನಲ್ಲಿಯೂ ಬ್ಲಾಕ್ ಆಗಿದೆ ಎಂಬುದು ವೈದ್ಯರ ಮೊದಲ ಪ್ರತಿಕ್ರಿಯೆಯಾಗಿತ್ತು. ಆದರೆ ಅವರು ಆ ಕಾಲಿನ ಬ್ಲಾಕ್ ಅನ್ನು ಪತ್ತೆಹಚ್ಚಲು ಯಾವುದೇ ರೀತಿಯ ಎಕ್ಸ್-ರೇ ಅಥವಾ ಸ್ಕ್ಯಾನ್ ತೆಗೆದುಕೊಂಡಿರಲಿಲ್ಲ’ ಎಂದಿದ್ದಾರೆ. ಸದ್ಯ ಈ ಕುರಿತು ಡಿಎಂಒ ಹಾಗೂ ಆರೋಗ್ಯ ಸಚಿವರಿಗೆ ದೂರು ಸಲ್ಲಿಸಲಾಗಿದೆ. ಆದರೆ ಮಹಿಳೆಗೆ ಎರಡೂ ಕಾಲುಗಳಲ್ಲಿ ಸಮಸ್ಯೆ ಇತ್ತು ಶಸ್ತ್ರಚಿಕಿತ್ಸೆಗೂ ಮುನ್ನ ಈ ಬಗ್ಗೆ ಸಜಿನಾ ಮತ್ತು ಅವರ ಪತಿಗೆ ತಿಳಿಸಿದ್ದೇವೆ ಎಂದು ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಆಸ್ಪತ್ರೆಯ ಎಂಡಿ ಡಾ.ಕೆ.ಎಂ.ಆಶಿಕ್, ‘ಸಜಿನಾ ಅವರ ಕಾಲಿನ ಹಿಮ್ಮಡಿ ನೋವಿಗೆ ಚಿಕಿತ್ಸೆ ನೀಡಲಾಗಿದ್ದು, ಕೆಲ ದಿನಗಳಿಂದ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ನಾವು ಸುಜಿನಾ ಅವರ ಬಲಗಾಲನ್ನು ಪರೀಕ್ಷಿಸಿದ ನಂತರ ಆ ಕಾಲಿನಲ್ಲಿನ ಗಾಯವನ್ನು ಕಂಡುಕೊಂಡಿದ್ದೇವೆ ಮತ್ತು ಅದನ್ನು ಸುಜಿನಾ ಮತ್ತು ಅವರ ಪತಿಗೆ ತಿಳಿಸಿದ್ದೆವು. ವಿಷಯ ತಿಳಿದ ಬಳಿಕ ಸುಜಿನಾ ಅವರೇ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.