CT Ravi : ಸಿ ಟಿ ರವಿ ಬಾಲ ಬಿಚ್ಚಿದ್ರೆ ಅಂಗಿ ಚೆಡ್ಡಿ ಬಿಚ್ಚಿಸ್ತೀವಿ: ಜೆಡಿಎಸ್ ಕಾರ್ಯಕರ್ತರ ಎಚ್ಚರಿಕೆ! ಬಾಡೂಟದ ಬಡಿದಾಟದ ಬೆನ್ನಲ್ಲೇ ಮತ್ತೊಂದು ವಿವಾದಕ್ಕೆ ಕಾರಣರಾದ ರವಿ!
CT Ravi issue : ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರುಗಳು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳೋದು, ನಾನಾ ವಿಷಯಗಳಿಗೆ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವುದು ಅವರಿಗೆ ಒಂದು ಅಭ್ಯಾಸವಾಗಿ ಬಿಟ್ಟಿದೆ. ಇತ್ತೀಚಿಗಷ್ಟೇ ಬಿಜೆಪಿ(BJP)ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು(Chikkamagaluru) ಕ್ಷೇತ್ರದ ಶಾಸಕರಾದಂತಹ ಸಿಟಿ ರವಿ(CT Ravi issue) ಅವರು ಬಾಡೂಟದ ವಿಚಾರವಾಗಿ ಕಾಂಗ್ರೆಸ್ನೊಂದಿಗೆ ಜಟಾಪಟಿಯನ್ನು ಮಾಡಿದ್ದರು ಆದರೀಗ ಮತ್ತೊಂದು ಹೊಸ ವಿವಾದದ ಮೂಲಕ ಜೆಡಿಎಸ್ ನೊಂದಿಗೆ ಕಾದಾಟ ಶುರುಮಾಡಿಕೊಂಡಿದ್ದಾರೆ.
ಹೌದು, ಮಂಡ್ಯ(Mandya)ದಲ್ಲಿ ನಿಂತು ದೇವೇಗೌಡರ(Devegowda) ಬಗ್ಗೆ ಆಡಿದಂತಹ ಆ ಒಂದು ಮಾತು ಸಿ.ಟಿ ರವಿ ಅವರ ಬುಡಕ್ಕೇ ಬಂದು ನಿಂತಿದೆ. ರವಿ ವಿರುದ್ಧ ಇಡೀ ಮಂಡ್ಯದ ಜೆಡಿಎಸ್(JDS) ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಅದೂ ಕೂಡ ಮಂಡ್ಯ, ಹೇಳಿ ಕೇಳಿ ಜೆಡಿಎಸ್ ನ ಭಧ್ರ ಕೋಟೆ. ಇಂತಹ ಭದ್ರಕೋಟೆಯಲ್ಲಿ ನಿಂತು ಜೆಡಿಎಸ್ ನ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಬಗ್ಗೆ ಬೇಕಾಬಿಟ್ಟಿ ಮಾತಾಡಿದರೆ ಕಾರ್ಯಕರ್ತರು ಬಿಡುತ್ತಾರೆಯೇ? ಅಷ್ಟಕ್ಕೂ ಸಿಟಿ ರವಿ ಗೌಡರ ವಿರುದ್ಧ ಮಾತಾಡಿದ್ದಾದ್ರೂ ಏನು, ಇದಕ್ಕೂ ಮೊದಲು ಗೌಡ್ರು ಏನಂದಿದ್ರು?
ದೇವೇಗೌಡರು ಕಾರ್ಯಕ್ರಮ ಒಂದರಲ್ಲಿ ಮುಂದಿನ ಜನ್ಮದಲ್ಲಿ ನಾನು ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದರು. ದೇವೇಗೌಡರು ಕಾರ್ಯಕ್ರಮ ಒಂದರಲ್ಲಿ ಮುಂದಿನ ಜನ್ಮದಲ್ಲಿ ನಾನು ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಸಿ ಟಿ ರವಿಯವರು ಮೊನ್ನೆ ಮಂಡ್ಯದಲ್ಲಿ ನಡೆದಂತಹ ಯುವಜನ ಸಮಾವೇಶದಲ್ಲಿ ಗೌಡರ ವಿರುದ್ಧ ವ್ಯಂಗ್ಯದ ಮಾತುಗಳನ್ನಾಡಿ, ಮುಸ್ಲಿಮರಾಗಿ ಹುಟ್ಟಬೇಕೆಂಬ ಆಸೆ ಇದ್ದರೆ ತಡವೇಕೆ ಮಾಡುತ್ತಿರಿ ಈಗಲೇ ಹೋಗಿ ಎಂದು ನಾಲಗೆ ಹರಿಬಿಟ್ಟಿದ್ದರು. ಸದ್ಯ ಇದೇ ವಿಚಾರವನ್ನು ಹಿಡಿದುಕೊಂಡು ಜೆಡಿಎಸ್ ಕಾರ್ಯಕರ್ತರು ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಿ.ಟಿ.ರವಿ ಒಬ್ಬ ರಾಜಕೀಯ ವಿದೂಷಕ, ಬೃಹನ್ನಳೆ. ಸಿ.ಟಿ ರವಿ ದತ್ತ ಮಾಲೆ ಹಿಡಿದುಕೊಂಡು ಚಿಕ್ಕಮಗಳೂರಲ್ಲಿ ಆಟವಾಡಬೇಕು. ಮಂಡ್ಯದಲ್ಲಿ ಬಾಲ ಬಿಚ್ಚಿದ್ರೆ ಅಂಗಿ ಚೆಡ್ಡಿ ಬಿಚ್ಕೋತ್ತಾರೆ ಎಂದು ಎಚ್ಚರಿಸಿದ್ದಾರೆ. ಈ ಸಂಬಂಧ ದೇವೇಗೌಡರಿಗೆ ಸಿ.ಟಿ.ರವಿ ಕ್ಷಮೆಯಾಚಿಸಲಿ ಅಂತ ಒತ್ತಾಯಿಸಿದ್ದಾರೆ. ಅಲ್ಲದೆ ದೇವೇಗೌಡರ ಬಗ್ಗೆ ಸಿ.ಟಿ ರವಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಹಾಗೂ ಹೆಚ್ ಡಿ ದೇವೇಗೌಡ ಸಾವನ್ನ ಬಯಸಿದ್ದಾರೆಂದು ಆರೋಪಿಸಿ ಮಂಡ್ಯದ ಮಳವಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಒಟ್ಟಾರೆ ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡ ವಿರುದ್ಧ ಮಾತನಾಡಿ ಸಿಟಿ ರವಿ ದಳ ಕಾರ್ಯಕರ್ತರ ಕೆಂಗಣ್ಣಿಗೆ ಸಿಲುಕಿದ್ದಾರೆ. ಈಗಾಗಲೇ ಬಾಡೂಟದ ಬಡಿದಾಟವೆಬ್ಬಿಸಿರುವ ನಾಯಕ ಈಗ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಜೊತೆಗೆ ಕಾರ್ಯಕರ್ತರು ಯಾರೇ ಆದರೂ ಹಿರಿಯರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಿದ್ರೆ ಉತ್ತಮ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಈ ಹಿಂದೆ ಇದೇ ಮಂಡ್ಯದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿರುವ ಅಶ್ವತ್ ನಾರಾಯಣ್(Aswath Narayan) ಅವರು ಕೂಡ ಮಾತನಾಡುವ ಭರದಲ್ಲಿ ಸಿದ್ದರಾಮಯ್ಯ(Siddramayha)ನವರನ್ನು ಟಿಪ್ಪುವಿನಂತೆ ಹೊಡೆಯಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಇದು ಕೂಡ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.