ಮಹಿಳೆ ಆತ್ಮಹತ್ಯೆ : ಪತಿಯ ಕಿರುಕುಳ ಆರೋಪ ,ಪ್ರಕರಣ ದಾಖಲು

Share the Article

Udupi : ಉಡುಪಿ : ಪತಿಯ ಕಿರುಕುಳದಿಂದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರೆ ಬೋಳಾರ ನಿವಾಸಿ ಮಮತಾ(42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪಡುಬಿದ್ರೆ ಬೀಡು(Udupi) ನಿವಾಸಿ ಚೇತನ್ ಎಂಬಾತನೊಂದಿಗೆ 2011ರಲ್ಲಿ ಇವರ ವಿವಾಹ ನಡೆದಿತ್ತು. ಚೇತನ್ ಪತ್ನಿಗೆ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

ಹೊಟೇಲ್ ವ್ಯವಹಾರ ನಡೆಸುತ್ತಿದ್ದ ಚೇತನ್ ತನಗೆ ಹಣ ನೀಡುವಂತೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಮಮತಾ ತನ್ನ ಸಹೋದರನಿಗೆ ತಿಳಿಸಿದ್ದು,ಈ ವೇಳೆ ಅವರನ್ನು ಆಕೆಯ ಸಹೋದರ ಸಮಾಧಾನಪಡಿಸಿ ಕಳುಹಿಸಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಪತಿಯ ಕಿರುಕುಳದಿಂದಲೇ ಮಮತಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Leave A Reply