Doctor’s Adventure: ಸುಮಾರು ಮೂರು ಗಂಟೆ ಹೃದಯ ಸ್ತಬ್ಧವಾಗಿದ್ದ ಮಗುವಿಗೆ ಮರುಜೀವ ನೀಡಿದ ವೈದ್ಯರು! ವೈದ್ಯರ ಈ ಸಾಹಸಗಾಥೆ ಕೇಳಿದ್ರೆ ನೀವು ಅಚ್ಚರಿ ಪಡೋದು ಪಕ್ಕಾ!

Doctor’s Adventure: ಜಗತ್ತಿನ ಹಲವು ಕೌತುಕಗಳಲ್ಲಿ ವೈದ್ಯಕೀಯ ಲೋಕವೂ ಒಂದು. ಇಂದು ಕಾಲ ಬದಲಾದಂತೆ ಕಾಯಿಲೆಗಳು ಕೂಡ ಬದಲಾಗುತ್ತಿವೆ. ಕೆಲವೊಮ್ಮೆ ವೈದ್ಯಕೀಯ ಲೋಕಕ್ಕೇ ಸವಾಲೊಡ್ಡುವಂಥಹಾ ರೋಗಗಳು ಕಾಣಿಸಿಕೊಳ್ಳುತ್ತವೆ. ಒಮ್ಮೊಮ್ಮೆ ಇನ್ನೇನು ಬದುಕೋದೆ ಇಲ್ಲ ಎಂದು ಅಂದುಕೊಂಡವರು ಸಹ ಕೊನೇ ಕ್ಷಣದಲ್ಲಿ ಬದುಕಿ ಬರುತ್ತಾರೆ. ಅಂದರೆ ಇಲ್ಲಿ ಸಾಧಿಸಲಾಗದ್ದನ್ನೂ ವೈದ್ಯರು ಸಾಧಿಸಿಬಿಡುತ್ತಾರೆ. ಅದಕ್ಕಾಗಿಯೇ ಅಲ್ಲವೇ ‘ವೈದ್ಯೋ ನಾರಾಯಣ ಹರಿ’ ಎಂದು ಹೇಳೋದು. ಅಂದರೆ ಅವರು ನಮಗೆ ಮರುಜನ್ಮವನ್ನು ಕರುಣಿಸುವ ದೇವರಂತೆ. ಸದ್ಯ ಇಂತಹುದೇ ಘಟನೆಯೊಂದು ಬೆಳಕಿಗೆ ಬಂದಿದ್ದು ಸುಮಾರು 3ಗಂಟೆ ಹೃದಯ ಸ್ತಬ್ಧಗೊಂಡಿದ್ದ ಮಗುವೊಂದು, ವೈದ್ಯರ ಪ್ರಯತ್ನದಿಂದ ಪವಾಡಸದೃಶವಾಗಿ ಬದುಕಿ ಬಂದಿದೆ!

ಹೌದು, ಕೆನಡಾದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಮಗುವೊಂದು, ಅಂಬೆಗಾಲಿನಲ್ಲೇ ಹೋಗಿ ಸ್ವಿಮ್ಮಿಂಗ್‌ ಪೂಲ್‌ಗೆ ಬಿದ್ದಿದೆ. ಇದರಿಂದ ಆ ಪುಟ್ಟ ಕಂದನ ಹೃದಯ ಬಡಿತವೇ ನಿಂತು ಹೋಗಿತ್ತು. ಇನ್ನೇನು ಬದುಕೋದೆ ಇಲ್ಲ ಎಂದು ಎಲ್ಲರೂ ಅಂದುಕೊಂಡರು. ಆದ್ರೆ ಆ ಮಗುವನ್ನು ಇಲ್ಲೊಂದು ವೈದ್ಯರ ತಂಡ ಬದುಕಿಸಿದೆ. ಅಲ್ಲದೆ ಮಗುವಿನ ಹೃದಯವು (Heart) ಮೂರು ಗಂಟೆಗಳ ಕಾಲ ನಿಂತುಹೋಗಿತ್ತು. ಆದರೆ ವೈದ್ಯರ ತಂಡವು (Doctors team) ಆತನ ಜೀವವನ್ನು ಉಳಿಸಿದೆ. ಈ ಒಂದು ಘಟನೆ ಕುರಿತು ವೈದ್ಯ ಲೋಕವೇ ಅಚ್ಚರಿ (Doctor’s Adventure) ಪಟ್ಟಿದೆ. ವೈದ್ಯರ ತಂಡದ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ಕೆನಡಾದ ನೈಋತ್ಯ ಒಂಟಾರಿಯೊದ ಹಾಗೂ ಲಂಡನ್‌ನಿಂದ 100 ಕಿ ಮೀ ದೂರದಲ್ಲಿರುವ ಪೆಟ್ರೋಲಿಯಾದಲ್ಲಿನ ಹೋಮ್ ಡೇಕೇರ್‌ನಲ್ಲಿ 20 ತಿಂಗಳ ಮಗು ಹೊರಾಂಗಣ ಪೂಲ್‌ಗೆ ಬಿದ್ದಿತ್ತು. ಅಗ್ನಿಶಾಮಕ ಸಿಬ್ಬಂದಿ ಮಗುವನ್ನು ರಕ್ಷಿಸಿ ಷಾರ್ಲೆಟ್ ಎಲೀನರ್ ಎಂಗಲ್ಹಾರ್ಟ್ ಆಸ್ಪತ್ರೆಗೆ (Hospital) ಕರೆತಂದಿದ್ದಾರೆ. ಆದರೆ ಮಗುವಿನಲ್ಲಿ ಯಾವುದೇ ಚಲನ ವಲನಗಳಿರಲಿಲ್ಲ. ಹುದಯಬಡಿತವೂ ನಿಂತುಹೋಗಿತ್ತು. ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಈ ಮಗುವನ್ನು ಉಳಿಸೋದು ದೊಡ್ಡ ಸವಾಲಾಗಿತ್ತು. ಕೂಡಲೇ ಮಗುವನ್ನು ಉಳಿಸಲು ಬೇಕಾದಂತಹ ನಿರಂತರ ಪ್ರಯತ್ನ ಮಾಡಲು ಆರಂಭಿಸಿದರು. ಸತತ ಮೂರು ಗಂಟೆಗಳ ಕಾಲ ಮಗುವಿಗೆ ಸಿಪಿಆರ್(CPR) ಅನ್ನು ಪರ್ಯಾಯವಾಗಿ ನೀಡಿದರು. ಇನ್ನೂ ಮುಖ್ಯವಾದ ವಿಚಾರ ಅಂದರೆ, ಪೆಟ್ರೋಲಿಯಾದ ಈ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟಿತ್ತು. ಸರಿಯಾದ ಸಿಬ್ಬಂದಿಗಳು ಕೂಡ ಇರಲಿಲ್ಲ. ಆ ಸಮಯದಲ್ಲಿ ಲ್ಯಾಬ್ ಕೆಲಸಗಾರರು ಮತ್ತು ದಾದಿಯರು ಸೇರಿದಂತೆ ಎಲ್ಲರೂ ತಾವು ಮಾಡುವ ಕೆಲಸಗಳಿನ್ನು ನಿಲ್ಲಿಸಿ ಮಗುವಿನ ಜೀವ ಉಳಿಸುವ ಕಾರ್ಯದಲ್ಲಿ ವೈದ್ಯರಿಗೆ ನೆರವಾದರು.

ಇನ್ನು ಮಗುವಿನ ಪ್ರಾಣ ಮರಳಿ ಬರುವಂತೆ ಮಾಡಿದ ವೈದ್ಯರ ತಂಡದ ಮುಖ್ಯಸ್ಥರಾದ ಡಾ. ಟೇಲರ್ ಅವರು ಈ ಕುರಿತು ಪ್ರತಿಕ್ರಿಯಿಸಿ ‘ಇದು ನಿಜವಾಗಿಯೂ ಒಂದು ತಂಡದ ಪ್ರಯತ್ನವಾಗಿತ್ತು. ಅಲ್ಲದೆ ಎಲ್ಲರಿಗೂ ಸವಾಲಾಗಿತ್ತು. ಈ ಕಾರ್ಯದಲ್ಲಿ ಲ್ಯಾಬ್ ಟೆಕ್‌ಗಳು ಕೂಡ ಕೋಣೆಯಲ್ಲಿ ಪೋರ್ಟಬಲ್ ಹೀಟರ್‌ಗಳನ್ನು ಹಿಡಿದಿದ್ದರು. ಇಎಮ್‌ಎಸ್ ಸಿಬ್ಬಂದಿ ಕೂಡ ಕಂಪ್ರೆಸರ್‌ಗಳ ಮೂಲಕ ತಿರುಗುವುದರೊಂದಿಗೆ ವಾಯುಮಾರ್ಗವನ್ನು ನಿರ್ವಹಿಸುವಲ್ಲಿ ಸಹಾಯ ಮಾಡಿದರು. ದಾದಿಯರು ಮಗುವಿನ ದೇಹ ಬೆಚ್ಚಗಾಗಲು ಸಹಾಯ ಮಾಡಲು ಮೈಕ್ರೋವೇವ್ ನೀರಿಗಾಗಿ ಓಡಾಡುತ್ತಾ ತಮ್ಮ ಕೈಲಾದ ಸಹಾಯ ಮಾಡಿದರು. ಹಾಗಾಗಿ ಇದರ ಎಲ್ಲಾ ಯಶಸ್ಸು, ತಂಡದ ಪ್ರತಿಯೊಬ್ಬರಿಗೂ ಸಲ್ಲಬೇಕು. ಸದ್ಯ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆರೋಗ್ಯವಾಗಿದೆ ಎಂದರು.

Leave A Reply

Your email address will not be published.