ಕ್ಷುಲ್ಲಕ ವಿಚಾರಕ್ಕೆ ಪತಿ,ಪತ್ನಿಯ ನಡುವೆ ಜಗಳ : ಪತ್ನಿಯನ್ನೇ ಕೊಂದೇ ಬಿಟ್ಟ ಪತಿ

Bengaluru: ಬೆಂಗಳೂರು : ಕ್ಷುಲ್ಲಕ ಕಾರಣವೊಂದಕ್ಕೆ ಪತಿ-ಪತ್ನಿಯ ನಡುವೆ ನಡೆದ ವಾಗ್ವಾದ ಪತ್ನಿಯ ಕೊಲೆಯೊಂದಿಗೆ ದುರಂತ ಅಂತ್ಯಕಂಡಿದೆ.

ಬೆಂಗಳೂರು ರಾಮನಗರ ಜಿಲ್ಲೆಯ ರಾಮನಗರ ಟೌನ್ ನ ಕೊಂಕಾಣಿದೊಡ್ಡಿ ಎಂಬಲ್ಲಿ ಈ ಘಟನೆ ನಡೆದಿದೆ.

ಕೊಲೆಯಾದವರನ್ನು ಗೌರಮ್ಮ(45) ಹಾಗೂ ಕೊಲೆ ಮಾಡಿದ ಪತಿ ರವಿ (52 ) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪತಿ ರವಿ ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ರವಿಯು ಗೌರಮ್ಮರನ್ನು ಕೊಲೆಗೈದು ಅಂತ್ಯ ಸಂಸ್ಕಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ ಮಾಹಿತಿ ಮೇರೆಗೆ ರವಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ರಾಮನಗರ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.