Android SmartPhone : ಇನ್ನು ಮುಂದೆ ಹೊಸ ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಈ ಸಮಸ್ಯೆ ಇಲ್ಲ!
Android SmartPhone : ಸದ್ಯ ಭಾರತದಲ್ಲಿ ಶೇ. 97ರಷ್ಟು ಸ್ಮಾರ್ಟ್‌ಫೋನ್‌ಗಳು (smartphone )ಆ್ಯಂಡ್ರಾಯ್ಡ್ ವ್ಯವಸ್ಥೆಯನ್ನು ಹೊಂದಿದ್ದು, ಬಳಕೆದಾರರಿಗೆ ಬೇರೆ ಆಯ್ಕೆಗಳನ್ನು (choice )ನೀಡದೆ ಇರುವ ಕಾರಣ ಗೂಗಲ್(Google )ಮೇಲೆ ಅವಲಂಬನೆ ಅನಿವಾರ್ಯವೆನಿಸಿತ್ತು. ಇನ್ನು ಆ್ಯಂಡ್ರಾಯ್ಡ್ ಸಿಸ್ಟಂ ಹೊಂದಿರುವ ಸ್ಮಾರ್ಟ್ ಫೋನ್‌ಗಳಲ್ಲಿ ವಿಡಿಯೋ ಬ್ರೌಸಿಂಗ್, ವೆಬ್ ಸರ್ಚಿಂಗ್, ವಿಡಿಯೋ ಹೋಸ್ಟಿಂಗ್‌ನಂಥ ಎಲ್ಲ ಕಾರ್ಯಾಚರಣೆಗಳಿಗೂ ಗೂಗಲ್ ಆ್ಯಪ್ಲಿಕೇಶನ್‌ಗಳನ್ನೇ ಬಳಸುವ ಆಯ್ಕೆ ನೀಡಿತ್ತು.ಆದರೆ ಇನ್ನು ಮುಂದೆ ಫೋನ್‌ಗಳ ಮೇಲೆ ಗೂಗಲ್‌ನ ಪ್ರಾಬಲ್ಯ ಕಡಿಮೆ ಆಗಲಿದೆ. ಹೌದು ಭಾರತದಲ್ಲಿ(india )ಟೆಕ್ ವಲಯಕ್ಕೆ ಸಂಬಂಧಿಸಿದಂತೆ ಕೆಲವು ವಿಶೇಷ ಕಾನೂನುಗಳನ್ನು ಇನ್ನುಮುಂದೆ ಪಾಲನೆ ಮಾಡಬೇಕಾಗುತ್ತದೆ. ಅಲ್ಲದೆ ಇನ್ಮುಂದೆ ನೀವು ಯಾವುದೇ ಫೋನ್ ಖರೀದಿ ಮಾಡಿದರೂ ಈ ವಿಷಯಗಳಿಗೆ ಪೂರ್ಣ ಸ್ವಾತಂತ್ರ್ಯ ಪಡೆಯಬಹುದು.
ಸದ್ಯ ಸರ್ಕಾರದ ಕೆಲವು ಕಠಿಣ ನಿರ್ಧಾರದಿಂದ ಹಾಗೂ ಗೂಗಲ್‌ಗೆ ವಿಧಿಸಿದ ದಂಡದ ಪರಿಣಾಮದಿಂದ ಇನ್ಮುಂದೆ ಫೋನ್‌ಗಳ ಮೇಲೆ ಗೂಗಲ್‌ನ ಪ್ರಾಬಲ್ಯ ಕಡಿಮೆಯಾಗಲಿದೆ. ಈ ಮೊದಲು ಗೂಗಲ್ ಮೇಲೆ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿಬರುತ್ತಿದ್ದು, ಈ ಸಂಬಂಧ ಗೂಗಲ್ ಇಂಡಿಯಾ ವಿರುದ್ಧ ನೀಡಿದ ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ತೀರ್ಪು ಹೊರಬಿದ್ದ ನಂತರ ಮಾರುಕಟ್ಟೆಗೆ ಬರುವ ಯಾವುದೇ ಫೋನ್‌ಗಳು ಗೂಗಲ್ ಮಾಲೀಕತ್ವದ ಆಪ್‌ಗಳಿಂದ (app )ಮುಕ್ತಿಪಡೆಯಲಿವೆ ಎನ್ನಲಾಗಿದೆ.
ಇದೀಗ ಮಾರುಕಟ್ಟೆಯಲ್ಲಿ ಬಳಕೆಗೆ ತಕ್ಕಂತೆ ವಿವಿಧ ರೀತಿಯ ಆಪ್‌ಗಳು ಲಭ್ಯವಿದ್ದು, ಅದರಲ್ಲಿ ಗೂಗಲ್ ಆಪ್‌ಗಳು ಸಹ ಒಂದು. ಇವುಗಳಲ್ಲಿ ತಮ್ಮ ಪ್ರಾಬಲ್ಯ ತೊರ್ಪಡಿಸುತ್ತಿದ್ದ ಗೂಗಲ್ ಪ್ರಮುಖ ಆಪ್‌ಗಳಾದ ಕ್ರೋಮ್, ಗೂಗಲ್ ಪೇ(Google pay ), ಜಿ-ಮೇಲ್ (gmail )ಹಾಗೂ ಗೂಗಲ್ ಮ್ಯಾಪ್ (google map )ಆಪ್‌ಗಳನ್ನು ಮೊದಲೇ ಇನ್‌ಸ್ಟಾಲ್ (install)ಮಾಡಿಸುತ್ತಿತ್ತು. ಹೀಗಾಗಿ ಬಳಕೆದಾರರು ಬೇರೆ ಆಪ್ ಬಗ್ಗೆ ಅಲೋಚನೆ ಮಾಡದೆ ಇರುವುದನ್ನೇ ಬಳಸಲು ಮುಂದಾಗುತ್ತಿದ್ದರು.
ಪ್ರಸ್ತುತ CCI ಆದೇಶದ ಅನುಸರಣೆಯ ಪ್ರಕಾರ ಇನ್ಮುಂದೆ ಯಾವುದೇ ಫೋನ್‌ನ ತಯಾರಕರು ತಮಗೆ ಇಷ್ಟ ಇರುವ ಸಂಸ್ಥೆಯ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಫೋನ್ ಖರೀದಿ ಮಾಡಿದ ಮೇಲೆ ಬಳಕೆದಾರರು ಸಹ ತಮಗೆ ಇಷ್ಟವಾದ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗುತ್ತದೆ.
ಈ ಬಗ್ಗೆ ಗೂಗಲ್ ಪ್ರಕಾರ ಭಾರತದಲ್ಲಿ ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ನಾವು ನಮ್ಮ ಬದ್ಧತೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಆಂಡ್ರಾಯ್ಡ್ ಮತ್ತು ಗೂಗಲ್ ಪ್ಲೇ ಗಾಗಿ ಭಾರತದ ಸ್ಪರ್ಧಾತ್ಮಕ ಆಯೋಗದ (CCI) ಇತ್ತೀಚಿನ ನಿರ್ದೇಶನಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಬೇಕಾಗಿದೆ. ಜೊತೆಗೆ ನಾವು ಅವರ ನಿರ್ದೇಶನಗಳನ್ನು ಹೇಗೆ ಅನುಸರಿಸುತ್ತಿದ್ದೇವೆ ಎಂಬುದನ್ನು CCI ಗೆ ತಿಳಿಸಿದ್ದೇವೆ ಎಂದು ಗೂಗಲ್ ತಿಳಿಸಿದೆ.
ಇನ್ನು ಆಪ್‌ಗಳು ಮತ್ತು ಗೇಮ್ ಆಪ್ (geam app )ಬಳಕೆದಾರರಿಗೆ ಬಿಲ್ಲಿಂಗ್ ಲಭ್ಯವಿರುತ್ತದೆ. ಆಪ್‌ನಲ್ಲಿ ಡಿಜಿಟಲ್ ಕಂಟೆಂಟ್ ಖರೀದಿಸುವಾಗ ಗೂಗಲ್ ಪ್ಲೇ ನ ಬಿಲ್ಲಿಂಗ್ ಸಿಸ್ಟಮ್ ಜೊತೆಗೆ ಪರ್ಯಾಯ ಬಿಲ್ಲಿಂಗ್ ವ್ಯವಸ್ಥೆಯನ್ನು ಆಯ್ಕೆ ಮಾಡುವ ಸೌಲಭ್ಯವನ್ನು ಡೆವಲಪರ್‌ಗಳು ಬಳಕೆದಾರರಿಗೆ ನೀಡಬಹುದು ಎಂದು ಉಲ್ಲೇಖಿಸಿದೆ.
ಫೋನ್‌ಗಳ ಮೇಲೆ ಗೂಗಲ್‌ನ ಪ್ರಾಬಲ್ಯ ಪರಿಣಾಮವಾಗಿ 2022 ರ ಅಕ್ಟೋಬರ್‌ನಲ್ಲಿ ಆಂಡ್ರಾಯ್ಡ್‌ನಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ CCI ಗೂಗಲ್‌ಗೆ 1,350 ಕೋಟಿ ರೂಪಾಯಿ ದಂಡವನ್ನು ವಿಧಿಸಿತ್ತು. ಆದರೂ ವಿಧಿಸಿದ ದಂಡವನ್ನು ಇನ್ನೂ ಪಾವತಿಸಿಲ್ಲ.
ಒಟ್ಟಿನಲ್ಲಿ ಆ್ಯಂಡ್ರಾಯ್ಡ್ ಫೋನ್‌ಬಳಕೆದಾರರಿಗೆ (Android SmartPhone) ತಮಗೆ ಇಷ್ಟ ಬಂದ ಸರ್ಚ್ ಎಂಜಿನ್ ಆಯ್ಕೆಯ ಅವಕಾಶ ನೀಡುವುದರ ಜತೆಗೆ ಇನ್ಮುಂದೆ ಯಾವುದೇ ಫೋನ್‌ನ ತಯಾರಕರು ತಮಗೆ ಇಷ್ಟ ಇರುವ ಸಂಸ್ಥೆಯ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಫೋನ್ ಖರೀದಿ ಮಾಡಿದ ಮೇಲೆ ಬಳಕೆದಾರರು ಸಹ ತಮಗೆ ಇಷ್ಟವಾದ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗುತ್ತದೆ.