Pakistan: ಅಲ್ಲಾಹ್ ನಮಗೆ ಮೋದಿಯನ್ನು ಪ್ರಧಾನಿಯಾಗಿ ಕರುಣಿಸಲಿ! ದೇಶದ ಜನರನ್ನು ಗೌರವಿಸುವ ಅವರು ನಮ್ಮ ದೇಶವಾಳಲಿ: ಪಾಕ್ ಪ್ರಜೆ ಹೇಳಿಕೆ ವೈರಲ್
Pakistani statement : ಭಾರತ ಆಜನ್ಮ ಶತ್ರುವೆನಿಸಿದ ಪಾಕಿಸ್ತಾನ(Pakistana) ಭಾರತವನ್ನು, ಭಾರತದ ಅಭಿವೃದ್ಧಿಯನ್ನು ಕಂಡರೆ ಸಾಕು ಉರಿದು ಬೀಳುತ್ತಿತ್ತು. ಭಾರತವನ್ನು ಪ್ರತೀ ಕ್ಷಣದಲ್ಲೂ ಕಾಲೆಳೆಯಲು ಕಾದು ಕೂತಿರುತ್ತಿತ್ತು. ಆದರೀಗ ಅದರ ಸಂಪೂರ್ಣ ಮನಸ್ಥಿತಿಯೇ ಬದಲಾದಂತಿದೆ. ಭಾರತದಿಂದಲೇ ಅರ್ಧ ರಾತ್ರಿಯಲ್ಲಿ ಹುಟ್ಟಿದ ಈ ಕೂಸು, ಮುಂದಿನ ದಿನಗಳಲ್ಲಿ ಮತ್ತೆ ಭಾರವನ್ನು ಆಶ್ರಯಿಸುವ ಕಾಲ ಬಂದರೂ ಬರಬಹುದು ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಯಾಕೆಂದರೆ ಅಲ್ಲಿನ ಪ್ರಜೆಗಳೇ ಭಾರತದ್ತ ಒಲವು ತೋರಿಸಲು ಆರಂಭಿಸಿದ್ದು ‘ಅಲ್ಲಾಹ್ ನಮಗೆ ಮೋದಿ(Modi)ಯನ್ನು ಕೊಡಲಿ ಅವರು ನಮ್ಮ ದೇಶವಾಳಲಿ’ ಎಂದು ಮಾತನಾಡಿದ ಹೇಳಿಕೆ ಇದೀಗ ಸಾಕಷ್ಟು ವೈರಲ್ ಆಗಿದೆ.
ಹೌದು, ಪಾಕಿಸ್ತಾನದ ಪ್ರಜೆಯೊಬ್ಬ ನಮಗೆ ಅಲ್ಲಾಹ್ ಮೋದಿಯನ್ನು ನೀಡಲಿ ಅವರು ಈ ದೇಶದ ಸ್ಥಿತಿಯನ್ನು ಸರಿಪಡಿಸುತ್ತಾರೆ ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರವು ಕೈಗೊಳ್ಳುವ ಕ್ರಮಗಳು ವಿಶ್ವಮಾನ್ಯವಾಗಿವೆ. ಜಗತ್ತಿನ ದೊಡ್ಡ ದೊಡ್ಡ ದೇಶಗಳ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ನಿಲುವುಗಳನ್ನು ಆಗಾಗ ಹೊಗಳುತ್ತಿರುತ್ತಾರೆ. ಇಂತಹ ಹೆಮ್ಮೆಯ ನುಡಿಗಳು ಭಾರತೀಯರಿಗೆ ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿವೆ. ಆದರೀಗ ಭಾರತವನ್ನು ಕಂಡರೆ ಸಾಕು ಹೌಹಾರುತ್ತಿದ್ದ ನೆರೆಯ ಪಾಕಿಸ್ತಾನದ ಜನರು ಭಾರತವನ್ನು ಅದರಲ್ಲೂ ಮೋದಿಯನ್ನು ಹೊಗಳಿದ್ದು ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿದೆ.
ಪಾಕಿಸ್ತಾನದ ಯೂಟ್ಯೂಬರ್(Youtuber) ಸನಾ ಅಮ್ಜದ್(Sanaa Ajmad) ಅವರು ಪೋಸ್ಟ್ ಮಾಡಿದ ವೈರಲ್ ವೀಡಿಯೊದಲ್ಲಿ ಯುವಕನೋರ್ವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್(Shebaaj Sharif) ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಮಾಜಿ ಪತ್ರಕರ್ತೆಯಾಗಿರುವ, ಸನಾ ಅಮ್ಜದ್ ಅವರು ‘ಪಾಕಿಸ್ತಾನ್ ಸೆ ಜಿಂದಾ ಭಾಗೋ ಚಾಹೆ ಇಂಡಿಯಾ ಚಲೇ ಜಾವೋ’ (ಪಾಕಿಸ್ತಾನದಿಂದ ನಿಮ್ಮ ಪ್ರಾಣಕ್ಕಾಗಿ ಭಾರತಕ್ಕೆ ಓಡಿಹೋಗಿ) ಎಂದು ಘೋಷಣೆಯನ್ನು ಏಕೆ ಬೀದಿಗಳಲ್ಲಿ ಎತ್ತಲಾಗುತ್ತಿದೆ ಎಂದು ಸ್ಥಳೀಯರೊಬ್ಬರನ್ನು ಕೇಳಿದ್ದಾರೆ. ಇದಕ್ಕೆ ಅವರು ತುಂಬಾ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದು, ತಾನು ಪಾಕಿಸ್ತಾನದಲ್ಲಿ ಹುಟ್ಟಬಾರದೆಂದು, ಭಾರತದಲ್ಲಿ ಹುಟ್ಟಬೇಕೆಂದು, ಜೊತೆಗೆ ಮೋದಿಯವರು ಪ್ರಧಾನಿಯಾಗಬೇಕೆಂದು ಬಯಸುವುದಾಗಿ ಭಾವುಕವಾಗಿ ಪ್ರತಿಕ್ರಿಯಿಸಿದ್ದಾನೆ.
ಜಾಲತಾಣಗಳಲ್ಲಿ ಹರಿದಾಡುತ್ತಿರು ವಿಡಿಯೋದಲ್ಲಿ ಪಾಕಿಸ್ತಾನದ ಪ್ರಜೆ ‘ಮೋದಿ ನಮಗಿಂತ ಉತ್ತಮರು, ನಮಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಬೇಕು. ಅವರ ಹೊರತಾಗಿ ಬೇರೆ ಯಾರೂ ಬೇಡ. ಅವರು ಅಲ್ಲಿನ ಜನರನ್ನು ತುಂಬಾ ಗೌರವಿಸುತ್ತಾರೆ. ಒಂದು ವೇಳೆ ನಮಗೆ ನರೇಂದ್ರ ಮೋದಿ ಸಿಕ್ಕರೆ, ನಮ್ಮವರೇ ಆದ ಪರ್ವೇಜ್ ಮುಷರಫ್, ನವಾಜ್ ಷರೀಫ್, ಬೆನಜೀರ್ ಅಥವಾ ಇಮ್ರಾನ್ ಯಾರ ಅಗತ್ಯವೂ ನಮಗಿರುವುದಿಲ್ಲ. ನಮಗೆ ಬೇಕಾಗಿರುವುದು ಪ್ರಧಾನಿ ಮೋದಿ ಏಕೆಂದರೆ ಅವರು ಮಾತ್ರ ನಮ್ಮ ದೇಶದ ಎಲ್ಲಾ ಚೇಷ್ಟೆ ಕುತಂತ್ರಗಳನ್ನು ನಿಭಾಯಿಸಬಲ್ಲರು. ಭಾರತವೂ ಪ್ರಸ್ತುತ ವಿಶ್ವದ 5ನೇ ಅತೀದೊಡ್ಡ ಆರ್ಥಿಕತೆಯಾಗಿದೆ. ಆದರೆ ನಾವು ಭಾರತದ ಸಮೀಪದಲ್ಲೂ ಇಲ್ಲ. ಅವರು ಎಲ್ಲೋ ಇದ್ದರೆ ನಾವೆಲ್ಲೋ ಇದ್ದೇವೆ. ನಮಗೂ ಅವರಿಗೂ ಯಾವುದೇ ಹೋಲಿಕೆ ಇಲ್ಲ. ಅಲ್ಲಾಹೂ ನಮಗೆ ಬೇರೆನೂ ಕೊಡುವುದು ಬೇಡ ನರೇಂದ್ರ ಮೋದಿಯನ್ನು ಕೊಡಲಿ’ ಎಂದು ಹೇಳಿದ್ದಾನೆ.
ಅಲ್ಲದೆ ‘ಭಾರತದಲ್ಲಿರುವ ಮುಸ್ಲಿಮರು ಪುಣ್ಯವಂತರು, ನಾನು ಮೋದಿಯವರ ಆಳ್ವಿಕೆಯಲ್ಲಿ ಬದುಕಲು ಸಿದ್ಧನಿದ್ದೇನೆ, ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ಕೆಟ್ಟ ಮನುಷ್ಯ ಅಲ್ಲ, ಅಲ್ಲಿ ಭಾರತೀಯರಿಗೆ ಟೊಮ್ಯಾಟೊ ಮತ್ತು ಚಿಕನ್ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ರಾತ್ರಿಯಲ್ಲಿ ನಿಮ್ಮ ಮಕ್ಕಳಿಗೆ ತಿನ್ನಲು ಕೊಡಲು ಏನೂ ಇಲ್ಲದಿದ್ದಾಗ ನೀವು ಇರುವ ದೇಶವನ್ನು ದೂರಲು ಪ್ರಾರಂಭಿಸುತ್ತೀರಿ. ನಾನು ದೇವರಲ್ಲಿ ಮೋದಿಯನ್ನು ನೀಡುವಂತೆ ಬೇಡುತ್ತೇನೆ. ಅವರು ನಮ್ಮ ದೇಶವನ್ನು ಅಳುವಂತೆ ಕೇಳುತ್ತೇನೆ ಎಂದು ಆ ಯುವಕ ಭಾವುಕನಾಗಿದ್ದಾನೆ (Pakistani statement). ಪಾಕಿಸ್ತಾನ ಭಾರತದೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಬೇಕು. ಪ್ರಸ್ತುತ ಭಾರತ ಹಾಗೂ ಪಾಕಿಸ್ಥಾನ ಮಧ್ಯೆ ಯಾವುದೇ ಹೋಲಿಕೆ ಇಲ್ಲ ಎಂದು ಆತ ಹೇಳಿದ್ದಾನೆ.
ಅಲ್ಲದೇ 1947ರಲ್ಲಿ ಪಾಕಿಸ್ತಾನ ಭಾರತದಿಂದ ಪ್ರತ್ಯೇಕಗೊಂಡು ಸ್ವಾತಂತ್ರ ಗಳಿಸಿತ್ತು. ಆದರೆ ಈ ಪ್ರತ್ಯೇಕತೆ ಆಗಬಾರದಿತ್ತು. ಪ್ರತ್ಯೇಕವಾಗದೇ ಹೋಗಿದ್ದಲ್ಲಿ ನಾವು 20 ರೂಪಾಯಿಗೆ ಒಂದು ಕೇಜಿ ಟೊಮೆಟೋ ಖರೀದಿಸಬಹುದಿತ್ತು. 150 ರೂಪಾಯಿಗೆ ಒಂದು ಕೆಜಿ ಚಿಕನ್ ಖರೀದಿಸಬಹುದಿತ್ತು. 100 ರೂಪಾಯಿಗೆ ಪೆಟ್ರೋಲ್ ಖರೀದಿಸಬಹುದಿತ್ತು ಎಂದು ಆತ ಹೇಳಿದ್ದಾನೆ. ಇಸ್ಲಾಮಿಸ್ಟ್ ರಾಷ್ಟ್ರ (Islamist nation) ಎಂದು ಘೋಷಿಸಲ್ಪಟ್ಟಿದ್ದರು, ದುರಾದೃಷ್ಟವಶಾತ್ ಇಸ್ಲಾಂನ ತತ್ವಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿಲ್ಲ ಎಂದು ಆ ಯುವಕ ಬೇಸರ ವ್ಯಕ್ತಪಡಿಸಿದ್ದಾನೆ.
https://twitter.com/IMinakshiJoshi/status/1628637639061692416?t=jK4k7sUGdFc7klvmV3LZXg&s=08