Swara Bhaskar Marriage: ನಿಮಗೂ ಫ್ರಿಡ್ಜ್ ಗತಿ ಬರಬಹುದು! ಮುಸ್ಲಿಂನನ್ನು ಮದುವೆ ಆಗುವ ಮೊದಲು ಫ್ರಿಡ್ಜನ್ನು ನೋಡಬೇಕಿತ್ತು: ಸ್ವರ ಭಾಸ್ಕರ್ಗೆ ಟಾಂಗ್ ಕೊಟ್ಟ ಸಾಧ್ವಿ ಪ್ರಾಚಿ

Swara Bhaskar Marriage: ಬಾಲಿವುಡ್ ನಟಿ ಸ್ವರಾ ಭಾಸ್ಕರ್(Swara bhaskar) ಕಳೆದ ಕೆಲ ದಿನಗಳ ಹಿಂದೆ ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್(Pahad Ahamad) ಜತೆಗೆ ವಿವಾಹವಾಗಿದ್ದರು. ಇದು ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದಕ್ಕೂ ಮೊದಲು ಶ್ರದ್ಧಾ ವಾಕರ್(Shradda Wakar) ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದೀಗ ವಿಶ್ವ ಹಿಂದು ಪರಿಷತ್ ನಾಯಕಿ ಸಾಧ್ವಿ ಪ್ರಾಚಿ(Saadvi Prachi) ಈ ಎರಡೂ ಪ್ರಕರಣಕ್ಕೂ ಲಿಂಕ್ ಮಾಡಿ ಸ್ವರಾ ಭಾಸ್ಕರ್​ಗೆ ‘ನಿಮಗೂ ಇದೇ ಗತಿ ಬರಬಹುದು’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

 

ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಆಕೆಯ ಪ್ರಿಯಕರ ಆಫ್ತಾಬ್ ಪೂನಾವಾಲಾ(Afthab Poonavala) ಶ್ರದ್ಧಾಳ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಮನೆಯ ಫ್ರಿಡ್ಜ್​ನಲ್ಲಿಟ್ಟಿದ್ದ. ಈಗ ಈ ಪ್ರಕರಣಕ್ಕೂ ಸ್ವರಾ ಭಾಸ್ಕರ್ ಮದುವೆಗೂ ಲಿಂಕ್ ಮಾಡಿದ್ದಾರೆ ಸಾಧ್ವಿ. ಸ್ವರಾ ಭಾಸ್ಕರ್, ಫಹಾದ್​ನನ್ನು ಮದುವೆಯಾಗುವ (Swara Bhaskar Marriage) ಮೊದಲು ಈ ಪ್ರಕರಣವನ್ನು ನೆನಪಿಸಿಕೊಳ್ಳಬೇಕಾಗಿತ್ತು. ಇದು ಆಕೆಯ ವೈಯಕ್ತಿಕ ನಿರ್ಧಾರ. ಆದರೆ ಶ್ರದ್ಧಾಗೆ ಆದಂತೆ ಸ್ವರಾಗೂ ಇದೇ ಗತಿ ಆಗಬಾರದು ಎಂದೇನಿಲ್ಲ ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ

ಸ್ವರಾ ಅವರು ಈ ಮೊದಲಿನಿಂದಲೂ ಹಿಂದೂ ಧರ್ಮದ ವಿರೋಧಿಯೇ ಆಗಿದ್ದರು. ಬೇರೆ ಧರ್ಮದವರನ್ನು ಅವರು ಮದುವೆ ಆಗುತ್ತಾರೆ ಎಂದು ನನಗೆ ಮೊದಲೇ ಅನಿಸಿತ್ತು. ಅದು ಈಗ ಆಗಿದೆ. ಅವರು ಮುಸ್ಲಿಂನನ್ನು ಮದುವೆ ಆಗಿದ್ದಾರೆ. ಅಲ್ಲದೆ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ಮುಂಚೆ ಸ್ವರಾ ಅವರು ಪ್ರಿಡ್ಜ್(Fridge) ನೋಡಬೇಕಿತ್ತು ಎಂದು ಸಾಧ್ವಿ ಹೇಳಿದ್ದಾರೆ.

ಫೆ.16ರಂದು ಸ್ವರಾ ಭಾಸ್ಕರ್ ಅವರು ಫಹಾದ್ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡ ವಿಚಾರ ಘೋಷಿಸಿದರು. ಅವರು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ವಿಚಾರದ ಬಗ್ಗೆ ಈಗಲೂ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ‘ಇಸ್ಲಾಂ ಧರ್ಮವನ್ನು ಒಪ್ಪದೆ ಫಹಾದ್​ನ ಮದುವೆ ಆಗಿದ್ದರಿಂದ ಈ ವಿವಾಹ ಮಾನ್ಯ ಅಲ್ಲ ಎಂದು’ ಎಂದು ಮುಸ್ಲಿಂ ಧರ್ಮಗುರುಗಳು ಹೇಳಿದ್ದರು.

Leave A Reply

Your email address will not be published.