WhatsApp Update : ವಾಟ್ಸಾಪ್ ಪ್ಲಾಟ್ ಫಾರ್ಮ್ ಗೆ ಬಂತು ಹೊಸ ಫೀಚರ್ಸ್, ಉಪಯೋಗ ಅನೇಕ!
WhatsApp Update : ವಿಶ್ವದಲ್ಲೇ ಅತೀ ದೊಡ್ಡ ಜನಪ್ರಿಯ ಸಂದೇಶವಾಹಕ ಅಂದರೆ ಅದು ವಾಟ್ಸಪ್(whatsapp )ಅಪ್ಲಿಕೇಶನ್(application ). ಹೌದು ವಿಶ್ವದ ಯಾವುದೆ ಮೂಲೆಯಿಂದ ಯಾವುದೇ ಮೂಲೆಗಾದರು ಜನರು ಮೆಸೇಜ್(message) ಕಳುಹಿಸಬಹುದು. ಮೆಸೇಜ್ ಮಾತ್ರ ಅಲ್ಲದೆ ಫೋಟೋಗಳು(photo ), ವಿಡಿಯೋಗಳು(video), ವಾಯ್ಸ್ ಮೆಸೇಜ್ , ಧ್ವನಿ ಕರೆಗಳು, ಇನ್ನೊಬ್ಬರ ಸಂಪರ್ಕ , ಸ್ಥಳದ ವಿಳಾಸವನ್ನು ಕಳುಹಿಸಬಹುದು. ಈ ಎಲ್ಲಾ ಕಾರಣದಿಂದ ವಾಟ್ಸ್ ಆಪ್ ಆಕರ್ಷಕವಾಗಿದ್ದು ಈಗಿನ ಮಕ್ಕಳು, ಯುವಕರು, ಯುವತಿಯರು(womens ) ವಾಟ್ಸಪ್ ಗೆ ಮನಸೋತಿದ್ದಾರೆ.
ಇಲ್ಲಿಯವರೆಗೆ ಮೆಟಾ ಮಾಲಿಕತ್ವದ ವಾಟ್ಸಪ್ ವಾಟ್ಸಾಪ್ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದ್ದು, ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಪ್ರೈವೇಟ್ ನ್ಯೂಸ್‌ಲೆಟರ್ ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ದೊರೆತಿದೆ. ವಾಟ್ಸಾಪ್ ಹೊಸ ಪ್ರೈವೇಟ್ ನ್ಯೂಸ್‌ಲೆಟರ್ ಫೀಚರ್ಸ್‌ನಲ್ಲಿ (WhatsApp Update) ಕಾರ್ಯನಿರ್ವಹಿಸುತ್ತಿದ್ದು, ಇದು ಮಾಹಿತಿಯನ್ನು ಪ್ರಸಾರ ಮಾಡುವುದಕ್ಕೆ ಅವಕಾಶ ಮಾಡಿಕೊಡಲಿದೆ ಎನ್ನಲಾಗಿದೆ.
ಇದನ್ನೂ ಓದಿ : WhatsApp Update: ಹೊಸ ಫೀಚರ್ ಪರಿಚಯಿಸಿದ ವಾಟ್ಸಪ್
ಪ್ರೈವೇಟ್ ನ್ಯೂಸ್ ಲೆಟರ್ ಕಾರ್ಯ ವೈಖರಿ :
• ಮುಖ್ಯವಾಗಿ ಇದು ಜನರಿಗೆ ಉಪಯುಕ್ತ ಅಪ್ಡೇಟ್‌ಗಳನ್ನು ಪಡೆಯುವುದಕ್ಕೆ ಮಾರ್ಗದರ್ಶಿ ನೀಡಲಿದೆ ಎಂದು ಹೇಳಲಾಗಿದೆ. • ಇದು ಪ್ರೈವೇಟ್ ಚಾಟ್‌ಗಳಿಂದ ಪ್ರತ್ಯೇಕವಾಗಿರಲಿದೆ.
• ಜೊತೆಗೆ ಪ್ರೈವೇಟ್ ಮೆಸೇಜ್ ಸೆಂಡಿಂಗ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್‌ಗೆ ರಾಜಿಯಾಗುವುದಿಲ್ಲ ಎಂದು ವರದಿಯಾಗಿದೆ.
• ವಾಟ್ಸಾಪ್ ಬಳಕೆದಾರರು ನ್ಯೂಸ್ ಲೆಟರ್ ಮೂಲಕ ತಾವು ಅನುಸರಿಸುವವರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಬೇರೆ ಯಾರೂ ಕೂಡ ಅದನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ.
• ನ್ಯೂಸ್‌ಲೆಟರ್‌ಗಳು ಮಾಹಿತಿಯನ್ನು ಪ್ರಸಾರ ಮಾಡಲು ಒಂದರಿಂದ ಹಲವು ಡಿವೈಸ್‌ಗಳು ಮತ್ತು ಸ್ಥಳೀಯ ಅಧಿಕಾರಿಗಳು ಮತ್ತು ಗುಂಪುಗಳಿಂದ ಅಪ್ಡೇಟ್‌ಗಳನ್ನು ಸುಲಭವಾಗಿ ಸ್ವಿಕರಿಸುವುದಕ್ಕೆ ಅವಕಾಶ ನೀಡಲಿದೆ. ನ್ಯೂಸ್ ಲೆಟರ್‌ನಿಂದ ಬಳಕೆದಾರರು ಅಂತಿಮವಾಗಿ ಅವರು ಯಾರಿಂದ ಸುದ್ದಿ ಕೇಳಲು ಬಯಸುತ್ತಾರೆ ಎಂಬುದನ್ನು ಆಯ್ಕೆ ಮಾಡಬಹುದಾಗಿದೆ.
• ಇದಲ್ಲದೆ ವಾಟ್ಸಾಪ್ ಇದೇ ಮೊದಲ ಬಾರಿಗೆ ಬಳಕೆದಾರರಿಗೆ ಸ್ಟೇಟಸ್‌ನಲ್ಲಿ ವಾಯ್ಸ್ ನೋಟ್ ಅನ್ನು ಪೋಸ್ಟ್ ಮಾಡಲು ಅವಕಾಶ ನೀಡಿದೆ. ಅಂದರೆ ವಾಯ್ಸ್ ಸ್ಟೇಟಸ್ ಪೋಸ್ಟ್ ಮಾಡಲು ವಾಟ್ಸಾಪ್‌ನಲ್ಲಿ ಅವಕಾಶ ಲಭ್ಯವಿದೆ. ಅದರಂತೆ ವಾಟ್ಸಾಪ್‌ನಲ್ಲಿ ನೀವು 30 ಸೆಕೆಂಡುಗಳವರೆಗೆ ವಾಯ್ಸ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಬಹುದಾಗಿದೆ. ಅಲ್ಲದೆ ಬಳಕೆದಾರರು ವಾಯ್ಸ್ ಸ್ಟೇಟಸ್ ಅನ್ನು ಕೆಲವು ಆಯ್ದ ಕಂಟ್ಯಾಕ್ಟ್‌ಗಳೊಂದಿಗೆ ಮಾತ್ರ ಶೇರ್ ಮಾಡುವ ಅವಕಾಶವನ್ನು ನೀಡಲಾಗಿದೆ.
• ವಾಟ್ಸಾಪ್ ಸ್ಟೇಟಸ್‌ಗೆ ರಿಯಾಕ್ಷನ್ ನೀಡುವಾಗ ಎಮೋಜಿಗಳ ಮೂಲಕ ಪ್ರತಿಕ್ರಿಯೆ ನೀಡಬಹುದು. ಇದರಲ್ಲಿ ಎಂಟು ಎಮೋಜಿಗಳನ್ನು ಬಳಸಲು ಅವಕಾಶ ನೀಡಲಾಗಿದೆ. ಇಲ್ಲವೇ ಟೆಕ್ಸ್ಟ್ ಮೆಸೇಜ್, ವಾಯ್ಸ್ ಮೆಸೇಜ್, ಸ್ಟಿಕ್ಕರ್‌ಗಳನ್ನು ಬಳಸಿಕೊಂಡು ವಾಟ್ಸಾಪ್ ಸ್ಟೇಟಸ್‌ಗೆ ರಿಪ್ಲೇ ಮಾಡಬಹುದಾಗಿದೆ.
• ವಾಟ್ಸಾಪ್ ಪರಿಚಯಿಸಿರುವ ಹೊಸ ಆಯ್ಕೆಗಳಲ್ಲಿ ನಿಮ್ಮ ಸ್ಟೇಟಸ್ ಅನ್ನು ಯಾರೆಲ್ಲಾ ನೋಡಬಹುದು ಎಂದು ಆಯ್ಕೆ ಮಾಡುವ ಆಯ್ಕೆ ನೀಡಲಾಗಿದೆ. ಇದರ ವಿಶೇಷತೆ ಏನೆಂದರೆ ಪ್ರತಿ ಸ್ಟೇಟಸ್ ಗೆ ಕೂಡ ನೀವು ಪ್ರೈವೆಸಿ ಸ್ಟೆಟ್ಟಿಂಗ್ಸ್ ಅನ್ನು ಅಪ್ಡೇಟ್ ಮಾಡಬಹುದು. ಅಲ್ಲದೆ ಪರ್ಸನಲ್ ಸ್ಟೇಟಸ್ ಅನ್ನು ಕೆಲವು ಆಯ್ದ ಬಳಕೆದಾರರಿಗೆ ಮಾತ್ರ ಕಾಣುವಂತೆ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ.
ಈ ಎಲ್ಲಾ ಬದಲಾವಣೆಯಿಂದ ವಾಟ್ಸಾಫ್ ಸ್ಟೇಟಸ್ ಅಪ್ಡೇಟ್ ಮಾಡುವ ಬಳಕೆದಾರರು ಹೊಸ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಹೊಸ ಅಪ್ಡೇಟ್ ಫೀಚರ್ಸ್‌ಗಳು ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಆವೃತ್ತಿಗಳಲ್ಲಿಯೂ ಕೂಡ ಲಭ್ಯವಾಗಲಿದ್ದು ಈ ಮೇಲಿನಂತೆ ವಾಟ್ಸಪ್ ನಲ್ಲಿ ವಾಟ್ಸಾಪ್ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ.