BBMP Recruitment 2023 : ಬಿಬಿಎಂಪಿಯಲ್ಲಿ ಉದ್ಯೋಗವಕಾಶ, ಮಾಸಿಕ ವೇತನ ರೂ.25,000

BBMP Recruitment 2023 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP Recruitment 2023) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಇಲ್ಲಿ ನೀಡಿರುವ ಹುದ್ದೆಯ ಅವಧಿಯು 1 ವರ್ಷ ಆಗಿದ್ದು, ಇವುಗಳು ಗುತ್ತಿಗೆ ಆಧಾರಿತ ಹುದ್ದೆಗಳಾಗಿವೆ. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ :
ಪ್ಯಾರಾಮೆಡಿಕಲ್ ವರ್ಕರ್ – 2
ಸೀನಿಯರ್ ಟ್ಯೂಬರ್‌ಕ್ಯೂಲೋಸಿಸ್ ಲ್ಯಾಬೋರೇಟರಿ ಸೂಪರ್‌ವೈಸರ್ (STLS)- 2
ಸೈಕಿಯಾಟ್ರಿಕ್ ನರ್ಸ್‌ – 1
ಕಂಮ್ಯೂನಿಟಿ ನರ್ಸ್ -1
ಮೆಡಿಕಲ್ ಆಫೀಸರ್ – 29
ಕಂಮ್ಯೂನಿಟಿ ಮೊಬಿಲೈಜರ್ – 1
ಜೋನಲ್ ಅಕೌಂಟ್ಸ್‌ ಮ್ಯಾನೇಜರ್ – 2
ಡೆಂಟಿಸ್ಟ್‌ – 4
ASHA ಮೆಂಟರ್ – 3
ಜಿಲ್ಲಾ ಸಂಯೋಜಕರು – 1
ಮನಃಶಾಸ್ತ್ರಜ್ಞರು/ ಕೌನ್ಸಿಲರ್ – 1
ಜಿಲ್ಲಾ ಕಂಮ್ಯೂನಿಟಿ ಮೊಬಿಲೈಜರ್ – 1
ಆರ್‌ಬಿಎಸ್‌ಕೆ ಮೆಡಿಕಲ್ ಆಫೀಸರ್ – 1

ಮಾಸಿಕ ವೇತನ :
ಪ್ಯಾರಾಮೆಡಿಕಲ್ ವರ್ಕರ್ – ರೂ.16,800.
ಸೀನಿಯರ್ ಟ್ಯೂಬರ್‌ಕ್ಯೂಲೋಸಿಸ್ ಲ್ಯಾಬೋರೇಟರಿ ಸೂಪರ್‌ವೈಸರ್ (STLS)- ರೂ. 21,000
ಸೈಕಿಯಾಟ್ರಿಕ್ ನರ್ಸ್‌ – ರೂ. 14,000.
ಕಂಮ್ಯೂನಿಟಿ ನರ್ಸ್ -ರೂ.14,000.
ಮೆಡಿಕಲ್ ಆಫೀಸರ್ – ರೂ.47,250.
ಕಂಮ್ಯೂನಿಟಿ ಮೊಬಿಲೈಜರ್ -ರೂ.50,000
ಜೋನಲ್ ಅಕೌಂಟ್ಸ್‌ ಮ್ಯಾನೇಜರ್ -ರೂ.17,000.
ಡೆಂಟಿಸ್ಟ್‌ -ರೂ.63,000.
ASHA ಮೆಂಟರ್ – ರೂ.15,600.
ಜಿಲ್ಲಾ ಸಂಯೋಜಕರು -ರೂ.40,000.
ಮನಃಶಾಸ್ತ್ರಜ್ಞರು/ ಕೌನ್ಸಿಲರ್ -ರೂ.25,000.
ಜಿಲ್ಲಾ ಕಂಮ್ಯೂನಿಟಿ ಮೊಬಿಲೈಜರ್ -ರೂ.13,135.
ಆರ್‌ಬಿಎಸ್‌ಕೆ ಮೆಡಿಕಲ್ ಆಫೀಸರ್ -ರೂ.25,000.

ಪ್ರಮುಖ ದಿನಾಂಕ:
ಸಂದರ್ಶನ ದಿನಾಂಕ – 01/03/2023 ರಿಂದ 03/03/2023.
ಸಂದರ್ಶನ ಸಮಯ -ಬೆಳಿಗ್ಗೆ 10-30 ರಿಂದ ಸಂಜೆ 04-30 ವರೆಗೆ.

ವಯೊಮಿತಿ:
• ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷ
• ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಟ 40 ವರ್ಷ

ಅರ್ಜಿ ಸಲ್ಲಿಕೆ :
ಅಭ್ಯರ್ಥಿಗಳು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಅರ್ಜಿ ಭರ್ತಿ ಮಾಡಿ, ನಂತರ ಅದನ್ನು ದಾಖಲೆಗಳೊಂದಿಗೆ, ಒಂದು ಸೆಟ್‌ ಜೆರಾಕ್ಸ್‌ ಕಾಪಿಗಳನ್ನು ತೆಗೆದುಕೊಂಡು ಕೆಳಗೆ ತಿಳಿಸಿದ ಸ್ಥಳಕ್ಕೆ ಕಳುಹಿಸಬೇಕು.

ಸಂದರ್ಶನ ಸ್ಥಳ :
ಡಾ ರಾಜ್‌ಕುಮಾರ್ ಗ್ಲಾಸ್ ಹೌಸ್,
ಬಿಬಿಎಂಪಿ ಕೇಂದ್ರ ಕಛೇರಿ,
ಎನ್‌.ಆರ್.ಸ್ಕ್ವೇರ್,
ಬೆಂಗಳೂರು-560002

ಹೆಚ್ಚಿನ ಮಾಹಿತಿಗಳಿಗೆ ಬಿಬಿಎಂಪಿ ವೆಬ್‌ಸೈಟ್ www.bbmp.gov.in ಗೆ ಕ್ಲಿಕ್ ಮಾಡಿ.

Leave A Reply

Your email address will not be published.