Flipkart mobile sale : ಹೊಸ ಮೊಬೈಲ್ ಖರೀದಿದಾರರಿಗೆ ಇಲ್ಲಿದೆ ಉತ್ತಮ ಆಫರ್ : ಕೈಗೆಟಕುವ ದರದಲ್ಲಿ ಸಿಗಲಿದೆ ಈ ಮೊಬೈಲ್!

Flipkart mobile sale : ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಹೊಸ ಆಫರ್ (Flipkart mobile sale) ನೀಡುವುದರ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ನಡೆಸುತ್ತಾ ಗ್ರಾಹಕರನ್ನು ತನ್ನತ್ತ ಸೆಳೆಯುತ್ತ ಬಂದಿದೆ. ಇದೀಗ ಫ್ಲಿಪ್‌ಕಾರ್ಟ್, ಬ್ರಾಂಡ್‌ ಮೊಬೈಲ್‌ಗಳನ್ನು ಭಾರೀ ರಿಯಾಯಿತಿಗಳಲ್ಲಿ ಮಾರಾಟ ಮಾಡುತ್ತಿದೆ.

ಹೌದು. Realme C35 ಮೊಬೈಲ್ ಫೋನ್ ಭಾರಿ ರಿಯಾಯಿತಿಯಲ್ಲಿ ಸಿಗಲಿದ್ದು, ಹೊಸ ಮೊಬೈಲ್ ಖರೀದಿದಾರರಿಗೆ ಇದು ಉತ್ತಮ ಅವಕಾಶವಾಗಿದೆ. ಕಡಿಮೆ ಬೆಲೆಗೆ ಉತ್ತಮ ಫೀಚರ್ ಇರುವ ಮೊಬೈಲ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಗಿದ್ರೆ ಇನ್ಯಾಕೆ ತಡ ಯಾವ್ಯಾವ ಮೊಬೈಲ್ ಗಳು ರಿಯಾಯಿತಿಯಲ್ಲಿ ದೊರೆಯಲಿದೇ ಎಂಬುದನ್ನು ತಿಳಿಯೋಣ.

Realme C35:
ಈ ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಹೊಂದಿದ್ದು, ಬೆಲೆ ಸಾಮಾನ್ಯವಾಗಿ 13,999 ರೂಗಳಾಗಿದೆ. ಈ Realme C35 ಸ್ಮಾರ್ಟ್ಫೋನ್ 6.6 ಇಂಚಿನ ಪೂರ್ಣ HD+ ಡಿಸ್ಪ್ಲೇ ಹೊಂದಿದ್ದು 4GB RAM ಮತ್ತು 64GB ಸ್ಟೋರೇಜ್ ನೊಂದಿಗೆ ಬರುತ್ತದೆ. ಇದನ್ನು ಮೈಕ್ರೋ SD ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬಹುದು. ಅಷ್ಟೇ ಅಲ್ಲದೆ ಈ ಫೋನ್ ಆಕ್ಟಾ-ಕೋರ್ ಪ್ರೊಸೆಸರ್ ಹಾಗೂ Unisoc T616 ಅನ್ನು ಹೊಂದಿದೆ. Realme C35 f/1.8 ಅಪೆರ್ಚರ್, 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು f/2.4 ಅಪೆರ್ಚರ್ ಮತ್ತು 0.3-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು f/2.8 ಅಪೆರ್ಚರ್ನೊಂದಿಗೆ ಕ್ಯಾಮೆರಾ ಫೀಚರ್ಗಳನ್ನು ಒಳಗೊಂಡಿದೆ.

ಇದೀಗ ಇದರ ಮೇಲೆ 14% ಪ್ರತಿಶತ ರಿಯಾಯಿತಿದ್ದು, ಇದು 11,999 ರೂಗಳಿಗೆ ಲಭ್ಯವಿದೆ. ಕಳೆದ ವರ್ಷ ಮಾರ್ಚ್ ನಲ್ಲಿ ಈ ಫೋನ್ ಬಿಡುಗಡೆಯಾಗಿದೆ. HDFC ಬ್ಯಾಂಕ್ ಅಥವಾ SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿಕೊಂಡು ರೂ 1000 ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಹೆಚ್ಚುವರಿಯಾಗಿ ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸಿ 5% ಕ್ಯಾಶ್ಬ್ಯಾಕ್ ಸಹ ಪಡೆಯಬಹುದು.

Realme ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು, ಮುಂಭಾಗದಲ್ಲಿ f/2.0 ಅಪೆರ್ಚರ್ನೊಂದಿಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಸೇರಿಸಲಾಗಿದೆ. ಅಲ್ಲದೆ ಇದರ ಎಕ್ಸ್ಚೇಂಜ್ ಆಫರ್ ಪ್ರಕಾರ ಹಳೆಯ ಅಥವಾ ಅಸ್ತಿತ್ವದಲ್ಲಿರುವ ಫೋನ್ ಅನ್ನು ನೀಡಿದರೆ ಬೆಲೆಯು 10,800 ರೂ.ವರೆಗೆ ಕಡಿಮೆಯಾಗಬಹುದು. ಆದರೆ ಎಕ್ಸ್ಚೇಂಜ್ ಆಫರ್ನ ಸಂಪೂರ್ಣ ಲಾಭವನ್ನು ನೀವು ಪಡೆಯಬೇಕಾದರೆ ಎಕ್ಸ್ಚೇಂಜ್ ಮಾಡಿಕೊಳ್ಳುವ ಫೋನ್ನ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಎಕ್ಸ್ಚೇಂಜ್ ಆಫರ್ ಸ್ವೀಕರಿಸಿದರೆ ಬೆಲೆ ರೂ 1,199 ಗೆ ಹೆಚ್ಚಾಗಬಹುದು.

Leave A Reply

Your email address will not be published.