Sex Toy: 2 ಸಾವಿರ ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತಾ ‘ಸೆಕ್ಸ್ ಟಾಯ್’? ಇಂಗ್ಲೆಂಡಲ್ಲಿ ಪತ್ತೆಯಾದ 6.3 ಇಂಚಿನ ಈ ಮರದ ತುಂಡು ಹೇಳೋದಾದ್ರೂ ಏನು?
Sex Toy: ಇತ್ತೀಚಿನ ದಿನಗಳಲ್ಲಿ ಲೈಂಗಿಕವಾಗಿ ಸುಖ ಪಡೆಯಲು ಅನೇಕ ಮಾರ್ಗಗಳಿವೆ. ಅದರಲ್ಲಿ ‘ಸೆಕ್ಸ್ ಟಾಯ್ಸ್'(Sex Toy) ಬಳಕೆ ಕೂಡ ಒಂದು. ಅಲ್ಲದೆ ಇಂದಿನ ದಿನಗಳಲ್ಲಿ ಇದರಿಂದಲೇ ಸುಖ ಪಡೋರು ಹೆಚ್ಚೆನ್ನಬಹುದು. ಹಲವರು ಮದುವೆಯ ಬಳಿಕ ಸಂಗಾತಿ ಜೊತೆ ಸಂಭೋಗ ನಡೆಸಿ ಕಾಮದಲ್ಲಿ ಸಂತೃಪ್ತಿ ಹೊಂದಲು ಬಯಸಿದರೆ, ಕೆಲವರು ಮದುವೆ ಮುಂಚಿತವಾಗಿಯೂ ಸಂಭೋಗದಲ್ಲಿ ತೊಡಗುತ್ತಾರೆ. ಇಂತಹ ಸಂದರ್ಭದಲ್ಲಿ ತಮ್ಮ ಸಂಗಾತಿ ಹೆಚ್ಚಿನ ಸುಖ ನೀಡಲು ಅಶಕ್ತನಾದಾಗ ಹೆಚ್ಚಿನವರು ಸೆಕ್ಸ್ ಟಾಯ್ ಮೊರೆ ಹೋಗುತ್ತಾರೆ. ಅಲ್ಲದೆ ಅವಿವಾಹಿತರು, ಡಿಸ್ಟೆನ್ಸ್ ರಿಲೇಶನ್‌ಶಿಪ್( Distance Relationship)ನಲ್ಲಿ ಇರೋರು, ಹದಿಹರದ ಪ್ರಾಯದವರು ಕಾಮದ ಬಯಕೆಯಾದಾಗ ಹೆಚ್ಚಾಗಿ ಈ ಸೆಕ್ಸ್ ಟಾಯ್ ಬಳಸೋದು ಸಾಮಾನ್ಯವಾಗಿಬಿಟ್ಟಿದೆ. ಆದ್ರೆ ಸುಮಾರು 2 ಸಾವಿರ ವರ್ಷಗಳ ಹಿಂದೆಯೇ ಈ ಸೆಕ್ಸ್ ಟಾಯ್ ಬಳಕೆ ಇತ್ತು ಅಂದ್ರೆ ನೀವ್ ನಂಬ್ತೀರಾ? ನಂಬಲೇ ಬೇಕು. ಯಾಕೆ ಗೊತ್ತಾ? ಹಾಗಾದ್ರೆ ಈ ಸ್ಟೋರಿ ನೋಡಿ.
ಇಂದು ಸಂಗಾತಿಯಿಲ್ಲದೆ ಲೈಂಗಿಕ ಸುಖ ಕೊಡುವವೆಂದರೆ ಸೆಕ್ಸ್ ಟಾಯ್ ಗಳು. ಸದ್ಯ ಆನ್‌ಲೈನ್(Online)ನಲ್ಲಿ ಹಲವು ವೆರೈಟೆ ಸೆಕ್ಸ್ ಟಾಯ್‌ಗಳು ಲಭ್ಯವಿದ್ದು, ಅದನ್ನು ಸುಲಭವಾಗಿ ಆರ್ಡರ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಈ ಸೆಕ್ಸ್ ಟಾಯ್ಸ್ ಕಲ್ಪನೆ ಮಾತ್ರ ಇತ್ತೀಚಿನದ್ದಲ್ಲ. ಅದು ಬಹಳ ಹಿಂದಿನಿಂದಲೂ ಉಪಯೋಗಕ್ಕೆ ಬರುತ್ತಿರುವ ವಸ್ತು. ಯಾಕಂದ್ರೆ ಇಂಗ್ಲೆಂಡಿ(England)ರೋಮನ್ ಕೋಟೆ ವಿಂಡೋಲಾಂಡದಲ್ಲಿ ಸಂಶೋಧಕರು ಒಂದು ವಿಚಿತ್ರವಾದ ಮರದ ಕಲಾಕೃತಿಯನ್ನು ಕಂಡುಹಿಡಿದಿದ್ದು, ಈ ರೀತಿಯ ಅನುಮಾನಕ್ಕೆ ಕಾರಣವಾಗಿದೆ.
ಹೌದು, 6.3-ಇಂಚಿನ ಉದ್ದದ ಮರದ ಕಲಾಕೃತಿಯೊಂದು ಡಜನ್‌ಗಟ್ಟಲೆ ಬೂಟುಗಳು ಮತ್ತು ಡ್ರೆಸ್ ಪರಿಕರಗಳ ಜೊತೆಗೆ ಕಂಡುಬಂದಿದೆ. ಈ ಕಲಾಕೃತಿಗಳ ಕುರಿತ ಅಧ್ಯಯನವೊಂದು ಇದನ್ನು ಲೈಂಗಿಕ ಸಂತೋಷಕ್ಕಾಗಿ ಬಳಸಿರಬಹುದು ಎಂದು ತಿಳಿಸುವುದಲ್ಲದೆ, ಅವುಗಳನ್ನು ಸುಮಾರು 2,000 ವರ್ಷಗಳ ಹಿಂದೆಯೇ ಉಪಯೋಗಿಸುತ್ತಿದ್ದರೆಂದು ಸೂಚಿಸುತ್ತದೆ. ಹೊಸ ಅಧ್ಯಯನದಲ್ಲಿ, ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯ ಮತ್ತು ಯೂನಿವರ್ಸಿಟಿ ಕಾಲೇಜ್ ಡಬ್ಲಿನ್‌ನ ತಜ್ಞರು ಈ ಹೊಸ ವಸ್ತುವಿನ ಫಾಲಿಕ್ ಸ್ಟ್ರಕ್ಚರ್ ಗಮನಿಸಿದರೆ ಇದು ಸೆಕ್ಸ್ ಟಾಯ್ ಆಗಿರಬಹುದು ಎಂದು ಹೇಳಿದ್ದಾರೆ.
ಈ ಸೆಕ್ಸ್ ಟಾಯ್‌ನ್ನು ಫಾಲ್ಲಿ ಎಂದು ಗುರುತಿಸಲಾಗಿದ್ದು, ರೋಮನ್ ಸಾಮ್ರಾಜ್ಯದಾದ್ಯಂತ ಫಾಲ್ಲಿಯನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಸಣ್ಣ ಫಾಲ್ಲಿಯನ್ನು ಪೆಂಡೆಂಟ್‌ಗಳಾಗಿ ಧರಿಸಲಾಗುತ್ತಿತ್ತು ಅಥವಾ ಮನೆಯ ಅಲಂಕಾರಕ್ಕಾಗಿ ಬಳಸಲಾಗುತ್ತಿತ್ತು. ಈ ವಸ್ತುವಿನ ಗಾತ್ರವನ್ನು ಗಮನಿಸಿದರೆ, ಸಂಶೋಧಕರು ಇದನ್ನು ಲೈಂಗಿಕ ಸಾಧನವಾಗಿ ಬಳಸಿರಬಹುದು ಎಂದು ಭಾವಿಸುತ್ತಾರೆ. ಫಾಲಸ್ ಆಕಾರದ ವಸ್ತುವನ್ನು ಈಗ ನಾರ್ತಂಬರ್ ಲ್ಯಾಂಡ್‌ನ ವಿಂಡೋಲಾಂಡ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ.
‘ಉತ್ತರ ಇಂಗ್ಲೆಂಡ್‌ನ ಹ್ಯಾಡ್ರಿಯನ್ ಗೋಡೆಯ ದಕ್ಷಿಣಕ್ಕೆ ರೋಮನ್ ಕೋಟೆ’ ಎಂಬ ವಿಷಯದ ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಡಾ ರಾಬ್ ಕಾಲಿನ್ಸ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು ‘ಮರದ ವಸ್ತುವನ್ನು (Wooden object) 1992 ರಲ್ಲಿ ವಿಂಡೋಲಾಂಡಾದಲ್ಲಿ ಕಂಡುಹಿಡಿಯಲಾಯಿತು. ಈ ವಸ್ತುವಿನ ಎರಡೂ ತುದಿಗಳು ಗಮನಾರ್ಹವಾಗಿ ಸುಗಮವಾಗಿವೆ. ಹಾಗಾಗಿ ಇದು ಲೈಂಗಿಕ ಸಂಬಂಧದಲ್ಲಿ ಪುನರಾವರ್ತಿತ ಸಂಪರ್ಕವನ್ನು ಸೂಚಿಸುತ್ತದೆ. ಅಲ್ಲದೆ ಈ ಆಟಿಕೆಯನ್ನು ಮರದಿಂದ ಕೆತ್ತಲಾಗಿದೆ ಎಂಬ ಅಂಶವು ಅದರ ಬಳಕೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದು ಇಂತಹ ಉದ್ದೇಶಕ್ಕೇ ಬಳಕೆಯಾಗುತ್ತಿತ್ತು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಆ ಆಕಾರವನ್ನು ನೋಡಿದಾಗ ಸಾಂಕೇತಿಕವಾಗಿ ಬಳಸುವ ಸೆಕ್ಸ್ ಟಾಯ್‌ನಂತೆ ತೋರುತ್ತದೆ. ಇದೇನಾದರು ಲೈಂಗಿಕ ಆಟಿಕೆ ಆಗಿದ್ದರೆ, ಅದು ಬ್ರಿಟನ್ನಿನ ಹಳೆಯ ಉದಾಹರಣೆಯಾಗಿದೆ ಎಂದು ನಾವು ನಂಬುತ್ತೇವೆ’ ಎಂದಿದ್ದಾರೆ.