ಮದುವೆ ಆರತಕ್ಷತೆ ದಿನವೇ ಹೆಣವಾದ್ರು ನವವಿವಾಹಿತ ದಂಪತಿ! ಕಾರಣ ಕೇಳಿದ್ರೆ ನೀವೇ ಬೆಚ್ಚಿಬೀಳ್ತೀರಾ!

Share the Article

Chhattisgarh: ಮದುವೆಯ ಆರತಕ್ಷತೆಗೆ ದಿನವೇ ನವವಿವಾಹಿತ ದಂಪತಿಗಳು ತಮ್ಮ ಮನೆಯ ಕೋಣೆಯೊಳಗೆ ದೇಹದ ಮೇಲೆ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿರುವ ಅಹಿತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಕಾರಣ ತಿಳಿದರೆ ನೀವೇ ಬೆಚ್ಚಿಬೀಳುತ್ತೀರಿ ಗೊತ್ತಾ!

ಹೌದು, ಛತ್ತೀಸ್‌ಗಢದ(Chhattisgarh) ರಾಜಧಾನಿ ರಾಯ್‌ಪುರ(Raypura)ದಲ್ಲಿ ಮದುವೆಯ ಆರತಕ್ಷತೆಗೆ ಮುನ್ನ ನವವಿವಾಹಿತ ದಂಪತಿಗಳು ತಮ್ಮ ಮನೆಯ ಕೋಣೆಯೊಳಗೆ ದೇಹದ ಮೇಲೆ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು(Police) ಬುಧವಾರ ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ತಿಕ್ರಪಾರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಿಜ್‌ನಗರದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಸ್ಲಾಂ (24) ಮತ್ತು ಕಹ್ಕಶಾ ಬಾನೊ (22) ಭಾನುವಾರತಾನೆ ವಿವಾಹವಾಗಿದ್ದು, ಮಂಗಳವಾರ ರಾತ್ರಿ ಅವರ ವಿವಾಹದ ಆರತಕ್ಷತೆ ನಡೆಯಬೇಕಿತ್ತು. ಅವರು ತಮ್ಮ ಕೊಠಡಿಯೊಳಗೆ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದಾಗ ವರನ ತಾಯಿ ವಧುವಿನ ಕಿರುಚಾಟವನ್ನು ಕೇಳಿ ಎಲ್ಲರೂ ಅಲ್ಲಿಗೆ ಬಂದಿದ್ದಾರೆ. ಕೋಣೆಯ ಒಳಗಿನಿಂದ ಲಾಕ್ ಆಗಿತ್ತು, ಇಬ್ಬರ ಬಾಗಿಲು ತೆಗೆಯದ ಕಾರಣ ಹೊರಗಿನಿಂದ ಕುಟುಂಬದ ಸದಸ್ಯರು ಕಿಟಕಿಯ ಮೂಲಕ ಇಣುಕಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೊನೆಗೆ ಈ ನವ ದಂಪತಿಗಳ ಸಾವಿಗೆ ಕಾರಣವೇನೆಂದು ಶೋಧಿಸಿದಾಗ ಪರಸ್ಪರ ಇಬ್ಬರ ನಡುವೆ ಜಗಳ ನಡೆದಿದ್ದು, ಬಳಿಕ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಈ ದಂಪತಿಗಳ ನಡುವೆ ವಾಗ್ವಾದ ನಡೆದಿದ್ದು, ಪತಿ ಪತ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪೊಲೀಸ್ ಅಧಿಆಕರಿಗಳು ಹೇಳಿದ್ದಾರೆ.

Leave A Reply