BS Yediyurappa: ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ವಿಧಾನಸಭೆಗೆ ಇನ್ನೆಂದು ಕಾಲಿಡೋದಿಲ್ಲ. ಇದು ನನ್ನ ಕೊನೆಯ ಭಾಷಣ: ಸದನದಲ್ಲಿ ಯಡಿಯೂರಪ್ಪರ ಭಾವುಕ

BS Yediyurappa : ವಿಧಾನಸಭೆ(Vidhana Sabhe)ಯಲ್ಲಿದು ನನ್ನ ಕೊನೆಯ ಭಾಷಣ. ಇನ್ನು ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇನ್ನೆಂದೂ ವಿಧಾನಸಭೆ ಪ್ರವೇಶಿಸುವುದಿಲ್ಲ ಎಂಬ ಬಿಜೆಪಿ(BJP) ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yediyurappa)ನವರ ಭಾವುಕ ನುಡಿಗಳಿಗೆ ಇಂದಿನ ಸದನ ಸಾಕ್ಷಿಯಾಯಿತು.

ಹೌದು, ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಹಾಗೂ ವಿದಾಯದ ಭಾಷಣ ಮಾಡಿದ ಕೇಸರಿ ಕಲಿ, ಬಿಜೆಪಿಯ ನೇತಾರ ಯಡಿಯೂರಪ್ಪನವರು ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ, ಇನ್ನೆಂದೂ ಸದನದ ಒಳಗೆ ಬರುವ ಪ್ರಶ್ನೆಯೇ ಇಲ್ಲ ಎಂದು ದೃಢವಾಗಿ ಹೇಳುತ್ತ ಭಾವುಕರಾದರು.

ಯಡಿಯೂರಪ್ಪ ಅವರು ‘ವಿಧಾನಸಭೆಯಲ್ಲಿದು ಕೊನೆಯ ಭಾಷಣ ಎಂದು ಹೇಳುತ್ತಿದ್ದಂತೆಯೇ ಕಾಂಗ್ರೆಸ್(Congress) ಶಾಸಕ ಪ್ರಿಯಾಂಕ್ ಖರ್ಗೆ(Priyanak Kharge), ಜೆಡಿಎಸ್ ಶಾಸಕ ಶಿವಲಿಂಗೇಗೌಡ(Shivalinge gowda) ಸೇರಿದಂತೆ ಪ್ರತಿಪಕ್ಷಗಳ ನಾಯಕರು ಅವರ ಮನವೊಲಿಸುವಂತೆ ಮಾತನಾಡಿದರು. ಮತ್ತೆ ಚುನಾವಣೆಗೆ ನಿಂತು ಗೆಲ್ಲಬೇಕು ಎಂದು ಘೋಷಣೆ ಕೂಗಿದರು. ನೀವು ಹಿರಿಯ ನಾಯಕರು, ಮತ್ತೆ ಸದನ ಪ್ರವೇಶಿಸಬೇಕು, ನಮಗೆಲ್ಲಾ ಮಾರ್ಗದರ್ಶನ ಮಾಡಬೇಕು ಎಂದರು.

ಮತ್ತೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ವಿಪಕ್ಷದ ಬಹಳಷ್ಟು ನಾಯಕರು ನಮ್ಮ ಜೊತೆ ಬರಲು ಸಿದ್ಧರಿದ್ದಾರೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ಕಾಂಗ್ರೆಸ್​​​ ಮತ್ತೆ ವಿಪಕ್ಷ ಸ್ಥಾನದಲ್ಲೇ ಇರಬೇಕಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 7ನೇ ವೇತನ ಆಯೋಗ(7th pay commission)ಜಾರಿ ಬಗ್ಗೆ ಘೋಷಣೆ ಮಾಡಬೇಕು. ಸರ್ಕಾರಿ ನೌಕರರು ರಸ್ತೆಗಿಳಿಯದಂತೆ ನೋಡಿಕೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು.

ಅಲ್ಲದೆ ಬೊಮ್ಮಾಯಿ ಅವರನ್ನು ಶ್ಲಾಘಿಸಿದ ಅವರು ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮಂಡಿಸಿದ ಬಜೆಟ್ ಅ​​ನ್ನು ಸ್ವಾಗತಿಸುತ್ತೇನೆ. ಅವರು ಉತ್ತಮ ಬಜೆಟ್​ ಮಂಡಿಸಿದ್ದಾರೆ. ನಾನೂ ಸಹ ಹಣಕಾಸು ಸಚಿವನಾಗಿ ಹಲವು ಬಜೆಟ್ ಮಂಡಿಸಿದ್ದೇನೆ. ರಾಜ್ಯದ ಹಣಕಾಸು ಸ್ಥಿತಿ, ಸಂಪನ್ಮೂಲ ಕ್ರೋಢೀಕರಣ, ಜನರ ನಿರೀಕ್ಷೆ, ಪ್ರಾದೇಶಿಕವಾರು ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ಬಜೆಟ್ ವಿಶ್ಲೇಷಣೆ ವೇಳೆ ಇವೆಲ್ಲವನ್ನೂ ಗಮನಿಸಿ ಮಾತಾಡಬೇಕು’ ಎಂದು ಹೇಳಿದರು.

ಬಳಿಕ ಪ್ರಧಾನಿ ಬಗ್ಗೆ ಮಾತನಾಡಿದ BSY, ಪ್ರಧಾನಿ ನರೇಂದ್ರ ಮೋದಿ(PM Modi)ಯವರು ವಿಶ್ವ ಗುರು ಆಗಿದ್ದಾರೆ. ಅವರ ನಾಯಕತ್ವದಲ್ಲಿ ದೇಶ ಸದೃಢವಾಗಿದೆ. ಕೋವಿಡ್ ಸಾಂಕ್ರಾಮಿಕವನ್ನು ದೇಶ ಸಮರ್ಥವಾಗಿ ಎದುರಿಸಿತು. ಮೋದಿಯವರ ಮಾರ್ಗದರ್ಶನದಡಿ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ. ಇದನ್ನು ಒಪ್ಪಿಕೊಳ್ಳಲು ಯಾರೂ ಸಂಕೋಚ ಪಡುವ ಅಗತ್ಯ ಇಲ್ಲ. ಇದನ್ನು ನಮ್ಮ ವಿಪಕ್ಷ ನಾಯಕರು ಮಾಡಬೇಕಿತ್ತು. ನಾವು ಉತ್ತಮ ಆಡಳಿತ ಕೊಟ್ಟಿದ್ದೇವೆ. ನಮ್ಮ ಆಡಳಿತದಲ್ಲಿ ರಾಜ್ಯ ವಿಕಾಸ ಹೊಂದಿದೆ. ಇದರಲ್ಲಿ ಯಾರೂ‌ ಅನುಮಾನ ಪಡುವ ಹಾಗಿಲ್ಲ. ಆರ್​ಎಸ್​ಎಸ್ ಚಿಂತನೆಗಳನ್ನು ವಿರೋಧಿಸಿದರೆ ಜನ ನಮ್ಮನ್ನು ಗುರುತಿಸುತ್ತಾರೆ ಅಂತ ವಿಪಕ್ಷದವರು ಭ್ರಮೆಯಲ್ಲಿದ್ದಾರೆ ಎಂದು ಹೇಳಿದರು.

Leave A Reply

Your email address will not be published.