ಕಪ್ಪುಚುಕ್ಕೆಯಿರುವ ಈರುಳ್ಳಿಗಳು ಆರೋಗ್ಯಕ್ಕೆ ಒಳಿತೆ? ಕೆಡುಕೆ? : ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ

Black spotted onion: ಈರುಳ್ಳಿ ಇರದ ಮನೆಯೇ ಇಲ್ಲ ಎಂದು ಹೇಳಬಹುದು. ಯಾಕಂದ್ರೆ ಪ್ರತಿಯೊಬ್ಬರು ಕೂಡ ಅಡುಗೆಯಲ್ಲಿ ಈರುಳ್ಳಿಯನ್ನು ಬಳಸಿಯೇ ಬಳಸುತ್ತಾರೆ. ಮನುಷ್ಯನ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತಹ ಶಕ್ತಿ ಈರುಳ್ಳಿಗಿದೆ. ಏಕೆಂದರೆ ಪ್ರತಿ ದಿನ ನಾವು ಸೇವಿಸುವ ಆಹಾರದಲ್ಲಿ ತುಂಬಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಮ್ಮ ಹೃದಯದ ಕಾರ್ಯವನ್ನು ಹಠಾತ್ತನೆ ಸ್ಥಗಿತಗೊಳಿಸಬಹುದು. ಆದ್ದರಿಂದ, ಈರುಳ್ಳಿಯ ಸೇವನೆಯಿಂದ ಈ ಸಮಸ್ಯೆಯಿಂದ ಪಾರಾಗಬಹುದು.

ಆದರೆ ಈರುಳ್ಳಿಯನ್ನು ಸರಿಯಾಗಿ ಗಮನಿಸಿದವರಿಗೆ ಖರೀದಿಸುವಾಗ ಗಮನಿಸಿಕೊಳ್ಳಬೇಕು. ಕೆಲವೊಂದು ಬಾರಿ ಈರುಳ್ಳಿಗಳಲ್ಲಿ ಕಪ್ಪುಚುಕ್ಕೆಯಿರುತ್ತದೆ. ಹೆಚ್ಚಿನವರಿಗೆ ಈ ಈರುಳ್ಳಿ ತಿಂದ್ರೆ ಆರೋಗ್ಯಕ್ಕೆ ಉತ್ತಮವೇ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹಾಗಾಗಿ ಇದರ ಕುರಿತಾದ ಮಾಹಿತಿ ನಾವು ತಿಳಿಸಿಕೊಡುತ್ತೇವೆ ನೋಡಿ.

ಈರುಳ್ಳಿ ಸಿಪ್ಪೆಯನ್ನು ತೆಗೆಯುವಾಗ ಇರುವ ಕಪ್ಪು ಶಿಲೀಂಧ್ರವನ್ನು (Black spotted onion) ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲಾಗುತ್ತದೆ. ಈ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ. ಇದು ಮ್ಯೂಕೋರ್ಮೈಕೋಸಿಸ್ ಅಲ್ಲ. ಈರುಳ್ಳಿ ಬಿಟ್ಟರೆ, ಫ್ರಿಜ್ ಅನ್ನು ಹಲವಾರು ದಿನಗಳವರೆಗೆ ಸ್ವಚ್ಛಗೊಳಿಸದಿದ್ದರೆ ಇದನ್ನು ನೋಡಬಹುದು. ಹಾಗಾಗಿ ಕಪ್ಪು ಚುಕ್ಕೆಯಿರುವ ಈರುಳ್ಳಿಯ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡಬಹುದು. ಹೀಗಾಗಿ ಇಂಥಾ ಈರುಳ್ಳಿಯನ್ನು ಖರೀದಿಸೋದು ಒಳ್ಳೆಯದಲ್ಲ.

ಹಾಗೆಯೇ ಈರುಳ್ಳಿ ನಮ್ಮ ದೇಹದಲ್ಲಿ ಎದುರಾಗುವ ಕೆಲವೊಂದು ಅಲರ್ಜಿ ಸಮಸ್ಯೆಗಳು ಎಂದರೆ ಕಣ್ಣಿನ ಕೆರೆತ, ಗಂಟಲು ಕೆರೆತ ಮತ್ತು ಮೂಗು ಸೋರುವುದು ಅಂದರೆ ನೆಗಡಿಗಳಿಗೆ ಪರಿಹಾರವಾಗಿದೆ. ದೇಹದಲ್ಲಿ ಬಿಡುಗಡೆಗೊಳ್ಳುವ ಹಿಸ್ಟಮಿನ್ ಹಾರ್ಮೋನಿನ ಜೊತೆಗೆ ಕೆಲವೊಂದು ಇನ್ಫಾಮೇಟರಿ ಮತ್ತು ಅಲರ್ಜಿಗೆ ಕಾರಣವಾಗುವಂತಹ ಅಂಶಗಳು ಬಿಡುಗಡೆಯಾಗುವುದನ್ನು ತಡೆಯುತ್ತದೆ.

ಹಾಗೆಯೇ ಕ್ಯಾನ್ಸರ್ ತಪ್ಪಿಸಲು ಈರುಳ್ಳಿಗಳು ನಮ್ಮ ಆಹಾರದಲ್ಲಿ ಸೇರ್ಪಡೆಗೊಂಡರೆ, ಅವುಗಳಲ್ಲಿರುವ ಆರ್ಗನೋ ಸಲ್ಫರ್ ಅಂಶಗಳು ನಮ್ಮ ದೇಹಕ್ಕೆ ಉತ್ತಮವಾಗಿ ಕೆಲಸ ಮಾಡುತ್ತವೆ. ಅರಿಶಿಣದ ಜೊತೆ ಈರುಳ್ಳಿಯ ಮಿಶ್ರಣ ಮಾಡಿ ಸೇವಿಸುವುದರಿಂದ ಕರುಳಿನ ಕ್ಯಾನ್ಸರ್ ಸಮಸ್ಯೆ ಉಂಟಾಗುವುದಿಲ್ಲ.

Leave A Reply

Your email address will not be published.