Bedroom Secret: ಬೆಡ್ ರೂಮ್ ಗುಟ್ಟನ್ನ ರಟ್ಟುಮಾಡ್ಕೊಂಡ್ರು ಬಾಲಿವುಡ್ನ ಈ ಜೋಡಿಗಳು! ಒಂಚೂರೂ ಮುಚ್ಚು ಮರೆ ಇಲ್ದೆ ಏನೆಲ್ಲಾ ಹೇಳ್ಕೊಂಡ್ರು ಗೊತ್ತಾ?

Bedroom Secret: ಸಿನಿಮಾ ಕ್ಷೇತ್ರ ಯಾವಾಗಲೂ ಮುಕ್ತವಾಗಿರುವಂತದ್ದು. ಇಲ್ಲಿ ಯಾವುದೂ ಗೌಪ್ಯವಾಗಿರುವುದಿಲ್ಲ. ನಟ ನಟಿಯರ ನಾಲ್ಕು ಗೋಡೆಗಳ ನಡುವೆ ಇರುವ ಗುಟ್ಟುಗಳು ಕೂಡ ಇಲ್ಲಿ ಕೆಲವು ಜಗಜ್ಜಾಹೀರ ಆಗಿಬಿಡ್ತವೆ. ಇದಿಲ್ಲಿ ಮಾಮೂಲು. ಅಲ್ಲದೆ ಕೆಲ ನಟ ನಟಿಯರು ಕೆಲವೊಮ್ಮೆ ತಮ್ಮ ಖಾಸಗೀ ವಿಚಾರಗಳೆಲ್ಲವನ್ನು ಸೋಷಿಯಲ್ಸ್ ಮುಂದೆ ಹೇಳಿಬಿಡುತ್ತಾರೆ. ಇದರಲ್ಲಿ ಬೆಡ್​ರೂಂ ರಹಸ್ಯ (Bedroom Secret)ಕೂಡ ಒಂದಾಗಿರುತ್ತದೆ! ಅರೆ ಈ ವಿಚಾರವೆಲ್ಲಾ ಈಗ್ಯಾಕೆ ಇಲ್ಲಿ ಹೇಳ್ತಿದ್ದಾರೆ ಅನ್ಕೊಂಡ್ರಾ? ಅದಕ್ಕೂ ಕಾರಣವಿದೆ. ಯಾಕೆಂದ್ರೆ ಇತ್ತೀಚಿನ ದಿನಗಳಲ್ಲಿ ಕೆಲವು ತಾರೆಯರು ತಮ್ಮ ಮಂಚದ ವಿಷಯವನ್ನು ಬೇರೆ ಬೇರೆ ರಿಯಾಲಿಟಿ ಷೋಗಳಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಿದ್ರೆ ಅವರು ಏನು ಹೇಳಿದ್ದಾರೆ ಗೊತ್ತಾ? ನೀವೆ ನೋಡಿ.

 

ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ತಮ್ಮ ಮಲಗುವ ಕೋಣೆಯ ರಹಸ್ಯವನ್ನು ಹಂಚಿಕೊಂಡಿದ್ದರು. ಬೆಡ್​ರೂಂ ವಿಷಯದ ಬಗ್ಗೆ ಅವರನ್ನು ಕೇಳಿದಾಗ, ‘ಇದು ನಿಜವಾಗಿಯೂ ಕಿರಿಕಿರಿ ವಿಷಯ. ಆದರೆ ಪತಿ ನಿಕ್ ನಾನು ಎದ್ದಾಗ ನನ್ನ ಮುಖವನ್ನು ನೋಡಬೇಕೆಂದು ಒತ್ತಾಯಿಸುತ್ತಾನೆ. ಅದಕ್ಕೇ ನಾನು ಸ್ವಲ್ಪ ವೇಟ್​ ಮಾಡಿ. ಕೊನೆ ಪಕ್ಷ ಮಸ್ಕರಾ ಮತ್ತು ಮಾಯಿಶ್ಚರೈಸರ್ ಹಚ್ಚಿಕೊಂಡು ಬರುತ್ತೇನೆ ಎನ್ನುತ್ತೇನೆ’ ಎಂದು ಹೇಳಿಕೊಂಡಿದ್ದರು.

ಇನ್ನು ಹಾಟೆಸ್ಟ್​ ತಾರೆ ಎಂದೇ ಪ್ರಸಿದ್ಧರಾಗಿರುವ ಮಲೈಕಾ ಅರೋರಾ (Malaika Arora). ಸದಾ ಬಿಕಿನಿ ಡ್ರೆಸ್ (Bikini Dress) ​ನಿಂದಲೇ ಪ್ರಚಾರದಲ್ಲಿ ಇರುವ ಮಲೈಕಾ ಅವರ ವಯಸ್ಸು 49. 1998 ರಲ್ಲಿ ಅರ್ಬಾಜ್​ ಖಾನ್​ ಅವರನ್ನು ಮದುವೆಯಾಗಿ ವಿಚ್ಛೇದನ ಪಡೆದು, ಕೊನೆಗೆ ತಮಗಿಂತ ತೀರಾ ಚಿಕ್ಕವರಾಗಿರುವ ನಟ ಅರ್ಜುನ್​ ಕಪೂರ್ (Arujun Kapoor) ಜೊತೆ ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದಾರೆ. ಇವರು ಕೂಡ ತಮ್ಮ ಮಂಚದ ವಿಷಯವನ್ನು ಶೇರ್​ ಮಾಡಿಕೊಂಡಿದ್ದಾರೆ. ನೇಹಾ ಧೂಪಿಯಾ ಅವರ ಷೋನಲ್ಲಿ, ನಟಿ ಮಲೈಕಾ ಅವರ ನೆಚ್ಚಿನ ಲೈಂಗಿಕ ಸ್ಥಾನದ ಬಗ್ಗೆ ಕೇಳಿದಾಗ, ಅವರು ಉನ್ನತ ಸ್ಥಾನದಲ್ಲಿರಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ. ಇದನ್ನು ತಾನು ತುಂಬಾ ಇಷ್ಟಪಡುವುದಾಗಿ ಖುಲ್ಲಂಖುಲ್ಲಾ ಆಗಿ ಹೇಳಿದ್ದಾರೆ.

ಇನ್ನು ರಣವೀರ್​ ಸಿಂಗ್ (Ranbeer Singh)​ ದೀಪಿಕಾ ಪಡುಕೋಣೆ (Deeepika Padukone)ಅವರು ಮದುವೆಯ ಸಮಯದಲ್ಲಿ ನಡೆದಿರುವ ರಹಸ್ಯವನ್ನು ಈಗ ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್ 7’ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದದಾರೆ. ತಮ್ಮ ಹನಿಮೂನ್ ಬಗ್ಗೆ ಅವರು ಮಾತನಾಡಿದ್ದರು. ರಣವೀರ್ ಅವರು ಹನಿಮೂನ್‌ನಲ್ಲಿ ತುಂಬಾ ಉತ್ಸುಕರಾಗಿದ್ದರು ಮತ್ತು ತುಂಬಾ ಸಂತೋಷವಾಗಿದ್ದೆ ಎಂದು ಹೇಳಿದ್ದಾರೆ. ಸೆಕ್ಸ್ ಲಿಸ್ಟ್ ಕೂಡ ಮಾಡಿದ್ದೇನೆ ಎಂದು ರಣವೀರ್ ಖುಲ್ಲಖುಲ್ಲಾ ಆಗಿ ಹೇಳಿಕೊಂಡಿದ್ದರು. ಹನಿಮೂನ್‌ನಲ್ಲಿ ಲೈಂಗಿಕತೆ (Sex) ಹೊಂದಿದ್ದನ್ನು ಒಪ್ಪಿಕೊಂಡಿದ್ದಲ್ಲದೆ, ವ್ಯಾನಿಟಿ ವ್ಯಾನ್‌ನಲ್ಲಿ (Vanity Van) ದೀಪಿಕಾ ಜೊತೆ ಮಾಡಿದ ರೊಮಾನ್ಸ್​ ಬಗ್ಗೆಯೂ ಬಹಿರಂಗಪಡಿಸಿದ್ದರು. ಅದೇ ರೀತಿ ದೀಪಿಕಾ ಕೂಡ ಹೇಳಿಕೊಂಡಿದ್ದರು. ರಣವೀರ್ ಸಿಂಗ್ ಸೌಂದರ್ಯದ ರಹಸ್ಯಗಳು ಯಾವುವು ಎಂದು ಅವರನ್ನು ಕೇಳಲಾಗಿತ್ತು. ಅಗ ಅವರು ‘ರಣವೀರ್ ದೀರ್ಘ ಸ್ನಾನ ಮಾಡುತ್ತಾನೆ, ಟಾಯ್ಲೆಟ್​ನಲ್ಲಿ (Toilet) ದೀರ್ಘಕಾಲ ಇರುತ್ತಾನೆ, ಅವನು ಹಾಸಿಗೆಯ ಮೇಲೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾನೆ’ ಎಂದು ಹೇಳಿದ್ದರು.

ನಟ ರಣಬೀರ್ ಕಪೂರ್ ಕಪೂರ್​ (Ranbeer Kapoor) ಅವರೊಂದಿಗೆ ಕಳೆದ ಏಪ್ರಿಲ್​ನಲ್ಲಿ ಮದುವೆಯಾಗಿ, ನವೆಂಬರ್​ನಲ್ಲಿ ತಾಯಿಯಾಗಿರುವ ಆಲಿಯಾ ಭಟ್​ (Alia Bhatt) ಕೂಡ ತಮ್ಮ ಬೆಡ್​ರೂಂ ರಹಸ್ಯವನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ‘ಲೈಂಗಿಕ ವಿಷಯದಲ್ಲಿ ನಾನು ಜೀವನದಲ್ಲಿ ತುಂಬಾ ಸರಳ ವ್ಯಕ್ತಿ’ ಎಂದು ಹೇಳಿದ್ದರು. ಅವರ ನೆಚ್ಚಿನ ಲೈಂಗಿಕ ಸ್ಥಾನದ ಬಗ್ಗೆ ಕೇಳಿದಾಗ, ‘ಮಿಷನರಿ’ ಎಂದು ಉತ್ತರಿಸಿದ್ದರು. ರಣಬೀರ್ ಕಪೂರ್ ಸಂಭಾಷಣೆಯ ಸಮಯದಲ್ಲಿ ಆಲಿಯಾ ಜೊತೆ ಹಾಸಿಗೆ ಹಂಚಿಕೊಳ್ಳುವಾಗ ತುಂಬಾ ಕಷ್ಟಪಡಬೇಕಾಗುತ್ತದೆ ಎಂದು ಬಹಿರಂಗಪಡಿಸಿದ್ದರು. ‘ಅವಳು ಮಲಗಿದಾಗ ಬರೀ ಹೊರಳಾಡುತ್ತಾ ಇರುತ್ತಾಳೆ. ಆದ್ದರಿಂದ ಎಷ್ಟು ದೊಡ್ಡ ಹಾಸಿಗೆ ಇದ್ದರೂ ಅದು ಅವಳಿಗೆ ಚಿಕ್ಕದ್ದೇ ಆಗುತ್ತದೆ’ ಎಂದು ಅವರು ಹೇಳಿದ್ದರು.

ಬಾಲಿವುಡ್​ನ ಎವರ್​ಗ್ರೀನ್​ ಬ್ಯಾಚುಲರ್​ ಸಲ್ಮಾನ್ ಖಾನ್ (Salman Khan) ತಮ್ಮ ಬೆಡ್​ರೂಂ ವಿಷಯವನ್ನು ಶೇರ್​ ಮಾಡಿದ್ದಾರೆ. ಇವರು ತಮ್ಮದು ಮಾತ್ರವಲ್ಲದೆ ಶಾರುಖ್ ಖಾನ್ (Shah Rukh Khan) ಅವರ ಬೆಡ್ ರೂಮ್ ರಹಸ್ಯವನ್ನೂ ಬಹಿರಂಗಪಡಿಸಿದ್ದಾರೆ. ತಾನು ಹಾಸಿಗೆಯ ಬದಲು ನೇರವಾಗಿ ಮಂಚದ ಮೇಲೆ ಮಲಗಲು ಹೆಚ್ಚು ಇಷ್ಟಪಡುತ್ತೇನೆ ಅದಕ್ಕಾಗಿ ಒಂಟಿಯಾಗಿದ್ದೇನೆ ಎಂದಿದ್ದರೆ, ಶಾರುಖ್ ಖಾನ್ ಅವರ ಬೆಡ್ ರೂಮ್ ರಹಸ್ಯವನ್ನು ಹೇಳಿದ ಸಲ್ಮಾನ್ ಆತ ತುಂಬಾ ಗೊರಕೆ ಹೊಡೆಯುತ್ತಾನೆ ಎಂದು ತಮಾಷೆ ಮಾಡಿದ್ದಾರೆ.

Leave A Reply

Your email address will not be published.