Weird Love : ಈತನಿಗೆ ಕಾರಿನ ಮೇಲೆ ಪ್ರೀತಿ ಮಾತ್ರವಲ್ಲ, ಸಾಂಸಾರಿಕ ಸಂಬಂಧ ಕೂಡಾ ಇದೆ !
Relationship with Car : ಈ ಕಣ್ಣಲ್ಲಿ ಇನ್ನೇನು ನೋಡಬೇಕೋ, ಏನೇನು ಕೇಳಬೇಕೋ ? ಆ ದೇವರಿಗೆ ಗೊತ್ತು…ಏಕೆಂದರೆ, ಯುನೈಟೆಡ್ ಸ್ಟೇಟ್ಸ್‌ನ ಅರ್ಕಾನಸ್ ಮೂಲದ ನಥಾನಿಯಲ್ ಎಂಬ ವ್ಯಕ್ತಿಯೋರ್ವನಿಗೆ ಕಾರಿನ ಮೇಲೆ ಪ್ರೀತಿ (Relationship with Car) ಹುಟ್ಟಿದೆ. ಅದೂ ಸಾಮಾನ್ಯ ಪ್ರೀತಿ ಅಲ್ಲ, ಲೈಂಗಿಕತೆ ಕೂಡಾ ಇದೆ.
ಸ್ವಂತ ಕಾರು ಖರೀದಿಸಬೇಕೆಂಬ ಆಸೆ ಎಲ್ಲರಿಗೂ ಇದೆ. ಈ ನಥಾನಿಯಲ್ ಎಂಬಾತ ಕಾರಿನ ಮೇಲಿಟ್ಟಿರುವ ಆಸೆಯೇ ಬೇರೆ. ಅಸಲಿಗೆ ಕಾರು ನಮಗೆಲ್ಲ ಒಂದು ವಸ್ತುವಾಗಿ ಕಂಡರೆ, ಈತನಿಗೆ ತನ್ನ ಬಾಳ ಸಂಗಾತಿಯಾಗಿ ಕಂಡಿದೆ. ಕಾರಿಗೆ ದಾಸನಾಗಿರುವ ನಥಾನಿಯಲ್, ಅದರ ಜೊತೆ ಸಂಸಾರ ಸುಖವನ್ನು ಅನುಭವಿಸುತ್ತಿದ್ದಾನಂತೆ. ನಥಾನಿಯಲ್ ಕುರಿತ ಒಂದು ಆಸಕ್ತಿದಾಯಕ ಸ್ಟೋರಿ ಇಲ್ಲಿದೆ.
ಜನರು ತಮಗೆ ಇಷ್ಟವಾದ ವಸ್ತುವಿನ ಜತೆ ಬಲವಾದ ಭಾವನೆ ಇಟ್ಟುಕೊಳ್ಳುವುದು ಅಥವಾ ಲೈಂಗಿಕ ಸಂಬಂಧವನ್ನು ಹೊಂದುವುದು. ಇದು ಪಾಶ್ಚಿಮಾತ್ಯ ಸಂಸ್ಕೃತಿಯ ಒಂದು ಭಾಗ. ಅನೇಕ ಜನರು ಈ ಗೀಳನ್ನು ಹೊಂದಿದ್ದು, ತಮ್ಮ ಅಚ್ಚುಮೆಚ್ಚಿನ ವಸ್ತುಗಳ ಜತೆ ಸಂಬಂಧವನ್ನು ಇಟ್ಟುಕೊಳ್ಳುತ್ತಾರೆ. ಇದನ್ನು ಕೇಳಲು ಒಂದು ರೀತಿ ಮುಜುಗರ ಅನಿಸಿದರೂ ಇದು ಸತ್ಯ ಇದನ್ನು ಆಭೆಕ್ಟೋಫಿಲಿಯಾ ಎಂದು ಕರೆಯುತ್ತಾರೆ.
ನಥಾನಿಯಲ್ ಹಾಡನ್ನು ಹೇಳುತ್ತಾ ಅದರ ಜತೆಗೆ ಲೈಂಗಿಕ ಸಂಭೋಗ ನಡೆಸುತ್ತಿದ್ದ ಎಂದು ಹೇಳಲಾಗಿದೆ.
ಈ ಬಗ್ಗೆ ಮಾತನಾಡಿರುವ ನಥಾನಿಯಲ್, 2005ರಲ್ಲಿ ಕಾರು ಡೀಲರ್‌ಶಿಪ್‌ನಲ್ಲಿ ಚೇಸ್‌ನನ್ನು ನೋಡಿದಾಗ ಮೊದಲ ನೋಟದಲ್ಲೇ ಪ್ರೀತಿಯಾಯಿತು. ಬಳಿಕ ಅದನ್ನು ಖರೀದಿಸಿ ಬಳಸಲು ಆರಂಭಿಸಿದ ಕೆಲ ದಿನಗಳ ನಂತರ ಪ್ರೀತಿ ರೊಮ್ಯಾಂಟಿಕ್ ಸಂಬಂಧಕ್ಕೆ ತಿರುಗಿತು. ಕೆಲವೊಮ್ಮೆ ದೈಹಿಕ ಸಂಬಂಧವು ನಮ್ಮಿಬ್ಬರ ನಡುವೆ ನಡೆದಿದೆ. ನಾನು ನನ್ನ ಕಾರಿನ ಜತೆ ತುಂಬಾ ಗಾಢವಾದ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳಿದರು.
ತನ್ನ ಹದಿಹರೆಯದಿಂದಲೂ ನಥಾನಿಯಲ್‌ಗೆ ಕಾರುಗಳೆಂದರೆ ತುಂಬಾ ಪ್ರೀತಿಯಂತೆ. ಹಾಗಂತ ಈತನಿಗೆ ಹೆಣ್ಣುಮಕ್ಕಳ ಜೊತೆ ಪ್ರೀತಿ ಆಗಿಲ್ಲ ಅಂದುಕೊಳ್ಳಬೇಡಿ, ಹದಿಹರೆಯ ಏಳು ಗೆಳತಿಯರೊಂದಿಗೆ ಡೇಟಿಂಗ್ ಮಾಡಿದ್ದರಿಂದ ಕಾರಿನ ಬಗ್ಗೆ ಆತ ಹೆಚ್ಚು ಯೋಚಿಸುತ್ತಿರಲಿಲ್ಲವಂತೆ. ಯಾವಾಗ ಚೇಸ್ ಭೇಟಿಯಾದನೋ ಅಂದಿನಿಂದ ಅದರ ಪ್ರೀತಿಯಲ್ಲಿ ಮುಳುಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಕಾರಿನ ಜತೆ ರೊಮ್ಯಾಂಟಿಕ್ ಸಂಬಂಧ ಹೊಂದಿರುವ ವಿಡಿಯೋ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರ ಕುತೂಹಲಕ್ಕೆ ಕಾರಣವಾಗಿದೆ.