Jio Recharge Plan : ಇವು ಜಿಯೋ ಕಂಪನಿ ನೀಡಿರುವ ಬೆಸ್ಟ್‌ ರೀಚಾರ್ಜ್‌ ಪ್ಲ್ಯಾನ್‌ಗಳ ಲಿಸ್ಟ್‌ ! ಇಲ್ಲಿ ನೀವು ಡೇಟಾ ಕುರಿತು ಚಿಂತೆ ಬಿಡಿ!

JIO Recharge Plan : ಭಾರತದ ಟೆಲಿಕಾಂ ಕಂಪನಿಗಳಲ್ಲಿ (Telecom Companies) ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್ (JIO), ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ ಆಯ್ಕೆಗಳನ್ನೂ ನೀಡುತ್ತಿದೆ. ಹಲವು ಪ್ರೀಪೇಯ್ಡ್​ ರೀಚಾರ್ಜ್​ ಯೋಜನೆಗಳನ್ನೂ (prepaid recharge plan) ಬಿಡುಗಡೆ ಮಾಡಿದೆ. ಇಲ್ಲಿವರೆಗೂ ಜಿಯೋ ​ಒದಗಿಸಿರುವ ರೀಚಾರ್ಜ್​​ ಪ್ಲ್ಯಾನ್ (JIO Recharge Plan) ನಲ್ಲಿ ಯಾವುದು ಬೆಸ್ಟ್ ಗೊತ್ತಾ? ಇಲ್ಲಿದೆ ಜಿಯೋನ ಬೆಸ್ಟ್​ ರೀಚಾರ್ಜ್​​ ಯೋಜನೆಗಳು (JIO best Recharge Plans).

2999 ರೂ ರೀಚಾರ್ಜ್​ ಪ್ಲ್ಯಾನ್​ :
ಜಿಯೋ ನ ಈ ಪ್ರೀಪೇಯ್ಡ್‌ ರೀಚಾರ್ಜ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಇದೀಗ ಹೆಚ್ಚುವರಿ 23 ದಿನಗಳ ವ್ಯಾಲಿಡಿಟಿ ಅವಧಿಯೂ ಲಭ್ಯವಾಗುತ್ತದೆ. ಹಾಗಾದಾಗ ಈ ರೀಚಾರ್ಜ್ ಯೋಜನೆಯ ಅವಧಿ ಒಟ್ಟು 388 ದಿನಗಳವರೆಗೆ ಇದೆ. 2999 ರೂ ರೀಚಾರ್ಜ್​ ಪ್ಲ್ಯಾನ್ ನಲ್ಲಿ ಗ್ರಾಹಕರು ಪ್ರತಿದಿನ 2.5ಜಿಬಿ ಡೇಟಾ ಪ್ರಯೋಜನ ಪಡೆಯಬಹುದು. ಅನ್ಲಿಮಿಟೇಡ್ ವಾಯ್ಸ್​ ಕರೆ ಹಾಗೂ ಪ್ರತಿದಿನ ಉಚಿತವಾಗಿ 100 ಎಸ್ಎಮ್ಎಸ್ ಲಭ್ಯವಾಗುತ್ತದೆ. ಅಲ್ಲದೆ, ಈ ಯೋಜನೆಯಲ್ಲಿ ಜಿಯೋ ಆ್ಯಪ್ಸ್​ಗಳನ್ನು ಉಚಿತವಾಗಿ ಬಳಸಬಹುದು.

2879 ರೂ. ರೀಚಾರ್ಜ್​ ಪ್ಲ್ಯಾನ್​ :
ಜಿಯೋ ದ ಬೆಸ್ಟ್ ರೀಚಾರ್ಜ್​ ಪ್ಲ್ಯಾನ್ ನಲ್ಲಿ ಇದೂ ಒಂದು. ಈ ಯೋಜನೆಯ ವ್ಯಾಲಿಡಿಟಿ ಅವಧಿ 365 ದಿನಗಳು ಆಗಿದ್ದು, ಪ್ರತಿದಿನ 2 ಜಿಬಿ ಡೇಟಾ ಲಭ್ಯವಿದ್ದು, ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನ್ಲಿಮಿಟೇಡ್ ವಾಯ್ಸ್​ ಕರೆ ಹಾಗೂ ಪ್ರತಿದಿನ ಉಚಿತವಾಗಿ 100 ಎಸ್ಎಮ್ಎಸ್ ಸೌಲಭ್ಯ ಲಭ್ಯವಾಗುತ್ತದೆ.

899 ರೂ‌. ಪ್ರೀಪೇಯ್ಡ್‌ ಪ್ಲಾನ್ :
ಈ ಯೋಜನೆಯು 90 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದೆ. ಗ್ರಾಹಕರು ದೈನಂದಿನ 2.5 ಜಿಬಿ ಡೇಟಾ ಸೌಲಭ್ಯ ಪಡೆಯಬಹುದು. ಅಲ್ಲದೆ, ಅನಿಯಮಿತ​ ವಾಯ್ಸ್​ ಕರೆಯ ಸೌಲಭ್ಯ ಲಭ್ಯ. ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ ಹಾಗೂ ಈ ಯೋಜನೆಯಲ್ಲಿ ಜಿಯೋ ಆ್ಯಪ್​ಗಳನ್ನು ಉಚಿತವಾಗಿ ಬಳಸಬಹುದು.

719 ರೂ. ಪ್ರೀಪೇಯ್ಡ್‌ ಪ್ಲ್ಯಾನ್ :
ಜಿಯೋ ದ ಈ ಯೋಜನೆಯೂ ಬೆಸ್ಟ್ ಆಗಿದ್ದು, ಜಿಯೋ ಬಳಕೆದಾರರಿಗೆ ಉತ್ತಮ ಸೇವೆ ಒದಗಿಸುತ್ತದೆ. ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಬಳಕೆದಾರರಿಗೆ ಪ್ರತಿದಿನ 2ಜಿಬಿ ಡೇಟಾ ಪ್ರಯೋಜನ ಒದಗಿಸುತ್ತದೆ. ಜೊತೆಗೆ ಪ್ರತಿದಿನ ಉಚಿತವಾಗಿ 100 ಎಸ್ಎಮ್ಎಸ್ ಸೌಲಭ್ಯ, ಅನಿಯಮಿತ ಉಚಿತ ವಾಯ್ಸ್​ ಕರೆಗಳೂ ಇದ್ದು, ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಜಿಯೋ ಆ್ಯಪ್​ಗಳ ಸೌಲಭ್ಯ ಕೂಡ ಪಡೆಯಬಹುದು.

Leave A Reply

Your email address will not be published.