ದ.ಕ : ವಿವಿಧ ಗ್ರಾ.ಪಂ.ಉಪ ಚುನಾವಣೆ ಹಿನ್ನೆಲೆ, ಮದ್ಯ ಮಾರಾಟ ನಿಷೇಧ

Liquor Sale Ban : ಮಂಗಳೂರಿನಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ ಹಿನ್ನಲೆಯಲ್ಲಿ ಮದ್ಯ ಮಾರಾಟವನ್ನು ನಿಷೇಧ ಮಾಡಿದ್ದಾರೆ. ಮದ್ಯ ಮಾರಾಟ ನಿಷೇಧ ( Liquor Sale Ban) ವನ್ನು ಯಾವಾಗ ಯಾವ ದಿನದಂದು ಮಾಡಲಾಗಿದೆ ಎಂಬುದರ ಕಂಪ್ಲೀಟ್‌ ವಿವರ ಈ ಕೆಳಗೆ ನೀಡಲಾಗಿದೆ.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ ನಡೆಯಲಿರುವ ಕಾರಣದಿಂದ ಮತದಾನದ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಿನಾದ್ಯಂತ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದೆ.

ಫೆ.24ರ ಬೆಳಗ್ಗೆ ಗಂಟೆ 6 ರಿಂದ ಫೆ.25ರ ಸಂಜೆ ಚುನಾವಣೆ ಮುಗಿಯುವ ಸಮಯದವರೆಗೆ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟ ಮಾಡದಂತೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌.ಆದೇಶ ಮಾಡಿದ್ದಾರೆ.

ಫೆಬ್ರವರಿ 24 ಮತ್ತು ಫೆಬ್ರವರಿ 25ರಂದು, ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪುದು-1ರಿಂದ 10ಕ್ಷೇತ್ರಗಳು, ಬಂಟ್ವಾಳ ತಾಲೂಕಿನ 43-ಅನಂತಾಡಿಯ ಗ್ರಾಮ ಪಂಚಾಯತ್‌ 2- ಅನಂತಾಡಿ, ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‌ನ 1-ಬಲ್ಯ ಹಾಗೂ ಪುತ್ತೂರು ತಾಲೂಕಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ 4- ಆರ್ಯಾಪುವಿನಲ್ಲಿ ಚುನಾವಣೆ ನಡೆಯಲಿದೆ.

ಹಾಗಾಗಿ ಈ ವ್ಯಾಪ್ತಿಯಲ್ಲಿ ಫೆ.24ಮತ್ತು ಫೆ.25ರಂದು ಮದ್ಯಪ್ರಿಯರಿಗೆ ಮದ್ಯ ಸಿಗುವುದಿಲ್ಲ. ಮದ್ಯ ಪ್ರಿಯರು ಮದ್ಯ ಬೇಕಾದಲ್ಲಿ ಹಿಂದಿನ ದಿನವವೇ ಖರೀದಿಸಿಡಬೇಕಾಗಿದೆ. ಎರಡು ದಿನ ಮದ್ಯವಿಲ್ಲದೆ ಇರಲು ಸಾಧ್ಯವಾಗದಿರುವವರು ಇಂದಿನಿಂದಲೇ ಪ್ಲ್ಯಾನ್‌ ಮಾಡಬೇಕಾಗುತ್ತದೆ.

Leave A Reply

Your email address will not be published.