ಪರಪುರುಷನ ಹಿಂದೆ ಬಿದ್ದ ಹೆಂಡತಿ, ವಿಚಾರಿಸಲು ಹೋದ ಗಂಡ ದಿಢೀರ್‌ ಸಾವು ! ಕುಟುಂಬಸ್ಥರಿಂದ ದೂರು ದಾಖಲು

Husband and Wife : ಹೆಂಡತಿಯನ್ನು ನೋಡಲೆಂದು ಹೆಂಡತಿ ಮನೆಗೆ ಹೋಗಿದ್ದ ಪತಿಯೋರ್ವ ನಿಗೂಢವಾಗಿ ಮೃತಪಟ್ಟಿರುವ ಘಟನೆಯೊಂದು ಬೆಂಗಳೂರಿನ ವೈಯಾಲಿ ಕಾವಲ್‌  ಎಂಬಲ್ಲಿ ನಡೆದಿದೆ. ವಿನೋದ್‌ ಕುಮಾರ್‌ ಎಂಬಾತನೇ ಮೃತಪಟ್ಟ ವ್ಯಕ್ತಿ. ವಿನೋದ್‌ ಕುಟುಂಬಸ್ಥರು ತನ್ನ ಮಗನ ಸಾವಿಗೆ ಆತನ ಹೆಂಡತಿಯೇ ಕಾರಣ ಎಂದು ಹೇಳಿ ದೂರು ದಾಖಲು ಮಾಡಿದ್ದಾರೆ. ಹೆಂಡತಿ ಪರಪುರುಷನ ಹಿಂದೆ ಸುತ್ತಾಡುತ್ತಿದ್ದು, ಇದನ್ನು ವಿಚಾರಿಸಲು ಹೋದ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಮೃತ ವ್ಯಕ್ತಿಯ ಮನೆಯವರು ಆರೋಪ ಮಾಡಿದ್ದಾರೆ.

ಪ್ರೀತಿಸಿ ಮದುವೆಯಾದರೂ ಸಂಸಾರ ಉಳಿಯಲಿಲ್ಲ

ಸುಮಾರು 10 ವರ್ಷದ ಹಿಂದೆ ವಿನೋದ್‌ ಕುಮಾರ್‌ ಮತ್ತು ನಿರ್ಮಲಾ ( Husband and Wife) ವಿವಾಹವಾಗಿದ್ದರು. ಇವರಿಬ್ಬರು ಪ್ರೇಮ ವಿವಾಹವಾಗಿದ್ದು, ಇವರ ಪ್ರೀತಿಯ ನೆನಪಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಆದರೆ ಇತ್ತೀಚೆಗೆ ಯಾಕೋ ಗಂಡ ಹೆಂಡತಿ ಯಾವುದೋ ವಿಷಯಕ್ಕೆ ತುಂಬಾ ಗಲಾಟೆ ಮಾಡುತ್ತಿದ್ದರೆಂದು ವರದಿಯಾಗಿದೆ. ಹಾಗಾಗಿ ಸಿಟ್ಟಿನಿಂದ ಹೆಂಡತಿಯೇ ಗಂಡನನ್ನು ಮನೆ ಬಿಟ್ಟು ಓಡಿಸಿರುವ ವರದಿಯಾಗಿದೆ. ಹಾಗಾಗಿ ವಿನೋದ್‌ ಕೆಆರ್‌ಪುರಂನಲ್ಲಿರುವ ತನ್ನ ಮನೆಯಲ್ಲಿ ತಾಯಿ ಜೊತೆ ಉಳಿದುಕೊಂಡಿದ್ದ. ಆದರೆ ಇತ್ತೀಚೆಗೆ ಅಂದರೆ ಸುಮಾರು ಹದಿನೈದು ದಿನದ ಹಿಂದೆ ನಿರ್ಮಲಾಗೆ ಆಕ್ಸಿಡೆಂಟ್‌ ಆಗಿದೆ ಎಂದು ತಿಳಿದು ಹೆಂಡತಿಯನ್ನು ನೋಡಲು ಹೋಗಿದ್ದ ಈತ, ನಿಮ್ಹಾನ್ಸ್‌ನಲ್ಲಿ ದಾಖಲು ಮಾಡಿಸಿದ್ದ. ಆದರೆ ನಿರ್ಮಲಾಳ ಬಳಿ ಈ ಆಕ್ಸಿಡೆಂಟ್‌ ಬಗ್ಗೆ ಕೇಳಿದಾಗ, ಸತ್ಯನಾರಾಯಣ ಪೂಜೆಗೆ ಹೋಗಿದ್ದಾಗ ಆಟೋ ಚಾಲಕ ಆಕ್ಸಿಡೆಂಟ್‌ ಮಾಡಿದ್ದ ಎಂಬ ಸಬೂಬು ಹೇಳಿದ್ದಳಂತೆ. ಆದರೆ ಈ ಪೆಟ್ಟು ಬಿದ್ದ ಅಸಲಿಯತ್ತು ಬೇರೆನೇ ಇತ್ತು ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಹೆಂಡತಿಯ ಅನೈತಿಕ ಸಂಬಂಧದ ಶಂಕೆ

ನಿರ್ಮಲಾಗೆ ಮದುವೆಯಾಗಿದ್ದರೂ ಕಿರಣ್‌ ಎಂಬಾತನೊಂದಿಗೆ ಸಂಬಂಧವಿದ್ದು, ಆತನಿಗೂ ಮದುವೆಯಾಗಿದ್ದು ಮಕ್ಕಳಿದ್ದಾರೆ. ಆದರೂ ಇವರಬ್ಬರೂ ತಮ್ಮ ಕಳ್ಳಾಟ ಮುಂದುವರಿಸಿದ್ದಾರೆ. ಹಾಗಾಗಿ ಒಂದು ದಿನ ಬೈಕ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ನಂದಿಹಿಲ್ಸ್‌ಗೆ ಹೋಗಿ ಬರುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ. ಮೂಲಗಳ ಪ್ರಕಾರ, ನಿರ್ಮಲಾ ಗಾಡಿ ಓಡಿಸುತ್ತಿದ್ದು, ಟಿಪ್ಪರ್‌ಗೆ ಗುದ್ದಿದ್ದಾಳೆ ಎಂದು ವಿನೋದ್‌ ಕುಟುಂಬದವರು ತೀವ್ರವಾಗಿ ಆರೋಪ ಮಾಡಿದ್ದಾರೆ.

ವಿನೋದ್‌ ಕುಟುಂಬಸ್ಥರಿಂದ ದೂರು ದಾಖಲು

ಈ ವಿಷಯವೆಲ್ಲ ಗೊತ್ತಾದ ಮೇಲೆ ತೀವ್ರವಾಗಿ ಗಂಡ ವಿನೋದ್‌ ನೊಂದಿದ್ದ. ಆದರೂ ಆತ ತನ್ನ ಹೆಂಡತಿಗೆ ಬುದ್ಧಿವಾದ ಹೇಳಿ, ನಾವು ಬೇರೆ ಕಡೆ ಹೋಗಿ ಸಂಸಾರ ಮಾಡುವ, ನೆಮ್ಮದಿಯಾಗಿರುವ ಎಂದು ಕೂಡಾ ಹೇಳಿದ್ದನಂತೆ. ಈ ಮಾತನ್ನು ಆತ ತನ್ನ ಅಕ್ಕನಿಗೆ ಕೂಡಾ ಹೇಳಿದ್ದಾಗಿ ವರದಿಯಾಗಿದೆ. ಹಾಗಾಗಿ ಮತ್ತೆ ಹೆಂಡತಿ ಜೊತೆ ಮಾತನಾಡಲೆಂದು ಹೋಗಿದ್ದು, ಆದರೆ ಆತ ಫೋನ್‌ ಸಂಪರ್ಕಕಕ್ಕೆ ಸಿಕ್ಕಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತುಂಬಾ ಹೊತ್ತಿನವರೆಗೆ ಕರೆ ಮಾಡಿದ ನಂತರ ಸಂಜೆ ನಿರ್ಮಲಾ ಕರೆ ಸ್ವೀಕರಿಸಿದ್ದಾಳೆ. ಆವಾಗ ವಿನೋದ್‌ ಆಸಿಡ್‌ ಕುಡಿದಿದ್ದಾನೆಂದು ಹೇಳಿದ್ದಾಳೆ. ಆದರೆ ಆಸ್ಪತ್ರೆಗೆ ದಾಖಲು ಮಾಡಿದರೂ ವಿನೋದ್‌ ಬದುಕುಳಿಯಲಿಲ್ಲ. ಈ ಘಟನೆ ಕುರಿತು ವೈಯಾಲಿಕಾವಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಮಲಾ ಮನೆಮಂದಿ ವಿರುದ್ಧ ವಿನೋದ್‌ ಕುಟುಂಬಸ್ಥರು ಕೊಲೆ ಆರೋಪ ಹೊರಿಸಿ ದೂರು ದಾಖಲು ಮಾಡಿದ್ದಾರೆ.

 

 

Leave A Reply

Your email address will not be published.