Youtuber issue: ಯಾವ ತರ ಮಲಗಿದ್ರೆ ಜಾಸ್ತಿ ಖುಷಿ ಸಿಗುತ್ತೆ? ಯುವತಿಯ ಡಬಲ್ ಮೀನಿಂಗ್ ಪ್ರಶ್ನೆಗೆ ಸಿಟ್ಟಿಗೆದ್ದ ಆಟೋ ಡ್ರೈವರ್ಸ್!

Youtuber: ಇಂದು ಹಲವಾರು ಯೂಟ್ಯೂಬರ್ಸ್(You tubers)ಗಳು ಬೇರೆ ಬೇರೆ ಸ್ಥಳಗಳಿಗೆ ಹೋಗಿ ಅಲ್ಲಿನ ಜನರಲ್ಲಿ ವಿಭಿನ್ನವಾದ, ವಿಚಿತ್ರವಾದ ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲರನ್ನೂ ಮನರಂಜಿಸುತ್ತಿದ್ದಾರೆ. ಇನ್ನು ಕೆಲವರು ಶಾಲಾ, ಕಾಲೇಜಗಳು ಇರುವೆಡೆ ಹೋಗಿ ಡಬಲ್ ಮೀನಿಂಗ್(Duble Meaning)ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳನ್ನು ಪೇಚಿಗೆ ಸಿಲುಕಿಸುತ್ತಾರೆ. ಕೊನೆಯಲ್ಲಿ ತಾವೇ ಉತ್ತರ ಹೇಳಿ ಎಲ್ಲರೂ ನಗುವಂತೆ ಮಾಡುತ್ತಾರೆ. ಸದ್ಯ ಇದು ಒಂದು ರೀತಿಯ ಟ್ರೆಂಡ್ ಆಗಿದೆ. ಆದರೆ ಇಲ್ಲೊಂದೆಡೆ ಯೂಟ್ಯೂಬರ್ ಒಬ್ಬಳು ತಮಾಷೆ ಮಾಡಲು ಹೋಗಿ, ಅದು ಅಮಾಸೆಯಾಗಿ, ಆಟೋ ಚಾಲಕರ(Auto Drivers)ಕೈಲಿ ತಗುಲಾಕಿಕೊಂಡಿದ್ದಾಳೆ. ಬಳಿಕ ಈ ಪ್ರಕರಣ ಪೋಲೀಸ್(Police Station)ಸ್ಟೇಷನ್ ಮೆಟ್ಟಿಲನ್ನೂ ಏರಿದೆ!

 

ಹೌದು, ಓರ್ವ ಮಹಿಳಾ ಯೂಟ್ಯೂಬರ್ ಮತ್ತು ಸ್ಥಳೀಯ ಆಟೋ ಚಾಲಕರ ನಡುವಿನ ವಾಗ್ವಾದ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ಇದೀಗ ಕೇರಳ(Kerala)ದಲ್ಲಿ ನಡೆದಿದೆ. ಆ ಯೂಟ್ಯೂಬರ್ ಹುಡುಗಿ, ನಾನು ಬರೀ ಪ್ರಶ್ನೆ ಕೇಳಿದ್ದಕ್ಕೆ ಆಟೋ ಚಾಲಕರೆಲ್ಲಾ ಸೇರಿ ತನ್ನ ಮೇಲೆ ಹಲ್ಲೆ ಮಾಡಿದರೆಂದು ಪೋಲೀಸರಿಗೆ ದೂರು ನೀಡಿದ್ದಾಳೆ. ಇದಕ್ಕೆ ಪ್ರತಿಯಾಗಿ ಆಟೋ ಚಾಲಕರು ಸಹ ಪ್ರತ್ಯಾರೋಪ ಮಾಡಿ ಆಕೆಯ ಮೇಲೆ ದೂರು ನೀಡಿದ್ದಾರೆ. ಅಷ್ಟಕ್ಕೂ ಆಕೆ ಕೇಳಿದ ಪ್ರಶ್ನೆಯಾದರೂ ಏನು ಗೊತ್ತೆ?

ಕಳೆದ ಕೆಲವು ತಿಂಗಳುಗಳಿಂದ ಈ ಮಹಿಳಾ ಯೂಟ್ಯೂಬರ್ ಮತ್ತು ಆಕೆಯ ತಂಡದವರು ಶಾಲಾ ಮತ್ತು ಕಾಲೇಜಿನ ಮಕ್ಕಳ ಬಳಿ ತೆರಳಿ, ಮೇಲೆ ಅಥವಾ ಕೆಳಗೆ ಮಲಗುವುದಾದರೆ ಹೇಗೆ ಮಲಗುವುದು ಉತ್ತಮ? ಹೇಗೆ ಮಲಗೋದ್ರಿಂದ ಖುಷಿ ಸಿಗುತ್ತೆ? ಮುಟ್ಟಿನ(Period) ಸಂದರ್ಭದಲ್ಲಿ ಕಾಲೇಜು ಮತ್ತು ಮದುವೆಗೆ ಹೋಗಬಹುದಾದರೆ, ದೇವಸ್ಥಾನಕ್ಕೆ ಯಾಕೆ ಹೋಗಬಾರದು? ಎಂಬಂತೆ ಅನೇಕ ಡಬಲ್​ ಮೀನಿಂಗ್​ ಹಾಗೂ ಗೊಂದಲಮಯ ಪ್ರಶ್ನೆಗಳನ್ನು ಕೇಳುತ್ತಿದ್ದರಂತೆ.

ಈ ವಿಚಾರವನ್ನು ಅಲ್ಲಿನ ಪ್ರಯಾಣಿಕರು, ತಮಗೆ ಪರಿಚಯಸ್ಥರಾದ ಸ್ಥಳೀಯ ಆಟೋ ಚಾಲಕಲಿಗೆ ತಿಳಿಸಿದ್ದಾರೆ. ಸುದ್ದಿ ಹರಡುತ್ತ ದೊಡ್ಡದಾಗಿದೆ. ಬಳಿಕ ಆಟೋ ಚಾಲಕರು ಮಹಿಳಾ ಯೂಟ್ಯೂಬರ್​ನನ್ನು ವಿಚಾರಣೆ ಮಾಡಿದ್ದಾರೆ. ಇಂತಹ ಕೆಟ್ಟ ಪ್ರಶ್ನೆಗಳನ್ನು ಕೇಳುವುದು ಒಳ್ಳೆಯದಲ್ಲ ಎಂದು ತಿಳಿಸಿ ಹೇಳಿದ್ದಾರೆ. ಆದರೆ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ವ್ಯವಧಾನ ತೋರದ ಯೂಟ್ಯೂಬರ್ ಆಟೋ ಚಾಲಕರ ಮೇಲೆ ಕೋಪಗೊಂಡು ಕೆಟ್ಟ ಪದಗಳಿಂದ ನಿಂದಿಸಿದ್ದಾಳೆ. ಇದು ಮಾತಿಗೆ ಮಾತು ಬೆಳೆದು ಪೋಲೀಸ್ ಸ್ಟೇಷನ್ ತನಕ ಹೋಗಿದೆ.

ಮಹಿಳಾ ಯೂಟ್ಯೂಬರ್(Youtuber) ಪೋಲೀಸ್ ಠಾಣೆಗೆ ತೆರಳಿ, ಪ್ರಶ್ನೆ ಮಾಡಿದ್ದಕ್ಕೆ ಅಲುವಾದ(Aluvada) ಮೆಟ್ರೋ ನಿಲ್ದಾಣ(Metro station) ಬಳಿ ಆಟೋ ಚಾಲಕರ ಗುಂಪು ಹಲ್ಲೆ ಮಾಡಿದರು ಎಂದು ಆರೋಪ ಮಾಡಿದ್ದಾಳೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಟೋ ಚಾಲಕರು ಯುವತಿಯೇ ನಮ್ಮ ಮೇಲೆ ಕೋಪದಿಂದ ಕೆಟ್ಟದಾಗಿ ವರ್ತಿಸಿದರು. ಅಲ್ಲದೆ, ಕೆಟ್ಟ ಪದಗಳಿಂದ ನಮ್ಮನ್ನು ನಿಂದಿಸಿದರು ಎಂದು ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಆಟೋ ಚಾಲಕರು ‘ಮಕ್ಕಳೊಂದಿಗೆ ಈ ರೀತಿ ಅಸಭ್ಯವಾಗಿ ಪ್ರಶ್ನೆ ಕೇಳೋದು ಸರಿಯಲ್ಲ. ಹೀಗಾಗಿ ನಾವು ಯುವತಿಗೆ ತಿಳಿ ಹೇಳಿದೆವು. ನಮ್ಮ ಬುದ್ಧಿ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ತಾಳ್ಮೆ ಆಕೆಗೆ ಇರಲಿಲ್ಲ. ಕೆಟ್ಟ ಪದಗಳಿಂದೆಲ್ಲಾ ಬೈದಳು. ನಾವು ಅವಳ ತಂದೆಯ ಸಮಾನ ವಯಸ್ಸಿನವರಾದರೂ ಕೂಡ ಬಾಯಿಗೆ ಬಂದಂತೆ ನಿಂದಿಸಿದಳು’ ಎಂದು ಹೇಳಿದ್ದಾರೆ.

Leave A Reply

Your email address will not be published.