ಬೋಳು ತಲೆ ಸಮಸ್ಯೆ ನಿವಾರಣೆಗೆ ಈ 5 ಮನೆಮದ್ದುಗಳು ತುಂಬಾ ಉತ್ತಮ!

Bald Head Health Tips : ಬೋಳು ತಲೆ (bald Head) ಸಮಸ್ಯೆ ಹೆಚ್ಚಿನವರಿಗೆ ಕಂಡುಬರುತ್ತದೆ. ಮೊದ ಮೊದಲು ಕೊಂಚ ಕೂದಲು ಉದುರುತ್ತಾ ಹೋಗಿ ಈ ಸಮಸ್ಯೆ ಹೆಚ್ಚಾದಂತೆ ಬೋಳು ತಲೆ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ, ಆರಂಭಿಕ ಲಕ್ಷಣಗಳ ಮೂಲಕವೇ ಪರಿಹಾರ ಕಂಡುಕೊಳ್ಳುವುದು ಉತ್ತಮ.

ತಲೆಯಿಂದ ಬಹಳಷ್ಟು ಕೂದಲು ಉದುರಲು ಪ್ರಾರಂಭಿಸುವುದು ಬೋಳುತನದ ಮೊದಲ ಲಕ್ಷಣವಾಗಿದೆ. ವ್ಯಕ್ತಿಯ ತಲೆಕೂದಲು ಬೋಳಾಗುವಾಗ ಕೂದಲು ಒಂದು ನಿರ್ದಿಷ್ಟ ರೀತಿಯಲ್ಲಿ ಉದುರಲು ಆರಂಭವಾಗುತ್ತದೆ.

ಉದಾಹರಣೆಗೆ ಕೆಲವರಿಗೆ ತಲೆಯ ಮಧ್ಯಭಾಗದಿಂದ ಕೂದಲು ಉದುರಬಹುದು ಇಲ್ಲವೇ ಮುಂಭಾಗದಿಂದ ಕೂದಲು ಉದುರಬಹುದು ಅಥವಾ ತೇಪೆಗಳ ರೂಪದಲ್ಲಿ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಈ ಎಲ್ಲಾ ಸ್ಥಳಗಳ ಕೂದಲು ಏಕಕಾಲದಲ್ಲಿ ಬೀಳುವುದಿಲ್ಲ ಎಂಬುದನ್ನು ಗಮನಿಸಬೇಕು. ಆದರೆ ಒಂದು ಸ್ಥಳದ ಕೂದಲು ವಿಪರೀತವಾಗಿ ಬೀಳಲು ಆರಂಭಿಸಿ ಹೆಚ್ಚು ಕೂದಲು ಉದುರಿ ಬೋಳು ಸಮಸ್ಯೆ ಉಂಟಾಗುತ್ತದೆ.

ಬೋಳು ತಲೆ ಸಮಸ್ಯೆ (Bald head Problems) ಉಂಟಾಗಲು ಕೆಲವು ಕಾರಣಗಳಿವೆ.

ಬೋಳಾಗುವ ಸಮಯದಲ್ಲಿ, ಕೂದಲು ಬೀಳುವ ಸ್ಥಳಗಳಲ್ಲಿ ನೀವು ತುರಿಕೆ ಇಲ್ಲವೇ ಸೌಮ್ಯವಾದ ನೋವನ್ನು ಕೂಡ ಅನುಭವಿಸಬಹುದು. ಸಾಮಾನ್ಯವಾಗಿ ಈ ಸಮಸ್ಯೆ ನೆತ್ತಿಯ ಬೋಳುಗಳಲ್ಲಿ ಕಂಡು ಬರಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಗಡ್ಡ ಮತ್ತು ಹುಬ್ಬುಗಳಲ್ಲಿಯೂ ಈ ಸಮಸ್ಯೆ ಕಂಡುಬರುತ್ತದೆ.

ಅನುವಂಶಿಕತೆ ಹಾಗೂ ಪೌಷ್ಟಿಕಾಂಶದ ಕೊರತೆ ಅಥವಾ ದೈಹಿಕ ದೌರ್ಬಲ್ಯದಿಂದ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಮಾನಸಿಕ ಒತ್ತಡ ಕೂಡ ಈ ಸಮಸ್ಯೆ ಉಂಟು ಮಾಡಬಹುದು. ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಅಥವಾ ವೃತ್ತಿಪರ ಜೀವನದ ಒತ್ತಡ ಕೂಡಾ ಕೂದಲು ಉದುರಲು ಕಾರಣವಾಗುತ್ತದೆ.

ಹಾಗಿದ್ರೆ, ಇದಕ್ಕೆ ಪರಿಹಾರೋಪಾಯಗಳೇನು? ಉತ್ತರ ಇಲ್ಲಿದೆ ನೋಡಿ! ಇಲ್ಲಿದೆ ಕೆಲವೊಂದು ಬೋಳು ತಲೆ ಆರೋಗ್ಯ ಪರಿಹಾರಗಳು ( Bald head health tips).

ಎಣ್ಣೆಯಿಂದ ಮಸಾಜ್ ಮಾಡುವುದು (Oil Massage) : ಕೂದಲು ಉದುರುವ ಸಮಸ್ಯೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಗೆ ಹೆಚ್ಚು ಮುಜುಗರ ಉಂಟು ಮಾಡಬಹುದು. ಪೌಷ್ಟಿಕಾಂಶದ ಕೊರತೆ ಕೂಡ ಕೂದಲು ಉದುರಲು ಕಾರಣವಾಗುತ್ತದೆ. ಇದರ ಜೊತೆಗೆ ದೇಹಕ್ಕೆ ಹೆಚ್ಚಿನ ಒತ್ತಡ ಉಂಟಾಗಿ ನಿದ್ರಾ ಹೀನತೆ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ.

ಹೀಗಾಗಿ, ನೀವು ನಿಯಮಿತವಾಗಿ ನಿಮ್ಮ ನೆತ್ತಿಯನ್ನು ಎಣ್ಣೆಯಿಂದ ಮಸಾಜ್ (Oil Massage) ಮಾಡುವ ಕ್ರಮ ಅನುಸರಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಒತ್ತಡ ಕಡಿಮೆಯಾಗಿ ನಿದ್ರಾಹೀನತೆ ಸಮಸ್ಯೆ ಕೂಡ ಕಮ್ಮಿಯಾಗಿ ರಕ್ತ ಸಂಚಾರ ಕೂಡ ಸರಾಗವಾಗಿ ನಡೆಯುತ್ತದೆ.

ಪ್ರೋಟೀನ್ ಯುಕ್ತ ಆಹಾರ ಸೇವನೆ
ಕೂದಲು ಉದುರಲು ಪೋಷಕಾಂಶಗಳ ಕೊರತೆ ಕೂಡ ಕಾರಣವಾಗುತ್ತದೆ. ಹೀಗಾಗಿ, ನೀವು ನಿಯಮಿತವಾಗಿ ಪ್ರೋಟೀನ್ ಮತ್ತು ವಿಟಮಿನ್‌ ಗಳಿರುವ ಆಹಾರ ಸೇವನೆ ಮಾಡುವುದು ಒಳ್ಳೆಯದು. ದೈನಂದಿನ ಜೀವನದಲ್ಲಿ, ಕಾಳುಗಳು, ಮೊಳಕೆ ಕಾಳುಗಳು, ಹುರಿದ ಕಾಳುಗಳು ಮತ್ತು ಒಣ ಹಣ್ಣುಗಳನ್ನು ಸೇವಿಸಿ.

ಇದು ಉತ್ತಮ ಕೂದಲು ಬೆಳವಣಿಗೆಗೆ ಸಹಕಾರಿಯಾಗಲಿದೆ. ಪ್ರತಿದಿನದ ಆಹಾರದಲ್ಲಿ ಒಂದು ಲೋಟ ಹಾಲು, ಒಂದು ಲೋಟ ಮಜ್ಜಿಗೆ ಮತ್ತು ಒಂದು ಲೋಟ ಮೊಸರು ಸೇರಿಸಿ ಕುಡಿಯುವುದು ಕೂಡ ಒಳ್ಳೆಯದು.

ಮೆಂತ್ಯ
ಮೆಂತ್ಯವು ಪ್ರೋಟೀನ್, ಕಬ್ಬಿಣ ಮತ್ತು ನಿಕೋಟಿನಿಕ್ ಆಮ್ಲವನ್ನು ಒಳಗೊಂಡಿರುತ್ತದೆ. ಮೆಂತ್ಯದ ನೈಸರ್ಗಿಕ ಎಣ್ಣೆಯ ಬಳಕೆ ಮಾಡಿದರೆ ಕೂದಲಿಗೆ ಹೊಳಪು ಹೆಚ್ಚುವುದಲ್ಲದೆ ಕೂದಲು ಒಡೆಯದಂತೆ ರಕ್ಷಣೆ ನೀಡಿ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.

ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ
ಪ್ರತಿ ಅಹಾರ ಪದಾರ್ಥಗಳಲ್ಲಿ ಹೆಚ್ಚು ಬಳಕೆಯಾಗುವ ಈರುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು ಹೆಚ್ಚಿನವರಿಗೆ ತಿಳಿದಿದೆ. ಶೀತ ಕೆಮ್ಮು ಗಂಟಲಿನ ಬೇನೆ ಹೀಗೆ ಅನೇಕ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಕೂದಲಿನ ಬೇರುಗಳಿಗೆ ಈರುಳ್ಳಿ ರಸವನ್ನು ಹಚ್ಚುವುದರಿಂದ ನೆತ್ತಿಯು ಪ್ರೋಟೀನ್ ಕೆರಾಟಿನ್ ಅನ್ನು ಪಡೆದುಕೊಂಡು ಕೂದಲಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಇದಲ್ಲದೆ ಈರುಳ್ಳಿಯಲ್ಲಿ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತ ನಿವಾರಕ ಅಂಶಗಳು ಹೇರಳವಾಗಿವೆ. ಇದು ಕೂದಲಿನ ಬಲವನ್ನು ಹೆಚ್ಚಿಸುವ ಜೊತೆಗೆ ನೆತ್ತಿಯ ಸಮಸ್ಯೆಗಳಿಗೆ ಪರಿಹಾರ ನೀಡಲು ನೆರವಾಗುತ್ತದೆ.

ಗ್ರೀನ್ ಟೀ( Green Tea) : ಟೀ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ! ದಿನನಿತ್ಯದ ಆಹಾರ ಕ್ರಮದಲ್ಲಿ ಟೀ ಕುಡಿಯುವ ಅಭ್ಯಾಸ ಹೆಚ್ಚಿನವರು ರೂಡಿಸಿಕೊಂಡಿರುತ್ತಾರೆ. ಇದೇ ರೀತಿ ಗ್ರೀನ್ ಟೀ ಕುಡಿಯುವ ಅಭ್ಯಾಸ ಕೂಡ ಕೆಲವರಿಗಿದೆ. ಗ್ರೀನ್ ಟೀ ಕೂದಲಿನ ಆರೋಗ್ಯ ಕಾಪಾಡುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಗ್ರೀನ್‌ ಟೀ ಬ್ಯಾಗ್ ಗಳನ್ನು ಹೇರ್ ಮಾಸ್ಕ್ ಆಗಿ ಬಳಸಿದರೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಬಹುದು.

ಅಷ್ಟೇ ಅಲ್ಲದೆ,ಗ್ರೀನ್‌ ಟೀ ದೇಹದ ಚಯಾಪಚಯವನ್ನು ಸುಧಾರಿಸುವ ಜೊತೆಗೆ ದೇಹದ ಕೊಬ್ಬನ್ನು ಕಡಿಮೆ ಮಾಡಲು ನೆರವಾಗುತ್ತವೆ. ನೀವು ಕೂಡ ಬೋಳು ತಲೆ ಸಮಸ್ಯೆಯಿಂದ ಬಳಲುತ್ತಿದ್ದರೆ ಮೇಲೆ ತಿಳಿಸಿದ ಸರಳ ವಿಧಾನ ಅನುಸರಿಸಿ ಪರಿಹಾರ ಕಂಡುಕೊಳ್ಳಬಹುದು.

Leave A Reply

Your email address will not be published.