Facebook : ಫೇಸ್‌ಬುಕ್‌ ಬಳಕೆದಾರರಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ ! ಇನ್ನು ಈ ಸೇವೆಗೆ ನೀವು ದುಡ್ಡು ತೆರಬೇಕು!!!

Facebook : ಮುಂದಿನ ದಿನಗಳಲ್ಲಿ ಫೇಸ್‌ಬುಕ್(Facebook )ಮತ್ತು ಇನ್‌ಸ್ಟಾಗ್ರಾಂ(Instagram )ವೆರಿಫೈಡ್ ಖಾತೆಯ ಬಳಕೆದಾರರು ಕೆಲವು ವಿಶೇಷ ವೈಶಿಷ್ಟ್ಯಗಳನ್ನು ಪಡೆಯಲಿದ್ದಾರೆ. ಹೌದು ಟ್ವಿಟರ್‌ನಂತೆಯೇ(twitter )ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಜಾಲತಾಣಗಳಲ್ಲಿಯೂ ಸಹ ಪಾವತಿ ಮಾಡಿ ‘ಬ್ಲೂಟಿಕ್’ (blue tick )ಪಡೆಯಬಹುದಾದ ಹೊಸ ಚಂದಾದಾರಿಕೆ ಸೇವೆ ಆರಂಭ ಆಗಲಿದೆ. ಆದರೆ ಈ ಹೊಸ ಬದಲಾವಣೆ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ಭಾನುವಾರದಂದು ಘೋಷಣೆ ಮಾಡಿದ್ದು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ವೆರಿಫೈಡ್ ಖಾತೆಗಳಿಗೆ ಮಾಸಿಕ ಚಂದಾದಾರಿಕೆ ಶುಲ್ಕ ವಿಧಿಸುವುದಾಗಿ ತಿಳಿಸಿದ್ದಾರೆ.

ಸದ್ಯ ಪ್ರಾಯೋಗಿಕ ಹಂತವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಈ ಯೋಜನೆಯನ್ನು ಆರಂಭಿಸುವುದಾಗಿ ಹೇಳಿರುವ ಮಾರ್ಕ್ ಜುಕರ್‌ಬರ್ಸ್ ಅವರು, “ಈ ಹೊಸ ಫೀಚರ್ನಿಂದ ನಮ್ಮ ಸೇವೆಗಳನ್ನು ನೀಡುತ್ತೇವೆ. ಜೊತೆಗೆ ಸುರಕ್ಷತೆಯನ್ನು ಹೆಚ್ಚಿಸುತ್ತೇವೆ,” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ (post )ಮಾಡಿದ್ದಾರೆ.

ಶೀಘ್ರದಲ್ಲೇ ಇದು ಭಾರತ ಮತ್ತು ಇತರ ದೇಶಗಳಲ್ಲಿಯೂ ಜಾರಿಗೆ ಬರಲಿದೆ ಎಂದು ತಿಳಿಸಿದ್ದು, ಇನ್ನು ಮೆಟಾ ತರುತ್ತಿರುವ ಈ ಚಂದಾದಾರಿಕೆ ಸೇವೆಯ ಬಗ್ಗೆ ಸಹ ಮಾಹಿತಿ ನೀಡಲಾಗಿದ್ದು, ಒಬ್ಬರ ಖಾತೆಯನ್ನು ದೃಢೀಕರಿಸಲು ಮೊಬೈಲ್ ಗೆ ತಿಂಗಳಿಗೆ $11.99 ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಲಾಗಿದೆ. ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ, ನೀವು ತಿಂಗಳಿಗೆ 900 ರೂ. ಪಾವತಿಸಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗೆ ‘ಬ್ಲೂ ಟಿಕ್’ ಪಡೆಯಬಹುದು. ಇನ್ನು ವೆಬ್‌ಗೆ ತಿಂಗಳಿಗೆ $11.99 ಅಂದರೆ ಭಾರತೀಯ ರೂಪಾಯಿ ಮೌಲ್ಯ  991 ರೂ ಪಾವತಿ ಮಾಡಿದರೆ ಮಾತ್ರ ಬ್ಲೂ ಟಿಕ್ ಸಿಗಲಿದೆ ಎಂದು ತಿಳಿಸಲಾಗಿದೆ.

ಈ ಹೊಸ(new )ಬದಲಾವಣೆಯಿಂದ  ಗ್ರಾಹಕರು ಬ್ಲ್ಯೂ ಬ್ಯಾಡ್ಜ್ ಅನ್ನು ಪಡೆಯಬಹುದು ಮತ್ತು ನಿಮ್ಮ ಖಾತೆಗೆ(account )ಅಧಿಕ ಸುರಕ್ಷತೆಯನ್ನು ಕೂಡಾ ಪಡೆಯಬಹುದು. ಅದಲ್ಲದೆ ಗ್ರಾಹಕರ ಸೇವೆಯ ನೇರ ಪ್ರಯೋಜನವನ್ನು ಪಡೆಯಬಹುದು ಎಂದು ತಿಳಿಸಲಾಗಿದೆ.

Leave A Reply

Your email address will not be published.